ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಮತ್ತೊಮ್ಮೆ ಅಭೂತಪೂರ್ವ ಗೆಲುವಿನೊಂದಿಗೆ ಸರ್ಕಾರ ರಚಿಸುವತ್ತ ಹೆಜ್ಜೆ ಹಾಕಿದೆ. ಅದೇ ಸಮಯದಲ್ಲಿ ಭಾರಿ ನಿರೀಕ್ಷೆ ಹೊಂದಿದ್ದ ಬಿಜೆಪಿಗೆ ತೀವ್ರ ಮುಖಭಂಗವಾಗಿದೆ.
ದೆಹಲಿ ಚುನಾವಣಾ ಪ್ರಚಾರದಲ್ಲಿ ಬಿಜೆಪಿ ತನ್ನ ಎಲ್ಲ ಸಚಿವರು, ಮುಖ್ಯಮಂತ್ರಿಗಳು ಮತ್ತು ಪ್ರಧಾನ ಮಂತ್ರಿ ಮೋದಿ ಸಹಿತ ಭಾಗಿಯಾಗಿದ್ದರು. ಆದರೆ ಅರವಿಂದ್ ಕೇಜ್ರಿವಾಲ್ ಅವರು ಈ ಬಾರಿಯ ಚುನಾವಣೆಯಲ್ಲಿ ತಮ್ಮ ಸರ್ಕಾರ ಮಾಡಿದ ಕೆಲಸದ ಮೇಲೆ ಮತದಾರಿಗೆ ಮತ ಹಾಕಲು ಮನವಿ ಮಾಡಿಕೊಂಡರು.
ಅರವಿಂದ್ ಕೇಜ್ರಿವಾಲ್ ದೆಹಲಿಯಲ್ಲಿ ಜಯಗಳಿಸಿದ ನಂತರ ಪಕ್ಷದ ಕಚೇರಿ ತಲುಪಿ ಸಾರ್ವಜನಿಕರಿಗೆ ಧನ್ಯವಾದಗಳನ್ನು ಅರ್ಪಿಸಿದರು. ಅರವಿಂದ್ ಕೇಜ್ರಿವಾಲ್ ಮಾತನಾಡಿ, 'ದೆಹಲಿಯ ಜನರು 24 ಗಂಟೆಗಳ ಕಾಲ ವಿದ್ಯುತ್ ನೀಡುವವರಿಗೆ ಸಂದೇಶವನ್ನು ನೀಡಿದ್ದಾರೆ. ಅಗ್ಗದ ವಿದ್ಯುತ್ ನೀಡುತ್ತದೆ. ಮೊಹಲ್ಲಾ ಕ್ಲಿನಿಕ್ ನೀಡಲಿದೆ. ಮೂರನೇ ಬಾರಿಗೆ ಗೆದ್ದ ದೆಹಲಿಯ ಜನರಿಗೆ ಧನ್ಯವಾದಗಳು. ದೆಹಲಿ ಹೊಸ ರೀತಿಯ ರಾಜಕೀಯಕ್ಕೆ ಜನ್ಮ ನೀಡಿದೆ. ಅದರ ಹೆಸರು ಕೆಲಸದ ರಾಜಕೀಯ, ಈ ರಾಜಕೀಯವು 21 ನೇ ಶತಮಾನವನ್ನು ಮುಂದೆ ತೆಗೆದುಕೊಳ್ಳುತ್ತದೆ' ಎಂದರು.
ಇದೇ ಸಂದರ್ಭದಲ್ಲಿ ಅವರು ಹನುಮಾನ್ ಗೂ ಧನ್ಯವಾದ ಅರ್ಪಿಸಿದರು 'ಇಂದು ಮಂಗಳವಾರ, ಹನುಮಾನ್ ಜಿ ದಿನ, ಹನುಮಾನ್ ಜಿ ಇಂದು ದೆಹಲಿಯಲ್ಲಿ ತಮಗೆ ಆಶೀರ್ವಾದ ಮಾಡಿದ್ದಾರೆ. ಹನುಮಾನ್ ಜಿ ಕೂಡ ತುಂಬಾ ಧನ್ಯವಾದಗಳು. ನಾವು ದೆಹಲಿಯನ್ನು ಸುಂದರ ನಗರವನ್ನಾಗಿ ಮಾಡಬೇಕು. ನಿಮ್ಮೆಲ್ಲರಿಗೂ ತುಂಬಾ ಧನ್ಯವಾದಗಳು. ಒಟ್ಟಾಗಿ ನಾವು ದೆಹಲಿಯನ್ನು ಅಭಿವೃದ್ಧಿಪಡಿಸುತ್ತೇವೆ' ಎಂದರು.
ಮನೀಶ್ ಸಿಸೋಡಿಯಾ ವಿಜಯದ ನಂತರ ಬೆಂಬಲಿಗರೊಂದಿಗೆ ರೋಡ್ ಶೋ ನಡೆಸಿದರು.