relationship tips: ಪತಿ - ಪತ್ನಿಯರ ಬಾಂಧವ್ಯ ಗಟ್ಟಿಯಾಗಬೇಕಾದರೆ ಹೀಗಿರಬೇಕು ಎನ್ನುತ್ತಾರೆ ಆಚಾರ್ಯ ಚಾಣಕ್ಯ. ಬೆಳಗ್ಗೆ ಎದ್ದ ನಂತರ ಪತಿ-ಪತ್ನಿ ಒಟ್ಟಿಗೆ ಒಂದಿಷ್ಟು ಕೆಲಸ ಮಾಡಬೇಕು. ಇದು ಅವರ ವೈವಾಹಿಕ ಜೀವನವನ್ನು ಸುಧಾರಿಸುತ್ತದೆ ಎಂದು ಚಾಣಕ್ಯ ನೀತಿಯಲ್ಲಿ ಹೇಳಲಾಗಿದೆ.
ಆಚಾರ್ಯ ಚಾಣಕ್ಯ ಒಬ್ಬ ಮಹಾನ್ ತತ್ವಜ್ಞಾನಿ, ಸಲಹೆಗಾರ ಮತ್ತು ನುರಿತ ರಾಜಕಾರಣಿ. ಅವರು ನೀತಿಶಾಸ್ತ್ರದ ಪುಸ್ತಕವನ್ನು ಬರೆದಿದ್ದಾರೆ. ಅದರಲ್ಲಿ ಜೀವನದ ಅನೇಕ ಅಂಶಗಳನ್ನು ತಿಳಿಸಲಾಗಿದೆ. ಚಾಣಕ್ಯನ ಈ ಮಾತುಗಳು ಜೀವನದಲ್ಲಿ ಯಶಸ್ವಿಯಾಗಲು ಜನರನ್ನು ಪ್ರೇರೇಪಿಸುತ್ತವೆ.
ಪತಿ-ಪತ್ನಿಯರ ಸಂಬಂಧ ಗಟ್ಟಿಯಾಗಬೇಕಾದರೆ ಹೀಗಿರಬೇಕು ಎನ್ನುತ್ತಾರೆ ಆಚಾರ್ಯ ಚಾಣಕ್ಯ. ಬೆಳಗ್ಗೆ ಎದ್ದ ನಂತರ ಪತಿ-ಪತ್ನಿ ಒಟ್ಟಿಗೆ ಒಂದಿಷ್ಟು ಕೆಲಸ ಮಾಡಬೇಕು. ಇದು ದಿನವಿಡೀ ಅವರ ಸಂಬಂಧವನ್ನು ಸುಧಾರಿಸುತ್ತದೆ ಎಂದು ಚಾಣಕ್ಯ ನೀತಿಯಲ್ಲಿ ಹೇಳಲಾಗಿದೆ.
ಗಂಡ ಹೆಂಡತಿ ದಿನವನ್ನು ಪ್ರೀತಿಯಿಂದ ಆರಂಭಿಸಬೇಕು. ಮುಂಜಾನೆ ಬೇಗ ಎದ್ದು ಒಬ್ಬರನ್ನೊಬ್ಬರು ಅಪ್ಪಿಕೊಂಡು ಮುತ್ತಿಡಬೇಕು. ಇದರಿಂದ ಇಬ್ಬರ ಮೂಡ್ ದಿನವಿಡೀ ಫ್ರೆಶ್ ಆಗಿರುತ್ತದೆ.
ಇದನ್ನೂ ಓದಿ: Astro Tips: ವಸ್ತ್ರದಾನ ಮಾಡುವುದರ ಫಲವೇನು ಗೊತ್ತೇ..!
ದೇವರ ಆಶೀರ್ವಾದ ಪಡೆಯಬೇಕು. ಇದು ನಿಮ್ಮ ದೇಹದಲ್ಲಿ ಧನಾತ್ಮಕ ಶಕ್ತಿಯನ್ನು ಇಡುತ್ತದೆ. ಪತಿ ಪತ್ನಿಯರು ಮುಂಜಾನೆಯೇ ದೇವರ ಪೂಜೆ ಮಾಡಬೇಕು. ಇದು ನಿಮ್ಮ ಜೀವನದಲ್ಲಿ ಅದೃಷ್ಟವನ್ನು ತರುತ್ತದೆ.
ಪತಿ-ಪತ್ನಿಯರು ಬೆಳಗ್ಗೆ ಸ್ನಾನದ ನಂತರ ತುಳಸಿಗೆ ನೀರನ್ನು ಅರ್ಪಿಸಿದರೆ, ಅವರ ಸಂಬಂಧವು ಅವರ ಜೀವನದುದ್ದಕ್ಕೂ ಚೆನ್ನಾಗಿರುತ್ತದೆ. ವೈವಾಹಿಕ ಜೀವನದಲ್ಲಿ ಯಾವುದೇ ಸಮಸ್ಯೆಗಳಿರುವುದಿಲ್ಲ. ಸಂಪತ್ತನ್ನೂ ಗಳಿಸುವಿರಿ.
ಬೆಳಿಗ್ಗೆ ಪತಿ-ಪತ್ನಿ ಒಟ್ಟಿಗೆ ಯೋಗ ಮಾಡಬೇಕು. ಇದರಿಂದ ದೇಹ ಮತ್ತು ಆರೋಗ್ಯ ಎರಡೂ ಸುಧಾರಿಸುತ್ತದೆ. ಮನಸ್ಸು ಕೂಡ ಶಾಂತವಾಗಿರುತ್ತದೆ. ಧನಾತ್ಮಕ ಶಕ್ತಿಯು ಉತ್ಪತ್ತಿಯಾಗುತ್ತದೆ. ಮಾನಸಿಕ ಆರೋಗ್ಯವೂ ಉತ್ತಮವಾಗಿರುವುದರಿಂದ ದಂಪತಿಗಳ ನಡುವಿನ ಕಲಹಗಳು ಕಡಿಮೆಯಾಗುತ್ತವೆ.
ಇದನ್ನೂ ಓದಿ: ಅಪರೂಪದ ಕೆಂಪು ನಾಗರ ಹಾವು... ಮೂಲೆಯಲ್ಲಿ ಹೆಡೆ ಎತ್ತಿ ನಿಂತ ವಿಡಿಯೋ ವೈರಲ್!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.