Free Electricity: ಬಾಡಿಗೆ ಮನೆಯಲ್ಲಿರುವವರಿಗೆ ಉಚಿತ ವಿದ್ಯುತ್ ಪಡೆಯಲು ಇನ್ಮುಂದೆ ಹೊಸ ನಿಯಮ!

Karnataka Gruha Jyothi Scheme: ಬಾಡಿಗೆ ಮನೆಯಲ್ಲಿ ವಾಸಮಾಡುತ್ತಿರುವವರು ಒಂದು ವೇಳೆ ಮನೆ ಬದಲಾಯಿಸಿದರೆ, ಗೃಹಜ್ಯೋತಿ ಯೋಜನೆಯನ್ನು ಹೊಸ ಮನೆಯಲ್ಲಿ ಪಡೆಯಲು ಸಾಧ್ಯವಿರಲಿಲ್ಲ. ಆದರೆ ಈಗ ಸರ್ಕಾರವು ಇದಕ್ಕಾಗಿ ಒಂದು ಹೊಸ ವ್ಯವಸ್ಥೆಯನ್ನು ಜಾರಿಗೆ ತಂದಿದೆ.

Written by - Puttaraj K Alur | Last Updated : Aug 12, 2024, 08:34 PM IST
  • ಗೃಹಜ್ಯೋತಿ ಯೋಜನೆಯ ವಿಚಾರದಲ್ಲಿದ್ದ ಸಮಸ್ಯೆಗೆ ಪರಿಹಾರ ಸಿಕ್ಕಿದೆ
  • ಬಾಡಿಗೆ ಮನೆಯಲ್ಲಿರುವವರಿಗೆ ಉಚಿತ ವಿದ್ಯುತ್ ಪಡೆಯಲು ಇನ್ಮುಂದೆ ಹೊಸ ನಿಯಮ
  • RR ನಂಬರ್ ಡಿ-ಲಿಂಕ್‌ ಮಾಡುವ ಮೂಲಕ ಯೋಜನೆಯ ಸೌಲಭ್ಯ ಪಡೆಯಿರಿ
Free Electricity: ಬಾಡಿಗೆ ಮನೆಯಲ್ಲಿರುವವರಿಗೆ ಉಚಿತ ವಿದ್ಯುತ್ ಪಡೆಯಲು ಇನ್ಮುಂದೆ ಹೊಸ ನಿಯಮ!   title=
ಗೃಹಜ್ಯೋತಿ ಯೋಜನೆ

Free Electricity: ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಗೃಹಜ್ಯೋತಿ ಯೋಜನೆಯನ್ನು ಜಾರಿಗೆ ತಂದಿದೆ. ಇದರಿಂದ ರಾಜ್ಯದ ಲಕ್ಷಾಂತರ ಜನರಿಗೆ ಸಹಾಯ ಆಗುತ್ತಿದೆ. ವಿದ್ಯುತ್ ಬಿಲ್ ಕಟ್ಟುವ ಸಮಸ್ಯೆ ಇಲ್ಲದೇ ಹಲವರು ಉಚಿತ ವಿದ್ಯುತ್ ಬಳಕೆ ಮಾಡುತ್ತಿದ್ದಾರೆ. ಈ ಯೋಜನೆಯಡಿ ಜನರಿಗೆ ಪ್ರತಿ ತಿಂಗಳು 200 ಯೂನಿಟ್‌ವರೆಗೂ ಉಚಿತ ವಿದ್ಯುತ್ ಸೌಲಭ್ಯ ಸಿಗುತ್ತಿದೆ. ಕಳೆದ 1 ವರ್ಷದಿಂದ ಎಷ್ಟು ವಿದ್ಯುತ್ ಬಳಕೆ ಮಾಡಿರುತ್ತಾರೋ ಅದರ ಆವರೇಜ್‌ನಷ್ಟು ವಿದ್ಯುತ್ ಅನ್ನು ಜನರು ಉಚಿತವಾಗಿ ಬಳಸಬಹುದು. ಇದರ ಜೊತೆಗೆ 10% ಹೆಚ್ಚುವರಿ ವಿದ್ಯುತ್ ಸಹ ಬಳಕೆ ಮಾಡಬಹುದು. ಇದು ರಾಜ್ಯ ಸರ್ಕಾರವು ಗೃಹಜ್ಯೋತಿ ಫಲಾನುಭವಿಗಳಿಗೆ ನೀಡುತ್ತಿರುವ ಕೊಡುಗೆ ಆಗಿದೆ. 

ಗೃಹಜ್ಯೋತಿ ಯೋಜನೆ ಶುರುವಾಗಿ 1 ವರ್ಷ ತುಂಬುತ್ತಿರುವ ಈ ಸಮಯದಲ್ಲಿ ಇದೀಗ ಸರ್ಕಾರವು ಜನರಿಗಾಗಿ ಮತ್ತೊಂದು ಹೊಸ ಸೇವೆಯನ್ನು ಜಾರಿಗೆ ತಂದಿದೆ. ಇದರ ಮೂಲಕ ಗೃಹಜ್ಯೋತಿ ಯೋಜನೆಯ ವಿಚಾರದಲ್ಲಿದ್ದ ಒಂದು ಸಮಸ್ಯೆಗೆ ಪರಿಹಾರ ಸಿಕ್ಕಿದೆ. ಅಷ್ಟಕ್ಕೂ ಈ ಸೇವೆ ಯಾವುದು? ಇದರಿಂದ ಯಾವ ರೀತಿಯ ಪ್ರಯೋಜನ ಇದೆ? ಪೂರ್ತಿಯಾಗಿ ತಿಳಿದುಕೊಳ್ಳಿರಿ...

ಇದನ್ನೂ ಓದಿ: SEBI ಗೆ ಈಗ ಗಂಟೆ ಕಟ್ಟುವವರ್ಯಾರು? ಹಿಂಡೆನ್‌ಬರ್ಗ್ ರಿಸರ್ಚ್ ನಲ್ಲಿದೆ ಬುಚ್-ಅದಾನಿ ಲಿಂಕ್..!

ಬಾಡಿಗೆ ಮನೆಯಲ್ಲಿ ವಾಸಮಾಡುತ್ತಿರುವವರು ಒಂದು ವೇಳೆ ಮನೆ ಬದಲಾಯಿಸಿದರೆ, ಗೃಹಜ್ಯೋತಿ ಯೋಜನೆಯನ್ನು ಹೊಸ ಮನೆಯಲ್ಲಿ ಪಡೆಯಲು ಸಾಧ್ಯವಿರಲಿಲ್ಲ. ಆದರೆ ಈಗ ಸರ್ಕಾರವು ಇದಕ್ಕಾಗಿ ಒಂದು ಹೊಸ ವ್ಯವಸ್ಥೆಯನ್ನು ಜಾರಿಗೆ ತಂದಿದ್ದು, ಇದರ ಮೂಲಕ ನಿಮ್ಮ ಮನೆಯ RR ನಂಬರ್ ಅನ್ನು ಡಿ-ಲಿಂಕ್‌ ಮಾಡಿ ಹೊಸ ಮನೆಯ RR ನಂಬರ್ ಅನ್ನು ಲಿಂಕ್‌ ಮಾಡುವ ಮೂಲಕ ಮನೆ ಬದಲಾವಣೆ ಆದರೂ ಸಹ ಗೃಹಜ್ಯೋತಿ ಯೋಜನೆಯ ಸೌಲಭ್ಯ ಪಡೆಯಬಹುದು. ಇದು ಸರ್ಕಾರದ ಹೊಸ ವ್ಯವಸ್ಥೆ ಆಗಿದ್ದು, ಈ ಪ್ರಕ್ರಿಯೆ ಮಾಡುವುದು ಹೇಗೆ ಅನ್ನೋದರ ಮಾಹಿತಿ ಇಲ್ಲಿದೆ ನೋಡಿ...

RR ನಂಬರ್ ಡಿ-ಲಿಂಕ್‌ ಮಾಡುವ ಪ್ರಕ್ರಿಯೆ

  • ಸೇವಾ ಸಿಂಧು ಪೋರ್ಟಲ್‌ ಮೂಲಕ RR ನಂಬರ್ ಡಿ-ಲಿಂಕ್‌ ಮಾಡಬೇಕಾಗುತ್ತದೆ. ಇದಕ್ಕಾಗಿ ನೀವು ಮೊದಲು ಅಧಿಕೃತ ವೆಬ್‌ಸೈಟ್‌ https://sevasindhu.karnataka.gov.in/ ಭೇಟಿ ನೀಡಬೇಕು.
  • ಇಲ್ಲಿ ನೀವು ನಿಮ್ಮ ಮನೆಯ ಗೃಹಜ್ಯೋತಿ ಯೋಜನೆಗೆ ಲಿಂಕ್‌ ಮಾಡಿರುವ ಆಧಾರ್ ನಂಬರ್ ಎಂಟರ್‌ ಮಾಡಿ, Get Details ಎನ್ನುವ ಆಪ್ಶನ್ ಸೆಲೆಕ್ಟ್ ಮಾಡಬೇಕು.
  • ಈಗ ನೀವು ಆಧಾರ್ ಕಾರ್ಡ್ ದೃಢೀಕರಿಸಲು OTP ಪರಿಶೀಲಿಸಿ, ಅದನ್ನು ನಮೂದಿಸಿ, ದೃಢೀಕರಿಸಿ.
  • ಇದೆಲ್ಲವೂ ಮುಗಿದ ನಂತರ ನಿಮ್ಮ ಹಳೆಯ RR ನಂಬರ್ ಡಿ-ಲಿಂಕ್‌ ಮಾಡಿ, ಹಾಗೆಯೇ ಹೊಸ RR ನಂಬರ್ ಲಿಂಕ್‌ ಮಾಡಬೇಕು.

ಇದನ್ನೂ ಓದಿ: Gruha Lakshmi Scheme: ಜೂನ್ ತಿಂಗಳ 'ಗೃಹಲಕ್ಷ್ಮಿ' ಹಣ ಬರದಿದ್ರೆ ಇಂದೇ ಈ ಕೆಲಸ ಮಾಡಿ

ಗೃಹಜ್ಯೋತಿ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೆ ತಂದು 1 ವರ್ಷ ಕಳೆಯುತ್ತಿದೆ. ಈ ವೇಳೆ ರಾಜ್ಯದ ಸುಮಾರು 1.65 ಕೋಟಿ ಜನರು ಗೃಹಜ್ಯೋತಿ ಯೋಜನೆಗೆ ನೋಂದಾಯಿಸಿಕೊಂಡು ಉಚಿತ ವಿದ್ಯುತ್ ಪಡೆಯುತ್ತಿದ್ದಾರೆ. ಇದರಿಂದ ಬಡವರ್ಗದ ಹಾಗೂ ಮಧ್ಯಮ ವರ್ಗದ ಜನರಿಗೆ ಬಹಳ ಸಹಾಯ ಆಗುತ್ತಿದೆ ಎಂದು ತಿಳಿದುಬಂದಿದೆ. ಇದರ ಬಗ್ಗೆ ಸಚಿವರಾದ ಕೆ.ಜೆ.ಜಾರ್ಜ್ ಮಾತನಾಡಿ ಸಂತೋಷ ವ್ಯಕ್ತಪಡಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
 

Trending News