Beer and Mosquitoes : ಹೆಚ್ಚಾಗಿ ಇಂದಿನ ಯುವ ಪೀಳಿಗೆ ಚಿಲ್ಡ್ ಬಿಯರ್ ಕುಡಿಯಲು ಹೆಚ್ಚು ಇಷ್ಟ ಪಡುತ್ತಾರೆ.. ಅದಕ್ಕೇ ದಿನನಿತ್ಯ ಪಾರ್ಟಿ ಮಾಡುತ್ತರೆ.. ಆದ್ರೆ, ಬಿಯರ್ ಕುಡಿಯುವವರಿಗೆ ಸಣ್ಣಪುಟ್ಟ ಸಮಸ್ಯೆ ಇರುತ್ತೆ ಅನ್ನೋದು ಇತ್ತೀಚಿನ ಅಧ್ಯಯನದಿಂದ ತಿಳಿದುಬಂದಿದೆ.. ಇಂಟ್ರಸ್ಟಿಂಗ್ ವಿಚಾರ ಇಲ್ಲಿದೆ..
ಈ ದಿನಗಳಲ್ಲಿ ಬಿಯರ್ ಕುಡಿಯುವುದು ಸಹ ಫ್ಯಾಷನ್‌ನಂತೆ ಭಾಸವಾಗುತ್ತಿದೆ. ವಾರಾಂತ್ಯ ಬಂದರೆ ಪಾರ್ಟಿ ಮಾಡುತ್ತಾರೆ ಯುವ ಜನತೆ. ಬಿಯರ್ ಕುಡಿದು ತಣ್ಣಗಾಗುತ್ತಾರೆ.
ಆದರೆ ಬಿಯರ್ ಕುಡಿದವರಿಗೆ ಸಂಬಂಧಿಸಿದ ವಿಚಾರವೊಂದಿ ಇದೀಗ ಹೊರ ಬಿದ್ದಿದೆ.. ಮದ್ಯಪಾನ ಮಾಡುವವರಿಗೆ ಸೊಳ್ಳೆಗಳು ಹೆಚ್ಚು ಕಚ್ಚುತ್ತವೆ ಎಂದು ಬಹಿರಂಗವಾಗಿದೆ..
ಇದಕ್ಕೆ ಕಾರಣಗಳನ್ನು ಜಪಾನ್‌ನ ಟೊಯಾಮಾ ವಿಶ್ವವಿದ್ಯಾಲಯದ ಬಯೋಡಿಫೆನ್ಸ್ ಮೆಡಿಸಿನ್ ವಿಭಾಗ ಕಂಡು ಹಿಡಿದಿದೆ. ಈ ಅಧ್ಯಯನದ ಪ್ರಕಾರ, ಬಿಯರ್ ಕುಡಿಯುವವರಿಗೆ ಸೊಳ್ಳೆಗಳು ಹೆಚ್ಚು ಕಚ್ಚುತ್ತವೆ ಎಂದು ಹೇಳಲಾಗಿದೆ..
ಬಿಯರ್ ಕುಡಿಯುವುದರಿಂದ ಬಿಡುಗಡೆಯಾಗುವ C02 ದೇಹದ ಉಷ್ಣತೆಯ ಹೆಚ್ಚಳದೊಂದಿಗೆ ಸೊಳ್ಳೆಗಳನ್ನು ಆಕರ್ಷಿಸುತ್ತದೆ ಎಂದು ತಿಳಿದುಬಂದಿದೆ. ಇದರ ಪ್ರಕಾರ.. ಬಿಯರ್ ಕುಡಿಯುವವರಿಗೆ ಸೊಳ್ಳೆಗಳು ಕಚ್ಚುವುದು ಕಂಡು ಬಂದಿದೆ.
ಈಗ ಮಳೆಗಾಲ ಮತ್ತು ರೋಗಗಳು ಹರಡುವ ಸಮಯ. ಹಾಗಾಗಿ ಈ ಸಮಯದಲ್ಲಿ ಬಿಯರ್ ನಿಂದ ದೂರವಿದ್ದರೆ ಉತ್ತಮ. ಏಕೆಂದರೆ ಮಳೆಗಾಲದಲ್ಲಿ ಸೊಳ್ಳೆಗಳ ಕಾಟದಿಂದ ಡೆಂಗ್ಯೂ, ಮಲೇರಿಯಾದಂತಹ ರೋಗಗಳು ಹರಡುತ್ತವೆ.
ಅದಕ್ಕಾಗಿಯೇ ಮಳೆಗಾಲದಲ್ಲಿ ರೋಗಗಳು ಬರದಂತೆ ನೀವು ಎಚ್ಚರವಾಗಿರಬೇಕು.. ರೋಗಗಳನ್ನು ಹರಡುವ ಸೊಳ್ಳೆಗಳಿಂದ ದೂರವಿರಿ.. ಅದಕ್ಕಾಗಿ ಬಿಯರ್ ಕುಡಿಯದಿರುವುದೇ ಉತ್ತಮ.