Motor Vehicle Act : ಚಪ್ಪಲಿ ಹಾಕಿಕೊಂಡು ಬೈಕ್,ಸ್ಕೂಟರ್ ಓಡಿಸಿದರೆ ದಂಡ ವಿಧಿಸುತ್ತಿರುವ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ.ಚಪ್ಪಲಿ ಹಾಕಿಕೊಂಡು ಬೈಕ್ ಅಥವಾ ಸ್ಕೂಟರ್ ಓಡಿಸುವುದರಿಂದ ದಂಡ ವಿಧಿಸುವ ಹಿಂದಿನ ಉದ್ದೇಶ ಏನು ಎನ್ನುವುದು ಸದ್ಯ ಯುವಕರ ಮುಂದಿರುವ ಪ್ರಶ್ನೆ.ಚಪ್ಪಲಿ ಧರಿಸಿ ಬೈಕ್ ಓಡಿಸುವ ಕಾರಣಕ್ಕೆ ಸಂಚಾರಿ ಪೊಲೀಸರು ದಂಡ ವಿಧಿಸಬಹುದೇ? ಮೋಟಾರು ವಾಹನ ಕಾಯಿದೆಯಡಿ ಇದಕ್ಕೆ ಅನುಮತಿ ಇದೆಯೇ ಎನ್ನುವ ಪ್ರಶ್ನೆ ಇದೀಗ ಯುವ ಜನತೆಯನ್ನು ಅತಿಯಾಗಿ ಕಾಡುತ್ತಿದೆ.
ಸುರಕ್ಷತೆಯ ದೃಷ್ಟಿಯಿಂದ ಚಪ್ಪಲಿ ಧರಿಸಿ ಬೈಕ್ ಅಥವಾ ಸ್ಕೂಟರ್ ಓಡಿಸುವುದನ್ನು ನಿಷೇಧಿಸಲಾಗಿದೆ.ಅಲ್ಲದೆ ಚಪ್ಪಲಿ ಧರಿಸಿ ಬೈಕ್ ಯಾಕೆ ಓದಿಸಬಾರದು ಎನ್ನುವುದಕ್ಕೂ ಅನೇಕ ಕಾರಣಗಳಿವೆ.
ಇದನ್ನೂ ಓದಿ : ನೀವೂ ಲ್ಯಾಪ್‌ಟಾಪ್‌ನಲ್ಲಿ ವಾಟ್ಸಾಪ್ ಆನ್ ಮಾಡಿ ಹಾಗೆ ಬಿಡ್ತೀರಾ? ಚಾಟ್‌ಗಳ ಡಾಟಾ ಸೋರಿಕೆ ತಪ್ಪಿಸಲು ಈಗಲೇ ಈ ಸೆಟ್ಟಿಂಗ್ಸ್ ಬದಲಿಸಿ!
ಹಿಡಿತ ಮತ್ತು ನಿಯಂತ್ರಣದ ಕೊರತೆ: ನಿಮ್ಮ ಪಾದಗಳು ಸಾಮಾನ್ಯವಾಗಿ ಚಪ್ಪಲಿ ಅಥವಾ ಸ್ಯಾಂಡಲ್‌ಗಳಲ್ಲಿ ಕಡಿಮೆ ಹಿಡಿತವನ್ನು ಹೊಂದಿರುತ್ತವೆ.ಇದರಿಂದ ಬೈಕ್ ಅಥವಾ ಸ್ಕೂಟರ್‌ನ ಬ್ರೇಕ್ ಅಥವಾ ಗೇರ್ ಅನ್ನು ಸರಿಯಾಗಿ ನಿಯಂತ್ರಿಸಲು ಕಷ್ಟವಾಗುತ್ತದೆ. ಹಠಾತ್ ಬ್ರೇಕ್ ಹಾಕುವ ಅಗತ್ಯವಿದ್ದಲ್ಲಿ, ಚಪ್ಪಲಿಗಳನ್ನು ಧರಿಸುವುದರಿಂದ ನಿಮ್ಮ ಪಾದಗಳು ಜಾರಿಬೀಳಬಹುದು. ಇದು ಅಪಘಾತದ ಸಾಧ್ಯತೆಯನ್ನು ಹೆಚ್ಚಿಸುತ್ತದೆ.
ಪಾದದ ರಕ್ಷಣೆ: ಚಪ್ಪಲಿ ಧರಿಸಿ ಚಾಲನೆ ಮಾಡುವಾಗ ನಿಮ್ಮ ಪಾದಗಳು ಹೆಚ್ಚು ತೆರೆದುಕೊಳ್ಳುತ್ತವೆ.ಅಪಘಾತ ಅಥವಾ ಸ್ಕಿಡ್ ಆದಾಗ ಪಾದಗಳಿಗೆ ಗಾಯವಾಗಬಹುದು. ಬೂಟುಗಳನ್ನು ಧರಿಸುವುದು ನಿಮ್ಮ ಪಾದಗಳಿಗೆ ಹೆಚ್ಚಿನ ರಕ್ಷಣೆ ನೀಡುತ್ತದೆ.
ಜಾರುವ ಅಪಾಯ : ರಸ್ತೆ ಒದ್ದೆಯಾಗಿದ್ದರೆ ಅಥವಾ ಜಾರುವಂತಿದ್ದರೆ ಚಪ್ಪಲಿಗಳನ್ನು ಧರಿಸಿ ಸ್ಕೂಟರ್ ಅಥವಾ ಬೈಕು ಸವಾರಿ ಮಾಡುವುದರಿಂದ ಪಾದಗಳು ಸುಲಭವಾಗಿ ಜಾರಬಹುದು. ಇದರಿಂದ ಬ್ಯಾಲೆನ್ಸ್ ಹಾಳಾಗಬಹುದು.
ಕಾನೂನು ನಿಬಂಧನೆಗಳು : ಅನೇಕ ರಾಜ್ಯಗಳಲ್ಲಿ, ಚಪ್ಪಲಿಗಳನ್ನು ಧರಿಸಿ ಬೈಕ್ ಅಥವಾ ಸ್ಕೂಟರ್ ಸವಾರಿ ಮಾಡುವುದನ್ನು ಸಂಚಾರ ನಿಯಮಗಳ ಅಡಿಯಲ್ಲಿ ನಿಷೇಧಿಸಲಾಗಿದೆ. ಒಂದು ವೇಳೆ ಚಪ್ಪಲಿ ಹಾಕಿ ಬೈಕ್ ಅಥವಾ ಸ್ಕೂಟರ್ ಚಲಾಯಿಸಿದರೆ ದಂಡ ವಿಧಿಸಬಹುದು. ರಸ್ತೆ ಸುರಕ್ಷತೆಯನ್ನು ಹೆಚ್ಚಿಸುವುದು ಮತ್ತು ಅಪಘಾತಗಳನ್ನು ಕಡಿಮೆ ಮಾಡುವುದು ಇದರ ಉದ್ದೇಶವಾಗಿದೆ.
ಟ್ರಾಫಿಕ್ ರೂಲ್ಸ್ ಏನು ಹೇಳುತ್ತದೆ ? :
ಬೈಕ್ ಮತ್ತು ಸ್ಕೂಟರ್ ಚಲಾಯಿಸುವಾಗ ಚಪ್ಪಲಿಗಳನ್ನು ಧರಿಸಬೇಕೆ ಅಥವಾ ಬೂಟು ಧರಿಸಬೇಕೆ ಎನ್ನುವುದು ಸವಾರನ ಮೇಲೆ ನಿರ್ಧರಿತ. ಚಪ್ಪಲಿ ಧರಿಸಿ ಬೈಕ್ ಅಥವಾ ಸ್ಕೂಟರ್ ಓಡಿಸಿದರೆ, ಸಂಚಾರ ಪೊಲೀಸರು ದಂಡ ವಿಧಿಸುವಂತಿಲ್ಲ. ಮೋಟಾರು ವಾಹನ ಕಾಯ್ದೆ ಅಡಿಯಲ್ಲಿ ಇದಕ್ಕೆ ಅವಕಾಶವಿಲ್ಲ. ನಿತಿನ್ ಗಡ್ಕರಿ ಈ ಬಗ್ಗೆ ಪೋಸ್ಟ್ ಶೇರ್ ಮಾಡಿದ್ದು, ಚಪ್ಪಲಿ ಧರಿಸಿ ಬೈಕ್ ಅಥವಾ ಸ್ಕೂಟರ್ ಚಲಾಯಿಸಿದರೆ ಟ್ರಾಫಿಕ್ ಪೊಲೀಸರು ಚಲನ್ ನೀಡುವಂತಿಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.