Asha Bhosle: ಸಂಗೀತ ಕ್ಷೇತ್ರದ ಜೀವಂತ ದಂತಕಥೆ, ಆಶಾ ಭೋಂಸ್ಲೆ, ಭರವಸೆಯ ಕಿರಣ, ಅವರ ಧ್ವನಿಯು ಒಮ್ಮೆ ಕಿವಿಗೆ ತಲುಪಿದರೆ ಅದು ಹೃದಯಕ್ಕೆ ಶಾಂತಿ ಮತ್ತು ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಇಂದು ಈ 'ಮೆಲೋಡಿ ರಾಣಿ'ಗೆ 91 ವರ್ಷ. ಈಕೆ ಕೇವಲ ಗಾಯಕಿ ಅಷ್ಟೆ ಅಲ್ಲ ಮಿಣುಕು ಕಂಠದ ರಾಣಿ ಆಶಾ ಭೋಂಸ್ಲೆ ಬಾಲಿವುಡ್ಗೆ ವಿಭಿನ್ನವಾದ ಗುರುತನ್ನು ನೀಡಿದವರು.
ಸಂಗೀತ ಕ್ಷೇತ್ರದ ಜೀವಂತ ದಂತಕಥೆ, ಆಶಾ ಭೋಂಸ್ಲೆ, ಭರವಸೆಯ ಕಿರಣ, ಅವರ ಧ್ವನಿಯು ಒಮ್ಮೆ ಕಿವಿಗೆ ತಲುಪಿದರೆ ಅದು ಹೃದಯಕ್ಕೆ ಶಾಂತಿ ಮತ್ತು ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಇಂದು ಈ 'ಮೆಲೋಡಿ ರಾಣಿ'ಗೆ 91 ವರ್ಷ. ಈಕೆ ಕೇವಲ ಗಾಯಕಿ ಅಷ್ಟೆ ಅಲ್ಲ ಮಿಣುಕು ಕಂಠದ ರಾಣಿ ಆಶಾ ಭೋಂಸ್ಲೆ ಬಾಲಿವುಡ್ಗೆ ವಿಭಿನ್ನವಾದ ಗುರುತನ್ನು ನೀಡಿದವರು.
ಆಶಾ ಭೋಂಸ್ಲೆ ಅವರು 'ಹೇ ಜುಮ್ಕಾ ಗಿರಾ ರೇ ಬರೇಲಿ ಕೆ ಬಜಾರ್ ಮೇ', 'ಮರ್ ಗಯಿ ಮುಜೆ ತೇರಿ ಜುದಾಯಿ', 'ಪಿಯಾ ತೂ ಅಬ್ ತೋ ಆಜಾ ಶೋಲಾ ಸಾ ಮನ್ ದಹಕೆ ಆಕೇ ಬುಜಾ ಜಾ' ಮುಂತಾದ ಅನೇಕ ಬ್ಲಾಕ್ಬಸ್ಟರ್ ಹಾಡುಗಳಿಗೆ ಸುಮಧುರ ರಾಗವನ್ನು ಸಂಯೋಜನೆ ಮಾಡಿದ್ದಾರೆ. ಆ ಹಾಡುಗಳೂ ಇಂದಿಗೂ ಕೂಡ ಅಷ್ಟೆ ಜನಪ್ರಿಯವಾಗಿದೆ.
ಹೀಗೆ ಸುಮಧುರ ಕಂಠ ಅದ್ಭುತ ಕರಿಯರ್ನಿಂದ ಕೂಡಿದ್ದ ಗಾಯಕಿಯ ಬಾಳಲ್ಲಿ ಕೂಡ ಅನೇಕ ಏರಿಳಿತಗಳಿದ್ದವು. ಆಶ್ ಭೋಂಸ್ಲೆ ಅವರ ಜೀವನದಲ್ಲಿ ಮೊದಲ ವಿವಾದ ಸಂಭವಿಸಿದ್ದು, ಆಕೆ ತನಗಿಂತ 15 ವರ್ಷ ಹಿರಿಯ ವ್ಯಕ್ತಿಯನ್ನು ಪ್ರೀತಿಸಿ 16ನೇ ವಯಸ್ಸಿನಲ್ಲಿ ತನ್ನ ಕುಟುಂಬದವರ ಇಚ್ಛೆಗೆ ವಿರುದ್ಧವಾಗಿ ಆತನನ್ನು ಮದುವೆಯಾದಾಗ. ಈ ಘಟನೆಯೇ ಅವರ ಅಕ್ಕ ಲತಾ ಮಂಗೇಶ್ಕರ್ ಅವರೊಂದಿಗಿನ ವಿವಾದಕ್ಕೆ ಪ್ರಮುಖ ಕಾರಣವಾಯಿತು.
ಆಶಾ ಭೋಂಸ್ಲೆಯವರ ಜೀವನವು ಅವರ ಹಾಡುಗಳಂತೆ ವಿನೋದಮಯವಾಗಿತ್ತು, ಕೆಲವೊಮ್ಮೆ ಗಂಭೀರವಾಗಿ ಮತ್ತು ಕೆಲವೊಮ್ಮೆ ಬಹಿರಂಗವಾಗಿ ಇವರು ನಿರಂತರವಾಗಿ ಸದಾ ಸುದ್ದಿಯಲ್ಲಿರುತ್ತಿದ್ದರು.
ಈ ಮಹಾನ್ ಗಾಯಕಿ ಎರಡು ಬಾರಿ ವಿವಾಹವಾದರು. ಕೇವಲ 16 ವರ್ಷದವಳಿದ್ದಾಗ ಮೊದಲ ಬಾರಿಗೆ ತಮ್ಮ ಸಹೋದರಿ ಲತಾ ಮಂಗೇಶ್ಕರ್ ಅವರ ಕಾರ್ಯದರ್ಶಿ ಗಣಪತ್ ರಾವ್ ಅವರನ್ನು ವಿವಾಹವಾದರು. ಈ ಮದುವೆಯಲ್ಲಿ ಲತಾ ಮಂಗೇಶ್ಕರ್ ಮತ್ತು ಅವರ ಕುಟುಂಬದವರು ಸಂತೋಷವಾಗಿರಲಿಲ್ಲ ಎನ್ನಲಾಗಿದೆ.
ಆದರೆ, ಗಣಪತ್ ರಾವ್ ಜತೆಗಿನ ಆಶಾ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ. ಕೆಲವು ದಿನಗಳ ನಂತರ ಇಬ್ಬರೂ ಬೇರ್ಪಟ್ಟರು. ಇದರ ನಂತರ, ಅವರು 1980 ರಲ್ಲಿ 47 ನೇ ವಯಸ್ಸಿನಲ್ಲಿ RD ಬರ್ಮನ್ ಅವರನ್ನು ಎರಡನೇ ಬಾರಿಗೆ ವಿವಾಹವಾದರು.
ಲತಾ ಮಂಗೇಶ್ಕರ್ ಮತ್ತು ಆಶಾ ಭೋಂಸ್ಲೆ ನಡುವಿನ ಸಂಬಂಧದ ಬಗ್ಗೆ ಮಾಧ್ಯಮಗಳಲ್ಲಿ ಬಹಳಷ್ಟು ವಿಷಯಗಲು ಬೆಳಕಿಗೆ ಬಂದಿದ್ದವು. ಎಲ್ಲಾ ವದಂತಿಗಳ ಹೊರತಾಗಿಯೂ ನಮ್ಮಿಬ್ಬರ ಸಂಬಂಧ ಚೆನ್ನಾಗಿದೆ ಎಂದು ಆಶಾ ಭೋಂಸ್ಲೆ ಒಮ್ಮೆ ಹೇಳಿದ್ದರು.
1940 ರ ದಶಕದಲ್ಲಿ ಬಾಲಿವುಡ್ ಉದ್ಯಮಕ್ಕೆ ಪಾದಾರ್ಪಣೆ ಮಾಡಿದ ಆಶಾ ಭೋಂಸ್ಲೆ ಕಳೆದ 8 ದಶಕಗಳಿಂದ ಗಾಯನ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಅವರಿಗೆ ಎರಡು ರಾಷ್ಟ್ರೀಯ ಪ್ರಶಸ್ತಿಗಳು ಸಂದಿವೆ. ಹಿಂದಿ, ಮರಾಠಿ, ತಮಿಳು ಮತ್ತು ಬಂಗಾಳಿ ಸೇರಿದಂತೆ ಹಲವು ಭಾಷೆಗಳಲ್ಲಿ ಹಾಡಿದ್ದಾರೆ.