ದೆಹಲಿ ಹಿಂಸಾಚಾರ ಪೀಡಿತ ಪ್ರದೇಶಗಳ ದೃಶ್ಯ

ದೆಹಲಿಯ ಅನೇಕ ಪ್ರದೇಶಗಳಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಎಲ್ಲೆಡೆ ಭಾರಿ ಪೊಲೀಸ್ ಪಡೆಯ ನಿಯೋಜನೆ ಮಾಡಲಾಗಿದೆ.

  • Feb 26, 2020, 10:08 AM IST

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಿವಾದಾತ್ಮಕ ಪೌರತ್ವ ಕಾನೂನನ್ನು ವಿರೋಧಿಸಿ ನಡೆಯುತ್ತಿರುವ ಹಿಂಸಾಚಾರದಿಂದಾಗಿ ಇಡೀ ದೆಹಲಿ ಹೊತ್ತಿ ಉರಿಯುತ್ತಿದೆ. ದೆಹಲಿಯ ಅನೇಕ ಪ್ರದೇಶಗಳಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಎಲ್ಲೆಡೆ ಭಾರಿ ಪೊಲೀಸ್ ಪಡೆಯ ನಿಯೋಜನೆ ಮಾಡಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ದೆಹಲಿಯ ಹಲವು ಜಿಲ್ಲೆಗಳಲ್ಲಿ ಸೆಕ್ಷನ್ 144 ವಿಧಿಸಿದ್ದಾರೆ. ಹಿಂಸಾಚಾರದಲ್ಲಿ ಈವರೆಗೆ 17 ಜನರು ಸಾವನ್ನಪ್ಪಿದ್ದಾರೆ. ದಂಗೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ ಮಾತನಾಡಬೇಕೆಂದು ದೆಹಲಿ ಪೊಲೀಸ್ ಆಯುಕ್ತರು ನಿನ್ನೆ ಮನವಿ ಮಾಡಿದರು. ಅದೇ ಸಮಯದಲ್ಲಿ, ದೆಹಲಿಯ ಹದಗೆಡುತ್ತಿರುವ ಪರಿಸ್ಥಿತಿಗಳನ್ನು ಸುಧಾರಿಸಲು, ಗೃಹ ಸಚಿವಾಲಯದ ಸಭೆಯೂ ನಡೆಯುತ್ತಿದೆ.
 

1 /7

ಕಳೆದ ಎರಡು ದಿನಗಳಲ್ಲಿ, ಪೌರತ್ವ ಕಾನೂನಿನ ವಿರೋಧದ ಬೆಂಕಿ ಹಾನಿ ಮಾಡುತ್ತಿದೆ. ಸಾವಿರಾರು ಜನರು ಬೀದಿಗಿಳಿದು ಕಲ್ಲು ತೂರಾಟ ಮತ್ತು ಅಗ್ನಿಸ್ಪರ್ಶ ನಡೆಸಿದ್ದಾರೆ. ಇದರಿಂದಾಗಿ ಕೋಟ್ಯಂತರ ಮೌಲ್ಯದ ಸಾರ್ವಜನಿಕ ಆಸ್ತಿ ನಷ್ಟವಾಗುತ್ತಿದೆ.

2 /7

ದೆಹಲಿಯ ಯಮುನಾ ವಿಹಾರ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಭಾರಿ ಸೇನಾ ಪಡೆಗಳು ಸ್ಥಳದಲ್ಲೇ ಬೀಡು ಬಿಟ್ಟಿವೆ. ಸಾರ್ವಜನಿಕರು ರಸ್ತೆಗಿಳಿಯದೆ ಮನೆಯೊಳಗೆ ಇರಬೇಕೆಂದು ಪೊಲೀಸರು ಜನರನ್ನು ನಿರಂತರವಾಗಿ ಮನವಿ ಮಾಡುತ್ತಿದ್ದಾರೆ.  

3 /7

ಈ ಚಿತ್ರದೊಂದಿಗೆ ದೆಹಲಿಯ ದೃಶ್ಯದ ಕಲ್ಪನೆಯನ್ನು ನೀವು ಪಡೆಯಬಹುದು. ಇದರಿಂದ ನೀವು ಇಲ್ಲಿ ಎಷ್ಟು ಭಯಾನಕ ಕಲ್ಲು ತೂರಾಟ ನಡೆದಿರಬೇಕು ಮತ್ತು ಅದರಲ್ಲಿ ಎಷ್ಟು ಜನರು ಗಾಯಗೊಂಡಿರಬೇಕು ಎಂದು ಊಹಿಸಬಹುದು.

4 /7

ಪ್ರತಿಭಟನೆ ವೇಳೆ ಹಲವು ಗುಂಪುಗಳು ಅನೇಕ ಬಸ್ಸುಗಳು, ಟ್ರಕ್‌ಗಳು, ಬೈಕ್‌ಗಳಿಗೆ ಬೆಂಕಿ ಹಚ್ಚಿತು. ಗಲಭೆಕೋರರು ವಾಹನಗಳಿಗೆ ಬೆಂಕಿ ಹಚ್ಚಿದ ದೃಶ್ಯವನ್ನು ಈ ಚಿತ್ರಗಳು ಸ್ಪಷ್ಟವಾಗಿ ತೋರಿಸುತ್ತವೆ.

5 /7

ಪ್ರತಿಭಟನಾಕಾರರ ಮಧ್ಯೆ ಅಡಗಿದ್ದ ದಂಗೆಕೋರರು ರಸ್ತೆಬದಿಯಲ್ಲಿ ನಿಂತಿದ್ದ ಹಲವಾರು ಇ-ರಿಕ್ಷಾಗಳಿಗೆ ಬೆಂಕಿ ಹಚ್ಚಿ ದುಷ್ಕೃತ್ಯ ಮೆರೆದಿದ್ದಾರೆ.

6 /7

ದಂಗೆಕೋರರು ತಮ್ಮ ಬೆದರಿಸುವಿಕೆಯನ್ನು ತೋರಿಸಲು ಯಾವುದೇ ಅವಕಾಶವನ್ನು ಬಿಡಲಿಲ್ಲ. ಬಸ್ಸಿನ ಈ ಫೋಟೋ ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಪ್ರತಿಬಿಂಬಿಸುತ್ತದೆ.

7 /7

ದೆಹಲಿಯ ಚಂದ್ ಬಾಗ್‌ನಲ್ಲಿ ಗಲಭೆಕೋರರು ಪೆಟ್ರೋಲ್ ಪಂಪ್ ಅನ್ನು ಧ್ವಂಸ ಮಾಡಿದರು ಮತ್ತು ಅಲ್ಲಿನ ಅನೇಕ ಅಂಗಡಿಗಳಿಗೆ ಬೆಂಕಿ ಹಚ್ಚಿದರು.