26/11 ಉಗ್ರ ದಾಳಿಯ ಕುರಿತು ಸ್ಫೋಟಕ ಮಾಹಿತಿ ಬಹಿರಂಗ

ತಮ್ಮ ಪುಸ್ತಕದಲ್ಲಿ ರಾಕೇಶ್ ಮಾರಿಯಾ ಶಿನಾ ಬೋರಾ ಹತ್ಯೆ ಪ್ರಕರಣದ ತನಿಖೆಯ ವೇಳೆ ನಡೆದ ತಮ್ಮ ಹಠಾತ್ ವರ್ಗಾವಣೆಯ ಕುರಿತು ಕೂಡ ಮೌನ ಮುರಿದಿದ್ದಾರೆ.

Last Updated : Feb 18, 2020, 05:16 PM IST
26/11 ಉಗ್ರ ದಾಳಿಯ ಕುರಿತು ಸ್ಫೋಟಕ ಮಾಹಿತಿ ಬಹಿರಂಗ title=

ಮುಂಬೈ: ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿದ 26/11 ಮುಂಬೈ ದಾಳಿಯ ಕುರಿತು ಅತಿ ದೊಡ್ಡ ಮಾಹಿತಿ ಇದೀಗ ಬಹಿರಂಗಗೊಂಡಿದೆ. ಈ ಮಾಹಿತಿ ಅಜಮಲ್ ಅಮೀರ್ ಕಸಾಬ್ ಗೆ ಸಂಬಂಧಿಸಿದ್ದಾಗಿದೆ. ಮುಂಬೈ ಪೊಲೀಸ್ ನ ಮಾಜಿ ಕಮಿಷನರ್ ರಾಕೇಶ್ ಮಾರಿಯಾ ಅವರು ತಮ್ಮ 'ಲೆಟ್ ಮೀ ಸೇ ಇಟ್ ನೌ (LET ME SAY IT NOW)'ನಲ್ಲಿ ಈ ಕುರಿತು ಬರೆದುಕೊಂಡಿದ್ದು, ಕುಖ್ಯಾತ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಗ್ಯಾಂಗ್ ಕಸಬ್ ಹತ್ಯೆಗೆ ಸುಪಾರಿ ಪಡೆದಿತ್ತು ಎಂದಿದ್ದಾರೆ. ಅಷ್ಟೇ ಅಲ್ಲ ಮುಂಬೈ ಉಗ್ರದಾಳಿಯ ಎಲ್ಲ ಉಗ್ರರನ್ನು ಪಾಕಿಸ್ತಾನದ ಗುಪ್ತಚರ ಸಂಸ್ಥೆ ISI, ಹಿಂದೂಗಳು ಎಂದು ಸಾಬೀತುಪಡಿಸಲು ಬಯಸಿತ್ತು ಎಂದೂ ಕೂಡ ಅವರು ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ. ಈ ದಾಳಿಯ ಕುರಿತು ನಡೆಸಲಾದ ತನಿಖೆಯ ವೇಳೆ ಕಸಬ್ ಬಳಿ ಒಂದು ಸುಳ್ಳು ಐಡಿ ಕಾರ್ಡ್ ಕೂಡ ದೊರೆತಿದ್ದು, ಅದರ ಮೇಲೆ ಆತನ ಹೆಸರು ಸಮೀರ್ ಚೌಧರಿ ಎಂದು ಬರೆಯಲಾಗಿತ್ತು.

ತಮ್ಮ ಪುಸ್ತಕದಲ್ಲಿ ರಾಕೇಶ್ ಮಾರಿಯಾ ಶೀನಾ ಬೋರಾ ಹತ್ಯೆ ಪ್ರಕರಣದ ತನಿಖೆಯ ವೇಳೆ ನಡೆದ ತಮ್ಮ ಹಠಾತ್ ವರ್ಗಾವಣೆಯ ಕುರಿತು ಕೂಡ ಉಲ್ಲೇಖಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸದಂತೆ ಹಲವು ಬೆಚ್ಚಿಬೀಳಿಸುವ ಮಾಹಿತಿಗಳನ್ನು ರಾಕೇಶ್ ಮಾರಿಯಾ ತಮ್ಮ ಈ ಪುಸ್ತಕದಲ್ಲಿ ಹೇಳಿಕೊಂಡಿದ್ದಾರೆ. ಶೀನಾ ಬೋರಾ ಹತ್ಯೆ ಪ್ರಕರಣದಲ್ಲಿ ಪೀಟರ್ ಮುಖರ್ಜಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳಿಗೆ ದಾರಿ ತಪ್ಪಿಸಲಾಗಿತ್ತು ಎಂಬ ತಮ್ಮ ಮೇಲಿರುವ ಆರೋಪವನ್ನು ಅವರು ತಳ್ಳಿ ಹಾಕಿದ್ದಾರೆ. ಪ್ರಕರಣದ ತನಿಖೆಯ ವೇಳೆ ಪೀಟರ್ ಮುಖರ್ಜಿ ಅವರನ್ನು ರಕ್ಷಿಸ ಪ್ರಯತ್ನಿಸಲಾಗಿದೆ ಎಂಬ ಆರೋಪ ಅವರ ಮೇಲಿದೆ. ಪೀಟರ್ ತಮ್ಮ ಮಾಜಿ ಪತ್ನಿ ಇಂದ್ರಾಣಿಯ ಮಗಲಾಗಿರುವ ಶೀನಾ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಲ್ಲಿ ಒಬ್ಬರಾಗಿದ್ದಾರೆ.

ಈ ಕುರಿತು ತಮ್ಮ 'ಲೆಟ್ ಮೇ ಸೆ ಇಟ್ ನೌ' ಪುಸ್ತಕದಲ್ಲಿ ಹೇಳಿಕೊಂಡಿರುವ ರಾಕೇಶ್ ಮಾರಿಯಾ, 2015ರಲ್ಲಿ ಶೀನಾ ಬೋರಾ ಹತ್ಯೆ ಪ್ರಕರಣದ ತನಿಖೆಯ ಆರಂಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಜಾಯಿಂಟ್ ಕಮಿಷನರ್ ಆಗಿದ್ದ ದೆವೆನ್ ಭಾರತಿ ತಮ್ಮನ್ನು ಕತ್ತಲಲ್ಲಿ ಇಟ್ಟಿದ್ದರು ಹಾಗೂ ಅವರು ಪೀಟರ್ ಮುಖರ್ಜಿಗೆ ಮೊದಲಿನಿಂದಲೂ ಪರಿಚಿತರಾಗಿದ್ದರು ಎಂಬುದನ್ನು ಹೇಳಿರಲಿಲ್ಲ ಎಂದಿದ್ದಾರೆ. ತಮ್ಮ ಪುಸ್ತಕದಲ್ಲಿ ಘಟನೆಯ ಕುರಿತು ಬರೆದುಕೊಂಡಿರುವ ಮಾರಿಯಾ, ತಾವು 2012ರಲ್ಲಿ ಶೀನಾ ಕಾಣೆಯಾಗಿರುವ ಕುರಿತು ಮಾಹಿತಿ ದೊರೆತ ಬಳಿಕ ಯಾಕೆ ಮಾತನಾಡಲಿಲ್ಲ ಎಂದು ಪೀಟರ್ ಗೆ ಪ್ರಶ್ನಿಸಿರುವುದಾಗಿ ಹೇಳಿದ್ದಾರೆ. ಈ ಸಂದರ್ಭದಲ್ಲಿ ಪೀಟರ್ ತಮಗೆ 'ಸರ್ ನಾನು ದೆವೆನ್ ಗೆ ಈ ಕುರಿತು ಮಾಹಿತಿ ನೀಡಿದ್ದೇನೆ' ಎಂದಿದ್ದರು ಎಂದು ಹೇಳಿಕೊಂಡಿದ್ದಾರೆ.

ಪ್ರಕರಣದ ತನಿಖೆಯ ವೇಳೆ ತಮ್ಮ ಹಾಗೂ ಅಂದಿನ ಸಿಎಂ ದೇವೇಂದ್ರ ಫಡ್ನವಿಸ್ ಅವರ ಮಧ್ಯೆ ಕೆಲ ತಪ್ಪು ತಿಳುವಳಿಕೆಗಳು ಹುಟ್ಟಿಕೊಂಡಿದ್ದವು ಎಂದು ಹೇಳಿದ್ದಾರೆ. ತಮ್ಮ ವತಿಯಿಂದ ಸಿಎಂ ಫಡ್ನವಿಸ್ ಅವರಿಗೆ ಯಾರೋ ಒಬ್ಬರು ತಪ್ಪು ಮಾಹಿತಿ ನೀಡಿದ್ದರು ಎಂಬ ಸಂದೇಹ ತಮ್ಮಲ್ಲಿ ಮೂಡಿತ್ತು. ಈ ಪ್ರಕರಣ ಅಂತಿಮ ಹಂತ ತಲುಪಿದ್ದ ವೇಳೆ ತಮ್ಮನ್ನು ಪ್ರಮೋಟ್ ಮಾಡುವುದಾಗಿ ಹೇಳಿ ವರ್ಗಾವಣೆ ಮಾಡಲಾಗಿತ್ತು ಎಂದು ಅವರು ಬರೆದುಕೊಂಡಿದ್ದಾರೆ.

Trending News