Anushka Sharma-Deepika Padukone: ಬಾಲಿವುಡ್‌ನಲ್ಲಿ ಸ್ನೇಹ ಮತ್ತು ದ್ವೇಷದ ಬಗ್ಗೆ ಚರ್ಚೆಗಳು ನಡೆಯುತ್ತಿವೆ.. ಇದೀಗ ರಣವೀರ್ ಸಿಂಗ್ ಅವರೊಂದಿಗೆ ಡೇಟಿಂಗ್ ಮಾಡಿದ್ದರು ಎನ್ನುವ ಪಟ್ಟಿಗೆ ನಟಿ ಅನುಷ್ಕಾ ಶರ್ಮಾ ಹೆಸರೂ ಕೂಡ ಸೇರಿದೆ..
ವಾಸ್ತವವಾಗಿ, ವರ್ಷಗಳ ಹಿಂದೆ ದೀಪಿಕಾ ಮತ್ತು ಅನುಷ್ಕಾ ಪರಸ್ಪರ ಉತ್ತಮ ಸಂಬಂಧವನ್ನು ಹೊಂದಿಲ್ಲ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಏಕೆಂದರೇ ರಣವೀರ್ ಸಿಂಗ್ ಜೊತೆ ಅನುಷ್ಕಾ ಹೆಸರು ತಳುಕು ಹಾಕಿಕೊಂಡಿತ್ತು..
ನಂತರ, ರಣವೀರ್ ಮತ್ತು ದೀಪಿಕಾ ಒಬ್ಬರಿಗೊಬ್ಬರು ಡೇಟಿಂಗ್ ಮಾಡಲು ಪ್ರಾರಂಭಿಸಿದಾಗ, ದೀಪಿಕಾ ಮತ್ತು ಅನುಷ್ಕಾ ನಡುವೆ ಸ್ನೇಹ ಸರಿಯಾಗಿಲ್ಲ ಎಂಬ ವರದಿಗಳು ಬಂದವು.. ಆದರೆ ಅನುಷ್ಕಾ ಈ ಬಗ್ಗೆ ರಿಯಾಕ್ಟ್ ಕೂಡ ಮಾಡಿದ್ದರು..
ಅನುಷ್ಕಾ ಶರ್ಮಾ 'ರಬ್ ನೆ ಬನಾ ದಿ ಜೋಡಿ' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಅವರ ಎರಡನೇ ಚಿತ್ರ 'ಬ್ಯಾಂಡ್ ಬಾಜಾ ಬಾರಾತ್', ಇದರಲ್ಲಿ ರಣವೀರ್ ಸಿಂಗ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವು ಭಾರೀ ಹಿಟ್ ಆಗಿತ್ತು..
ಆಗಲೇ ರಣವೀರ್-ಅನುಷ್ಕಾ ಡೇಟಿಂಗ್ ವದಂತಿಗಳು ಹರಿದಾಡಲು ಪ್ರಾರಂಭಿಸಿದವು. ಆದರೆ ಇಬ್ಬರೂ ಆ ಊಹಾಪೋಹಗಳನ್ನು ನಿರಾಕರಿಸಿದ್ದರು.. ಕೆಲವು ವರ್ಷಗಳ ನಂತರ, ರಣವೀರ್ ದೀಪಿಕಾ ಪಡುಕೋಣೆಯೊಂದಿಗೆ ಡೇಟಿಂಗ್ ಮಾಡಲು ಪ್ರಾರಂಭಿಸಿದರು.. ಹೀಗಾಗಿ ದೀಪಿಕಾ ಮತ್ತು ಅನುಷ್ಕಾ ನಡುವೆ ವೈಮನಸ್ಯವಿದೆ ಎಂದು ಹೇಳಲಾಗಿತ್ತು ಆದರೆ ಈ ಬಗ್ಗೆ ಅನುಷ್ಕಾ ಸ್ಪಷ್ಟನೆಯನ್ನೂ ನೀಡಿದ್ದರು.
ದೀಪಿಕಾ ಜೊತೆಗಿನ ಭಿನ್ನಾಬಿಪ್ರಾಯಗಳ ವದಂತಿಯನ್ನ ಗಣನೆಗೆ ತೆಗೆದುಕೊಳ್ಳದ ಅನುಷ್ಕಾ 'ನಾನು ಮಾಡುತ್ತಿರುವ ಕೆಲಸದಿಂದ ನನಗೆ ಸಂತೋಷವಾಗಿದೆ ಮತ್ತು ನಮ್ಮ ಸುತ್ತಲಿನ ಎಲ್ಲಾ ಸುದ್ದಿಗಳು ಸುಳ್ಳು" ಎಂದಿದ್ದರು..
"ವದಂತಿಗಳನ್ನು 'ಡೊಮಿನೊ ಎಫೆಕ್ಟ್'ಗೆ ಹೋಲಿಸಿದ ಅನುಷ್ಕಾ, ಇವೆಲ್ಲವೂ ಕಟ್ಟುಕಥೆಗಳು.. ನಾನಿಲ್ಲಿ ಯಾರೊಂದಿಗೂ ಜಗಳವಾಡಲು ಬಂದಿಲ್ಲ.. ಅದಕ್ಕಿಂತ ಹೆಚ್ಚೇನೂ ಇಲ್ಲ, ನನ್ನ ಬಗ್ಗೆ ಗಾಸಿಪ್ ಮಾಡಲು ಸುಳ್ಳಿನ ಸರಣಿ. ಈ ಉದ್ಯಮದಲ್ಲಿ ಮಹಿಳೆಯರನ್ನು ನೋಡುವ ರೀತಿ ತಪ್ಪುʼ ಎಂದು ಸ್ಪಷ್ಟನೆ ನೀಡಿದ್ದರು..