Bollywood actor drunk his wife Breast milk : ಬಾಲಿವುಡ್ ನಟನೊಬ್ಬ ತಮ್ಮ ಪತ್ನಿಯ ಎದೆ ಹಾಲನ್ನು ಕದ್ದು ಕುಡಿಯುತ್ತಿದ್ದ ಎಂಬ ವಿಚಾರ ಬಹಿರಂಗವಾಗಿದೆ.. ಸ್ವತಃ ಈ ವಿಚಾರವನ್ನು ಅವರ ಪತ್ನಿ ಪುಸ್ತಕವೊಂದರಲ್ಲಿ ಬರೆದುಕೊಂಡಿದ್ದಾರೆ.. ಅಲ್ಲದೆ, ಎದೆ ಹಾಲು ಏಕೆ ಕುಡಿಯುತ್ತಿದ್ದರು ಎಂಬುವುದನ್ನೂ ಸಹ ತಿಳಿಸಿದ್ದಾರೆ.. ಹಾಗಿದ್ರೆ ಆ ನಟ ಯಾರು..? ಇಂಟ್ರಸ್ಟಿಂಗ್ ವಿಚಾರ ಇಲ್ಲಿದೆ..
ಬಾಲಿವುಡ್ ನಟ ಆಯುಷ್ಮಾನ್ ಖುರಾನಾ ಅವರ ಪತ್ನಿ ಇತ್ತೀಚೆಗೆ ಪುಸ್ತಕವನ್ನು ಪ್ರಕಟಿಸಿದ್ದಾರೆ. ಅದರಲ್ಲಿ ತನ್ನ ಪತಿ ತಮ್ಮ ಎದೆಹಾಲನ್ನು ಕದ್ದು ಕುಡಿಯುತ್ತಿದ್ದರು ಎಂದು ಬರೆದಿದ್ದು, ಇದೀಗ ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸುತ್ತಿದೆ..
ಆಯುಷ್ಮಾನ್ ಖುರಾನಾ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಗುರುತಿಸಿಕೊಂಡಿದ್ದಾರೆ.. ಸೌತ್ ಚಿತ್ರರಂಗದಲ್ಲಿಯೂ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ವಿಶಿಷ್ಟವಾದ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುವ ಈ ಬಾಲಿವುಡ್ ನಟ ಸಾಮಾನ್ಯ ನಾಯಕರಿಗಿಂತ ಭಿನ್ನವಾಗಿ ನಟಿಸುವುದರಲ್ಲಿಯೂ ಹೆಸರುವಾಸಿಯಾಗಿದ್ದಾರೆ.
ನಟ ಆಯುಷ್ಮಾನ್ ಖುರಾನಾ 2008 ರಲ್ಲಿ ತಾಹಿರಾ ಕಶ್ಯಪ್ ಅವರನ್ನು ವಿವಾಹವಾದರು. ಕೆಲ ವರ್ಷಗಳಿಂದ ಪ್ರೀತಿಸಿ ಮದುವೆಯಾದ ಈ ಜೋಡಿ ಬಾಲಿವುಡ್ ಅಭಿಮಾನಿಗಳ ನೆಚ್ಚಿನ ಜೋಡಿಗಳಲ್ಲಿ ಒಂದು. ತಾಹಿರಾ ಕ್ಯಾನ್ಸರ್ ನಿಂದ ಬದುಕುಳಿದ ಮಹಿಳೆ. ಇವರಿಗೆ ಇಬ್ಬರು ಮಕ್ಕಳಿದ್ದಾರೆ.
ಆಯುಷ್ಮಾನ್ ಖುರಾನಾ ಅವರ ಪತ್ನಿ ತಾಹಿರಾ ಹೆಸರಾಂತ ಲೇಖಕಿ. ಅವರು ಕೆಲವು ಚಿತ್ರಗಳಲ್ಲಿಯೂ ಕೆಲಸ ಮಾಡಿದ್ದಾರೆ. ತಾಯಿಯ 7 ಪಾಪಗಳು ಎಂಬ ಪುಸ್ತಕವನ್ನು ಬರೆದಿದ್ದಾರೆ. ಅದರಲ್ಲಿ, ಅವರು ತಮ್ಮ ಪತಿ ಆಯುಷ್ಮಾನ್ ಅವರ ಬಗ್ಗೆಯೂ ಉಲ್ಲೇಖಿಸಿದ್ದಾರೆ.
ಆಯುಷ್ಮಾನ್ ತಮ್ಮ ಎದೆ ಹಾಲನ್ನು ಕದ್ದು ಪ್ರೋಟೀನ್ ಶೇಕ್ ಆಗಿ ಬಳಸಿದ್ದಾರೆ. ಬ್ಯಾಂಕಾಕ್‌ಗೆ ಪ್ರಯಾಣಿಸುವ ಮೊದಲು ತನ್ನ ಏಳು ತಿಂಗಳ ಮಗುವಿಗೆ ಎದೆ ಹಾಲನ್ನು ಬಾಟಲಿಂಗ್ ಮಾಡುವಾಗ ಈ ಘಟನೆ ಸಂಭವಿಸಿದೆ ಅಂತ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.
ತಾಹಿರಾ ತಮ್ಮ ಮಗುವಿಗಾಗಿ ಎದೆ ಹಾಲನ್ನು ಬಾಟಲಿಯಲ್ಲಿ ಹಾಕಿ ಇಡುತ್ತಿದ್ದರು. ಆದರೆ ಅದನ್ನು ಆಯುಷ್ಮಾನ್ ಕುಡಿಯುತ್ತಿದ್ದರಂತೆ. ಈ ಕುರಿತು ಕೇಳಿದಾಗ ನಗುತ್ತಾ.. ಹಾಲು ಕುಡಿದಿರುವುದಾಗಿ ನಟ ಒಪ್ಪಿಕೊಂಡಿದ್ದರಂತೆ.. ಇದರಿಂದಾಗಿ ಮುಂದಿನ ಬಾರಿ ಅವರಿಗೆ ಹಾಲು ಸಿಗಬಾರದು ಅಂತ ರಹಸ್ಯವಾಗಿ ಮಗುವಿಗೆ ನೀಡುತ್ತಿದ್ದರು ಅಂತ ಬರೆದುಕೊಂಡಿದ್ದಾರೆ..