ಆಧಾರ್ ರಕ್ಷಣಾ ಲೋಪದ ವರದಿ ಮಾಡಿದ ಪತ್ರಕರ್ತನಿಗೆ ಶಬ್ಬಾಶ್ ಹೇಳಿದ ಎಡ್ವರ್ಡ್ ಸ್ನೋಡೆನ್

     

Last Updated : Jan 9, 2018, 06:26 PM IST
ಆಧಾರ್ ರಕ್ಷಣಾ ಲೋಪದ ವರದಿ ಮಾಡಿದ ಪತ್ರಕರ್ತನಿಗೆ ಶಬ್ಬಾಶ್ ಹೇಳಿದ ಎಡ್ವರ್ಡ್ ಸ್ನೋಡೆನ್ title=

ನವದೆಹಲಿ:ಇತ್ತೀಚಿಗೆ ಆಧಾರ್ ಕಾರ್ಡ್ ವಿಚಾರವಾಗಿ ಅದರಲ್ಲಿನ ರಕ್ಷಣಾ ಲೋಪಗಳನ್ನು ಬಯಲುಗೊಳಿಸಿದ್ದ ಟ್ರಿಬ್ಯೂನ್ ಪತ್ರಿಕೆಯ ವರದಿಗಾರನ ಮೇಲೆ ಈ ಕುರಿತು ವರದಿಯನ್ನು ಮಾಡಿದ್ದಕ್ಕಾಗಿ ಅವರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದರು. ಈಗ ಪತ್ರಕರ್ತನ ಕಾರ್ಯಕ್ಕೆ ಮೆಚ್ಚಿ ಅಮೆರಿಕಾದ ಖ್ಯಾತ್ ಜಾಗ್ರತಿಕ ಎಡ್ವರ್ಡ್ ಸ್ನೋಡೆನ್ ಆ ಪತ್ರಕರ್ತನ ಬೆಂಬಲಕ್ಕೆ ನಿಂತಿದ್ದಾರೆ. 

ಈ ಕುರಿತಾಗಿ ಟ್ವೀಟ್ ಮಾಡಿರುವ ಸ್ನೋಡನ್  ಈ ರಕ್ಷಣಾ ಲೋಪದೋಷಗಳನ್ನು ಬಯಲು ಮಾಡಿರುವ ಪತ್ರಕರ್ತನಿಗೆ ಅವಾರ್ಡ್ ನೀಡಬೇಕೇ ಹೊರತು ತನಿಖೆಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಒಂದು ವೇಳೆ ಸರ್ಕಾರವು  ನಿಜಕ್ಕೂ ನ್ಯಾಯದ ಬಗ್ಗೆ ಕಳಕಳಿಯಿದ್ದರೆ ನೂರು ಕೋಟಿ ಭಾರತೀಯರ ಖಾಸಗಿಯತೆಯನ್ನು ಕಿತ್ತುಕೊಳ್ಳುವ ಕಾಯ್ದೆಯಲ್ಲಿ ಸುಧಾರಣೆ ತರಬೇಕಾಗಿದೆ. ಒಂದು ವೇಳೆ ಅಂತಹ ಲೋಪದೋಷಗಳಿಗೆ ಕಾರಣಕರ್ತರಾದವರನ್ನು  ಬಂಧಿಸಬೇಕೆಂದರೆ ಅವರು @UIDAIಯನ್ನು ಮೊದಲು ಬಂಧಿಸಬೇಕಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

Trending News