ಮಾ. 31ರೊಳಗೆ PAN-Aadhaar ಲಿಂಕ್ ಮಾಡದಿದ್ದರೆ ಏನಾಗುತ್ತೆ?

ಐಟಿ ಇಲಾಖೆಯ ಪ್ರಕಾರ, ಜನವರಿ 27 ರ ವೇಳೆಗೆ 30.75 ಕೋಟಿ ಪಾನ್ ಅನ್ನು ಆಧಾರ್‌ಗೆ  ಲಿಂಕ್ ಮಾಡಲಾಗಿದೆ ಮತ್ತು ಸುಮಾರು 17.58 ಕೋಟಿ ಕಾರ್ಡ್ ಗಳು ಇನ್ನೂ ಲಿಂಕ್ ಆಗಬೇಕಿದೆ.

Written by - Yashaswini V | Last Updated : Feb 17, 2020, 02:01 PM IST
ಮಾ. 31ರೊಳಗೆ PAN-Aadhaar ಲಿಂಕ್ ಮಾಡದಿದ್ದರೆ ಏನಾಗುತ್ತೆ? title=

ನವದೆಹಲಿ: 2020ರ ಮಾರ್ಚ್ 31 ರೊಳಗೆ ಪ್ಯಾನ್ ಕಾರ್ಡ್ ಆಧಾರ್‌ನೊಂದಿಗೆ(Aadhaar Pan Link)ಲಿಂಕ್ ಆಗದಿದ್ದರೆ, ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಳ್ಳುತ್ತದೆ ಎಂದು ಆದಾಯ ತೆರಿಗೆ ಇಲಾಖೆ ತನ್ನ ಇತ್ತೀಚಿನ ಅಧಿಸೂಚನೆಯಲ್ಲಿ ತಿಳಿಸಿದೆ.

ಐಟಿ ಇಲಾಖೆಯ ಪ್ರಕಾರ, ಜನವರಿ 27 ರ ವೇಳೆಗೆ 30.75 ಕೋಟಿ ಪ್ಯಾನ್ ಅನ್ನು ಆಧಾರ್‌ಗೆ  ಲಿಂಕ್ ಮಾಡಲಾಗಿದೆ ಮತ್ತು ಸುಮಾರು 17.58 ಕೋಟಿ ಕಾರ್ಡ್ ಗಳು ಇನ್ನೂ ಲಿಂಕ್ ಆಗಬೇಕಿದೆ. ಈಗಾಗಲೇ ಎಂಟು ಬಾರಿ ಗಡುವು ವಿಸ್ತರಿಸಿದ ನಂತರ ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡಲು ಐಟಿ ಇಲಾಖೆ ಮಾರ್ಚ್ 31ರವರೆಗೆ ಮತ್ತೊಮ್ಮೆ ಗಡುವು ನಿಗದಿಪಡಿಸಿದೆ.

"ಜುಲೈ 1, 2017 ರಂತೆ ಶಾಶ್ವತ ಖಾತೆ ಸಂಖ್ಯೆಯನ್ನು ನಿಗದಿಪಡಿಸಿದ ಮತ್ತು 139 ಎಎ ವಿಭಾಗದ ಉಪವಿಭಾಗ (2) ರ ಅಡಿಯಲ್ಲಿ ತನ್ನ ಆಧಾರ್ ಸಂಖ್ಯೆಯನ್ನು ತಿಳಿಸುವ ಅಗತ್ಯವಿರುವ ವ್ಯಕ್ತಿಯು, ಮಾರ್ಚ್ 31, 2020 ರಂದು ಅಥವಾ ಅದಕ್ಕೂ ಮೊದಲು ಅದನ್ನು ತಿಳಿಸುವಲ್ಲಿ ವಿಫಲರಾದರೆ ಅಂತಹ ವ್ಯಕ್ತಿಯ ಶಾಶ್ವತ ಖಾತೆ ಸಂಖ್ಯೆ ಕಾಯಿದೆಯಡಿ ಹೇಳಿದ ದಿನಾಂಕದ ನಂತರ ನಿಷ್ಕ್ರಿಯಗೊಳ್ಳುತ್ತದೆ " ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಹೇಳಿದೆ.

ಅಧಿಸೂಚನೆಯ ಮೂಲಕ, ಸಿಬಿಡಿಟಿ ಆದಾಯ ತೆರಿಗೆ ನಿಯಮಗಳನ್ನು ತಿದ್ದುಪಡಿ ಮಾಡಿ ನಿಯಮ 114 ಎಎಎ ಅನ್ನು ಸೇರಿಸಿತು, ಇದು "ಶಾಶ್ವತ ಖಾತೆ ಸಂಖ್ಯೆ(PAN)ಯನ್ನು ನಿಷ್ಕ್ರಿಯಗೊಳಿಸುವ ವಿಧಾನ" ವನ್ನು ಸೂಚಿಸುತ್ತದೆ.

ಶಾಶ್ವತ ಖಾತೆ ಸಂಖ್ಯೆಯನ್ನು ಒದಗಿಸದಿರುವುದು, ತಿಳಿಸುವುದು ಅಥವಾ ಉಲ್ಲೇಖಿಸದ ಕಾರಣ ಐ-ಟಿ ಕಾಯಿದೆಯಡಿ ಎಲ್ಲಾ ಪರಿಣಾಮಗಳಿಗೆ ಪ್ಯಾನ್‌ಗಳು ನಿಷ್ಕ್ರಿಯವಾಗಿರುವುದಕ್ಕೆ ಆ ವ್ಯಕ್ತಿಯೇ ಜವಾಬ್ದಾರರಾಗಿರುತ್ತಾರೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಮಾರ್ಚ್ 31, 2020 ರ ನಂತರ ಪ್ಯಾನ್ ಅನ್ನು ಆಧಾರ್‌ನೊಂದಿಗೆ ಸಂಪರ್ಕಿಸುವವರಿಗೆ, ಐ-ಟಿ ಇಲಾಖೆಯು "ಆಧಾರ್ ಸಂಖ್ಯೆಯನ್ನು ತಿಳಿಸಿದ ದಿನಾಂಕದಿಂದ ಕಾರ್ಯರೂಪಕ್ಕೆ ಬರಲಿದೆ" ಎಂದು ಹೇಳಿದೆ.

ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 139 ಎಎ (2), ಜುಲೈ 1, 2017 ರಂತೆ ಪ್ಯಾನ್ ಹೊಂದಿರುವ ಮತ್ತು ಆಧಾರ್ ಪಡೆಯಲು ಅರ್ಹರಾಗಿರುವ ಪ್ರತಿಯೊಬ್ಬ ವ್ಯಕ್ತಿಯು ತನ್ನ ಆಧಾರ್ ಸಂಖ್ಯೆಯನ್ನು ತೆರಿಗೆ ಅಧಿಕಾರಿಗಳಿಗೆ ತಿಳಿಸಬೇಕು.

ನೀವು ಈಗಾಗಲೇ ಪ್ಯಾನ್ ಕಾರ್ಡ್ ಹೊಂದಿದ್ದರೆ, ಮಾರ್ಚ್ 31 ರೊಳಗೆ ಅದನ್ನು ಲಿಂಕ್ ಮಾಡುವುದು ಕಡ್ಡಾಯವಾಗಿದೆ, ನಂತರ ಅದು ನಿಷ್ಕ್ರಿಯಗೊಳ್ಳುತ್ತದೆ. ಲಿಂಕ್ ಅನ್ನು ಐಟಿ ಇಲಾಖೆಯ ಇ-ಫೈಲಿಂಗ್ ಪೋರ್ಟಲ್ ಅಥವಾ ಎಸ್ಎಂಎಸ್ ಮೂಲಕ ಮಾಡಬಹುದು ಮತ್ತು ನೀವು ಆನ್‌ಲೈನ್‌ನಲ್ಲಿ ಸ್ಟೇಟಸ್ ಪರಿಶೀಲಿಸಬಹುದು.

ನೀವು ಹೊಸ ಪ್ಯಾನ್ ಕಾರ್ಡ್ ಅರ್ಜಿದಾರರಾಗಿದ್ದರೆ, ನಿಮ್ಮ ಆಧಾರ್ ಸಂಖ್ಯೆಯನ್ನು ಅರ್ಜಿ ನಮೂನೆಯಲ್ಲಿ ನಮೂದಿಸುವುದು ಕಡ್ಡಾಯವಾಗಿದೆ ಮತ್ತು ನೀವು ಅರ್ಜಿ ಸಲ್ಲಿಸಿದಾಗ ಇಂಟರ್ಲಿಂಕಿಂಗ್ ಸ್ವಯಂಚಾಲಿತವಾಗಿ ಮಾಡಲಾಗುತ್ತದೆ.

ಗಡುವಿನ ಮೊದಲು ನಿಮ್ಮ ಆಧಾರ್ ಮತ್ತು ಪ್ಯಾನ್ ಅನ್ನು ನೀವು ಲಿಂಕ್ ಮಾಡದಿದ್ದರೆ, ಎರಡರಲ್ಲಿ ಯಾವುದಾದರೂ ಅಗತ್ಯವಿರುವ ಕನಿಷ್ಠ 18 ಹಣಕಾಸು ವಹಿವಾಟುಗಳನ್ನು ಮಾಡಲು ನಿಮಗೆ ಸಾಧ್ಯವಾಗದಿರಬಹುದು. ಈ ವಹಿವಾಟುಗಳಲ್ಲಿ ವಾಹನ ಅಥವಾ ಆಸ್ತಿಗಳ ಖರೀದಿ ಮತ್ತು ಮಾರಾಟ, ಡೆಬಿಟ್ / ಕ್ರೆಡಿಟ್ ಕಾರ್ಡ್‌ಗಳಿಗೆ ಅರ್ಜಿ ಸಲ್ಲಿಸುವುದು, ಬ್ಯಾಂಕ್ ಖಾತೆಗಳನ್ನು ತೆರೆಯುವುದು ಸೇರಿವೆ.

ಇದಲ್ಲದೆ, ಹಣಕಾಸಿನ ವರ್ಷಕ್ಕೆ ನಿಮಗೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಸಹ ಸಾಧ್ಯವಾಗುವುದಿಲ್ಲ ಮತ್ತು ಇವೆರಡೂ ಸಂಪರ್ಕ ಹೊಂದಿಲ್ಲದಿದ್ದರೆ ನೀವು ಅದನ್ನು ಮಾನ್ಯ ಐಡಿ ಪುರಾವೆಯಾಗಿ ಬಳಸಲಾಗುವುದಿಲ್ಲ.

ಸುಪ್ರೀಂ ಕೋರ್ಟ್ 2018 ರ ಸೆಪ್ಟೆಂಬರ್‌ನಲ್ಲಿ ಆಧಾರ್ ಅನ್ನು ಸಾಂವಿಧಾನಿಕವಾಗಿ ಮಾನ್ಯ ಎಂದು ಘೋಷಿಸಿತ್ತು ಮತ್ತು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಮತ್ತು ಪ್ಯಾನ್ ಕಾರ್ಡ್‌ಗಳ ಹಂಚಿಕೆಗೆ ಬಯೋಮೆಟ್ರಿಕ್ ಐಡಿ ಕಡ್ಡಾಯವಾಗಿ ಉಳಿಯುತ್ತದೆ ಎಂದು ಅಭಿಪ್ರಾಯಪಟ್ಟಿದೆ.

ಆಧಾರ್ ಅನ್ನು ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ ಅಥವಾ ಯುಐಡಿಎಐ ಭಾರತದ ನಿವಾಸಿಗಳಿಗೆ ನೀಡಲಾಗುತ್ತದೆ ಮತ್ತು ಪ್ಯಾನ್ ಎನ್ನುವುದು ಆದಾಯ ತೆರಿಗೆ ಇಲಾಖೆಯಿಂದ ಒಬ್ಬ ವ್ಯಕ್ತಿ, ಸಂಸ್ಥೆ ಅಥವಾ ಘಟಕಕ್ಕೆ ನಿಗದಿಪಡಿಸಿದ 10-ಅಂಕಗಳ ಆಲ್ಫಾನ್ಯೂಮರಿಕ್ ಸಂಖ್ಯೆ.

Trending News