ಕೊರೋನಾ ವೈರಸ್ ಕುರಿತ ಈ ಮಾಹಿತಿಗೆ ನೀವೂ ಬೆಚ್ಚಿಬೀಳಬಹುದು

ಇದೀಗ ಈ ಸಮಸ್ಯೆ ಕೇವಲ ಒಬ್ಬರಿಂದ ಒಬ್ಬರಿಗೆ ಹರಡುವುದರ ಮಟ್ಟಕ್ಕೆ ಮಾತ್ರ ಸೀಮಿತವಾಗಿರದೇ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದೆ.

Last Updated : Feb 28, 2020, 01:26 PM IST
ಕೊರೋನಾ  ವೈರಸ್ ಕುರಿತ ಈ ಮಾಹಿತಿಗೆ ನೀವೂ ಬೆಚ್ಚಿಬೀಳಬಹುದು title=

ನವದೆಹಲಿ: ಕೊರೊನಾ ವೈರಸ್ಸಿನ ಸೋಂಕು ಕೇವಲ ಚೀನಾದಲ್ಲಿಯೇ ಮಾತ್ರ ತನ್ನ ಪ್ರಭಾವ ಬೀರುತ್ತಿದೆ ಎಂದು ನೀವು ಕಳೆದ ಎರಡು ತಿಂಗಳಿನಿಂದ ಯೋಚಿಸುತ್ತಿರಬಹುದು. ಈ ವೈರಸ್ಸಿನ ಸೋಂಕು ತಗುಲಿದ ವ್ಯಕ್ತಿ ಇನ್ನೋರ್ವ ವ್ಯಕ್ತಿಗೆ ಸ್ಪರ್ಶಿಸಿದರೂ ಕೂಡ ಆ ವ್ಯಕ್ತಿಗೂ ಕೂಡ ಈ ಸೋಂಕು ಪಸರಿಸುತ್ತದೆ ಎಂಬುದೂ ಕೂಡ ನಿಮಗೆ ತಿಳಿದಿರಬಹುದು. ಇದೆ ಕಾರಣದಿಂದ ಬಹುತೇಕ ದೇಶಗಳು ಚೀನಾದಿಂದ ಸ್ವದೇಶಕ್ಕೆ ಮರಳುತ್ತಿರುವ ತಮ್ಮ ನಾಗರಿಕರನ್ನು ತೀವ್ರ ತಪಾಸಣೆಗೆ ಒಳಪಡಿಸುತ್ತಿವೆ. ಆದರೆ, ಇದೀಗ ಈ ಸಮಸ್ಯೆ ಕೇವಲ ಒಬ್ಬರಿಂದ ಒಬ್ಬರಿಗೆ ಹರಡುವುದರ ಮಟ್ಟಕ್ಕೆ ಮಾತ್ರ ಸೀಮಿತವಾಗಿರದೇ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದೆ. ಇತ್ತೀಚೆಗಷ್ಟೇ ಜರ್ಮನಿ ಹಾಗೂ ಅಮೆರಿಕಾದ ಕೆಲ ನಾಗರಿಕರಲ್ಲಿಯೂ ಕೂಡ ಕೋರೋನಾ ವೈರಸ್ ಪತ್ತೆಯಾಗಿದ್ದು, ಇವರು ಯಾರೂ ಕೂಡ ಚೀನಾ ಆಗಲಿ ಅಥವಾ ಇತರೆ ಯಾವುದೇ ದೇಶಕ್ಕೆ ಎಂದಿಗೂ ಕೂಡ ಪ್ರಯಾಣ ಬೆಳೆಸಿಲ್ಲ ಎನ್ನಲಾಗಿದೆ.

ಕೊರೊನಾ ವೈರಸ್ ಇದೀಗ ಎಲ್ಲಿ ಬೇಕಾದರೂ ಆಶ್ರಯ ಪಡೆದುಕೊಳ್ಳುತ್ತಿದೆ
ಅಮೆರಿಕಾ ಹಾಗೂ ಜರ್ಮನಿಯಲ್ಲಿ ಕೊರೊನಾ ವೈರಸ್ ನ ವಿಶಿಷ್ಟ ಪ್ರಕರಣಗಳು ಇದೀಗ ಬೆಳಕಿಗೆ ಬಂದಿವೆ. ಇಲ್ಲಿ ಈ ಸೋಂಕಿಗೆ ತುತ್ತಾಗಿರುವ ಜನರು ಎಂದಿಗೂ ಕೂಡ ಚೀನಾ ಆಗಲಿ ಅಥವಾ ಇತರೆ ಯಾವುದೇ ದೇಶಕ್ಕೆ ಪ್ರಯಾಣವೇ ಕೈಗೊಂಡಿಲ್ಲ. ಅಷ್ಟೇ ಯಾಕೆ ಇವರು ಈ ಸೋಂಕಿಗೆ ತುತ್ತಾದ ಜನರ ಸಂಪರ್ಕಕ್ಕೂ ಕೂಡ ಹೋಗಿಲ್ಲ. ಆದರೂ ಕೂಡ ಇವರಲ್ಲಿ ವೈರಸ್ ಸೋಂಕು ಪತ್ತೆಯಾಗಿದೆ. ವಿಜ್ಞಾನಿಗಳು ಈ ಪ್ರಕರಣಗಳನ್ನು ಗಂಭೀರವಾಗಿ ಪರಿಶೀಲಿಸುತ್ತಿದ್ದಾರೆ. ಅಷ್ಟೇ ಅಲ್ಲ ಈ ವೈರಸ್ ಖುದ್ದಾಗಿ ಎಲ್ಲಿ ಬೇಕಾದರೂ ಕೂಡ ಆಶ್ರಯ ಪಡೆಯುತ್ತಿದೆ ಎಂಬುದನ್ನು ವಿಜ್ಞಾನಿಗಳು ಇದೀಗ ಮನಗಂಡಿದ್ದಾರೆ. ಕೊರೊನಾ ವೈರಸ್ ಇದೀಗ ಸ್ಥಳೀಯ ರೂಪದಲ್ಲಿ ಆಶ್ರಯ ಪಡೆದುಕೊಳ್ಳಲು ಸಿದ್ಧವಾಗಿದೆ.

WHO ಕೂಡ ಇದನ್ನು ಒಪ್ಪಿಕೊಂಡಿದೆ
ಗುರುವಾರ ಈ ಕುರಿತು ಹೇಳಿಕೆ ನೀಡಿರುವ ವಿಶ್ವ ಆರೋಗ್ಯ ಸಂಸ್ಥೆ, ಕೊರೊನಾ ವೈರಸ್ ನ ನೂತನ ಪ್ರಕರಣಗಳ ವೃದ್ಧಿ ದರ ಚೀನಾ ಗಿಂತ ಇತರೆ ದೇಶಗಳಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಿದೆ. ಇದೆ ಮೊದಲ ಬಾರಿಗೆ ಈ ವೈರಸ್ ನ ನೂತನ ಪ್ರಕರಣಗಳು ಚೀನಾದ ಹೋಲಿಕೆಯಲ್ಲಿ ಹೊರದೇಶಗಳಿಂದ ಹೆಚ್ಚಾಗಿ ಕೇಳಿಬರುತ್ತಿವೆ. ಮಂಗಳವಾರ ಹೊರಬಿದ್ದ ಅಧಿಕೃತ ಅಂಕಿಅಂಶಗಳ ಪ್ರಕಾರ ಚೀನಾದಲ್ಲಿ ಒಟ್ಟು 411 ನೂತನ ಪ್ರಕರಣಗಳು ಬೆಳಕಿಗೆ ಬಂದಿದ್ದರೆ ಹೊರದೇಶಗಳಿಂದ ಸುಮಾರು 427 ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ.

Trending News