TOPLESS ಆಗಿ ಸೌಂದರ್ಯ ಅನಾವರಣಗೊಳಿಸಿದ ಬಾಲಿವುಡ್ ಬೆಡಗಿಯರು

ಬಾಲಿವುಡ್ ಬೆಡಗಿಯರು ತುದಿಗಾಲಲ್ಲಿ ನಿರೀಕ್ಷೆ ಮಾಡುವ ಆ ಗಳಿಗೆ ಕೊನೆಗೂ ಬಂದೆ ಬಿಟ್ಟಿದೆ. ಡಬ್ಬೂ ರತ್ಲಾನಿ ಅವರ ಬಾಲಿವುಡ್ ಕ್ಯಾಲೆಂಡರ್ ಗೆ ಇಂದಿಗೆ 21 ವರ್ಷ ಪೂರ್ಣಗೊಂಡಿವೆ.

  • Feb 19, 2020, 17:46 PM IST

ಮುಂಬೈ:ಬಾಲಿವುಡ್ ಬೆಡಗಿಯರು ತುದಿಗಾಲಲ್ಲಿ ನಿರೀಕ್ಷೆ ಮಾಡುವ ಆ ಗಳಿಗೆ ಕೊನೆಗೂ ಬಂದೆ ಬಿಟ್ಟಿದೆ. ಡಬ್ಬೂ ರತ್ಲಾನಿ ಅವರ ಬಾಲಿವುಡ್ ಕ್ಯಾಲೆಂಡರ್ ಗೆ ಇಂದಿಗೆ 21 ವರ್ಷ ಪೂರ್ಣಗೊಂಡಿವೆ. ಹೌದು, ಬಾಲಿವುಡ್ ನ ಖ್ಯಾತ ಫೋಟೋಗ್ರಾಫರ್ ಡಬ್ಬೂ ರತ್ಲಾನಿ ಅವರ ಬಾಲಿವುಡ್ ಕ್ಯಾಲೆಂಡರ್ ಫೋಟೋ ಶೂಟ್ ನಲ್ಲಿ ಕಾಣಿಸಿಕೊಳ್ಳುವ ತವಕ ಬಹುತೇಕ ತಾರಾಮಣಿಗಳಲ್ಲಿ ಇರುತ್ತದೆ. ಈ ಬಾರಿಯೂ ಕೂಡ ಎಲ್ಲ ರೀತಿಯ ಸಿದ್ಧತೆಗಳ ಮೂಲಕ ಅವರ ಕ್ಯಾಲೆಂಡರ್ ಬಿಡುಗಡೆಗೊಂಡಿದೆ. ಈ ಬಾರಿಯ ಅವರ ಕ್ಯಾಲೆಂಡರ್ ಶೂಟ್ ನಲ್ಲಿ ಪಾಲ್ಗೊಂಡ ಅನೇಕ ಬಾಲಿವುಡ್ ನಟಿಮಣಿಯರಲ್ಲಿ ಅನೇಕರು ಟಾಪ್ ಲೆಸ್ ಆಗಿ ಕ್ಯಾಮೆರಾ ಕಣ್ಣಿಗೆ ಪೋಸ್ ನೀಡಿದ್ದಾರೆ. ಅವರ ಫೋಟೋಗಳ ಒಂದು ಝಲಕ್ ಇಲ್ಲಿದೆ.

ಕಳೆದ ವರ್ಷ ದಬ್ಬೂ ರತ್ಲಾನಿ ಅವರ ಕ್ಯಾಲೆಂಡರ್ ಗಾಗಿ ಪದಾರ್ಪಣೆ ಮಾಡಿರುವ 'ಕಬೀರ್ ಸಿಂಗ್' ಖ್ಯಾತಿಯ ನಟಿ ಕಿಯಾರಾ ಅಡ್ವಾಣಿ ಈ ಬಾರಿಯ ಕ್ಯಾಲೆಂಡರ್ ನಲ್ಲಿಯೂ ಕೂಡ ಕಾಣಿಸಿಕೊಂಡಿದ್ದಾರೆ. ಆದರೆ, ಈ ಬಾರಿ ಅವರು ತುಂಬಾ ಡಿಫರೆಂಟ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ಎಲೆಯೊಂದರ ಸಹಾಯದಿಂದ ಅವರು ತಮ್ಮ ಸೌಂದರ್ಯವನ್ನು ಮರೆಮಾಚುವ ಪ್ರಯತ್ನ ನಡೆಸುತ್ತಿದ್ದಾರೆ.

ಈ ಬಾರಿಯ ವಿಶೇಷತೆ ಎಂದರೆ, ಬಾಲಿವುಡ್ ನಲ್ಲಿ ತಮ್ಮ ಅದ್ಭುತ ನಟನೆ ಹಾಗೂ ಬೋಲ್ಡ್ ಪಾತ್ರಗಳ ಮೂಲಕ ಎಲ್ಲರ ಗಮನ ಸೆಳೆಯುವ ನಟಿ ಭೂಮಿ ಪೇಡ್ನೇಕರ್ ಕೂಡ ಡಬ್ಬೂ ಅವರ ಫೋಟೋ ಶೂಟ್ ನಲ್ಲಿ ಕಾಣಿಸಿಕೊಂಡು ಚರ್ಚೆ ಹುಟ್ಟು ಹಾಕಿದ್ದಾರೆ. ಈ ಫೋಟೋ ಶೂಟ್ ನಲ್ಲಿ ಆಕರ್ಷಕವಾಗಿ ಕಾಣಿಸಿಕೊಳ್ಳಲು ಟಾಪ್ ಲೆಸ್ ಅವತಾರದಲ್ಲಿ ಅವರು ಬಾತ್ ಟಬ್ ಗೆ ಇಳಿದಿದ್ದಾರೆ. ಭೂಮಿ ಅವರ ಈ ಲುಕ್ ಅವರ ಲುಕ್ ಕುರಿತು ಅವರ ಅಭಿಮಾನಿಗಳು ಯೋಚಿಸಿಯೂ ಇರಲಿಲ್ಲ.

ಖ್ಯಾತ ಬಾಲಿವುಡ್ ನಟಿ ಸನ್ನಿ ಲಿಯೋನ್ ಕೂಡ ಈ ಬಾರಿ ಡಬ್ಬೂ ರತ್ಲಾನಿ ಅವರ ಫೋಟೋ ಶೂಟ್ ನಲ್ಲಿ ಕಾಣಿಸಿಕೊಂಡಿದ್ದು, ಅವರು ನೀಡಿರುವ ಪೋಸ್ ಕೂಡ ಯಾವುದಕ್ಕೂ ಕಮ್ಮಿ ಇಲ್ಲ ಎಂದರೆ ತಪ್ಪಾಗಲಾರದು.

ಬಾಲಿವುಡ್ ನ ಇನ್ನೋರ್ವ ಖ್ಯಾತ ನಟಿ ಕೃತಿ ಸನನ್ ಕೂಡ ಡಬ್ಬೂ ಅವರ ಈ ಫೋಟೋ ಶೂಟ್ ಗೆ ಪೋಸ್ ನೀಡಿದ್ದು, ಅವರ ಫೋಟೋ ಕೂಡ ತುಂಬಾ ಆಕರ್ಷಕವಾಗಿದೆ. ಕೃತಿ ಸನನ್ ಅವರ ಇನ್ನೊಂದು ಫೋಟೋ ಕೂಡ ಈ ಬಾರಿ ಡಬ್ಬೂ ಅವರ ಕ್ಯಾಲೆಂಡರ್ ನಲ್ಲಿ ಅವರ ಅಭಿಮಾನಿಗಳ ಗಮನ ಸೆಳೆಯುತ್ತಿದೆ.

1 /5

2 /5

3 /5

4 /5

5 /5