ನವದೆಹಲಿ: ಭಾರತ್ ಸಂಚಾರ್ ನಿಗಮ್ ಪುನರುಜ್ಜೀವನದ ಕುರಿತಾದ ಕ್ಯಾಬಿನೆಟ್ ನಿರ್ಧಾರಗಳನ್ನು ಶೀಘ್ರವಾಗಿ ಅನುಷ್ಠಾನಗೊಳಿಸುವುದಕ್ಕಾಗಿ ಫೆಬ್ರವರಿ 24 ರಂದು ದೇಶಾದ್ಯಂತ ಉಪವಾಸ ಸತ್ಯಾಗ್ರಹ ನಡೆಸಲು ಬಿಎಸ್‌ಎನ್‌ಎಲ್ ನ ನೌಕರ ಸಂಘಟನೆ ನಿರ್ಧರಿಸಿದೆ
ಈ ಮುಷ್ಕರವು ನೌಕರರ ಕುಂದುಕೊರತೆಗಳನ್ನು ತ್ವರಿತವಾಗಿ ಬಗೆಹರಿಸಲು ಒತ್ತಡ ಹೇರುವ ಗುರಿಯನ್ನು ಹೊಂದಿದೆ ಎಂದು ಶನಿವಾರ ಇಲ್ಲಿ AUAB ಹೇಳಿಕೆಯೊಂದರಲ್ಲಿ ತಿಳಿಸಲಾಗಿದೆ. ಕಳೆದ ವರ್ಷ ಕ್ಯಾಬಿನೆಟ್ ಬಿಎಸ್‌ಎನ್‌ಎಲ್ ಮತ್ತು ಎಂಟಿಎನ್‌ಎಲ್ ಎರಡಕ್ಕೂ 69,000 ಕೋಟಿ ರೂ. ನ್ನು ಪುನರುಜ್ಜೀವನಕ್ಕಾಗಿ ಒಪ್ಪಿಗೆ ನೀಡಿತ್ತು, ಈ ಪ್ಯಾಕೇಜಿನಲ್ಲಿ 4 ಜಿ ಸ್ಪೆಕ್ಟ್ರಮ್ ಹಂಚಿಕೆ, ದೀರ್ಘಾವಧಿಯ ಬಾಂಡ್‌ಗಳ ಮೂಲಕ 15,000 ಕೋಟಿ ರೂ. ಸಂಗ್ರಹಿಸುವುದು, ಮತ್ತು ವಿಆರ್ಎಸ್ ಗಾಗಿ ಹಣವನ್ನು ಕ್ರೂಡಿಕರಿಸುವುದಾಗಿದೆ.
ಈ ಪೈಕಿ ವಿಆರ್‌ಎಸ್ ಮಾತ್ರ ಜಾರಿಗೆ ಬಂದಿದ್ದು, 78,569 ಬಿಎಸ್‌ಎನ್‌ಎಲ್ ನೌಕರರನ್ನು ಮನೆಗೆ ಕಳುಹಿಸಲಾಗಿದೆ. ಬಿಎಸ್‌ಎನ್‌ಎಲ್‌ಗೆ 4 ಜಿ ಸ್ಪೆಕ್ಟ್ರಮ್ ನೀಡಲಾಗಿಲ್ಲ. ಅಂತೆಯೇ, ಸಾರ್ವಭೌಮ ಗ್ಯಾರಂಟಿ ಕಾಯುತ್ತಿದೆ. ಬಿಎಸ್ಎನ್ಎಲ್ ಆಸ್ತಿಗಳ ಹಣಗಳಿಸುವ ಪ್ರಕ್ರಿಯೆಯು ನಿಧಾನವಾಗಿ ಚಲಿಸುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇಂಡಿಯಾ ಮೊಬೈಲ್ ಕಾನ್ಕ್ಲೇವ್ '20 - 4 ನೇ ಆವೃತ್ತಿ: ಭಾರತದ ಟೆಲಿಕಾಂ ಕ್ಷೇತ್ರದ ಭವಿಷ್ಯ ಎಜಿಆರ್ ಲೆಕ್ಕಾಚಾರದ ಕುರಿತು ಸುಪ್ರೀಂ ಕೋರ್ಟ್‌ನ ಇತ್ತೀಚಿನ ತೀರ್ಪು ಟೆಲಿಕಾಂ ಕ್ಷೇತ್ರದಲ್ಲಿ ಅನಿಶ್ಚಿತತೆಗಳನ್ನು ಸೃಷ್ಟಿಸಿದೆ, ಈ ಕಾರಣದಿಂದಾಗಿ ಬಿಎಸ್‌ಎನ್‌ಎಲ್‌ಗೆ ಸಾಲ ವಿಸ್ತರಿಸಲು ಬ್ಯಾಂಕುಗಳು ಸಿದ್ಧರಿಲ್ಲ ಎಂದು ಎಯುಎಬಿ ತಿಳಿಸಿದೆ.
4 ಜಿ ಸ್ಪೆಕ್ಟ್ರಮ್ ಹಂಚಿಕೆ ವಿಳಂಬ ಮತ್ತು ಹಣ ಲಭ್ಯವಿಲ್ಲದ ಕಾರಣ, ಬಿಎಸ್ಎನ್ಎಲ್ 2020 ರ ಅಂತ್ಯದ ವೇಳೆಗೆ 4 ಜಿ ಸೇವೆಗಳನ್ನು ಪ್ರಾರಂಭಿಸುವ ಸಾಧ್ಯತೆಯಿಲ್ಲ ಎಂದು ಅದು ಹೇಳಿದೆ ಮತ್ತು ಇದು ಉದ್ಯೋಗಿಗಳಿಗೆ ಸಾಕಷ್ಟು ಕಠೋರ ಪರಿಸ್ಥಿತಿ ಎದುರಾಗಿದೆ.