Rice hack for weight loss: ಅನ್ನದ ಜೊತೆಗೆ ವಿವಿಧ ರೀತಿಯ ತರಕಾರಿಗಳನ್ನು ಸೇರಿಸಿ ತಿನ್ನುವುದರಿಂದ, ಸುವಾಸನೆ ಮತ್ತು ಹಲವು ಪೌಷ್ಠಿಕಾಂಶಗಳು ಫೈಬರ್, ಜೀವಸತ್ವಗಳು ಮತ್ತು ಖನಿಜಗಳೂ ದೊರಕುತ್ತವೆ.
Rice hack for weight loss: ಅನೇಕರು ಸಣ್ಣ ಆಗಲು, ತೂಕ ಇಳಿಸಿಕೊಳ್ಳಲು ಅನ್ನ ತಿನ್ನುವುದನ್ನೇ ಬಿಟ್ಟು ಬಿಡುತ್ತಾರೆ. ಆದರೆ ಹೀಗೆ ಮಾಡುವ ಬದಲು ಅನ್ನವನ್ನು ತಿನ್ನುತ್ತಲೇ ತೂಕ ಇಳಿಸಿಕೊಳ್ಳಲು ಕೆಲವು ಸರಳ ಸಲಹೆಗಳನ್ನು ಪಾಲಿಸಬೇಕು. ಬಿಳಿ ಅಕ್ಕಿಯಲ್ಲಿ ಹೆಚ್ಚಿನ ಕಾರ್ಬೋಹೈಡ್ರೇಟ್ ಹಾಗೂ ಹೆಚ್ಚಿನ ಕ್ಯಾಲೋರಿ ಇರುವ ಕಾರಣ ಇದನ್ನು ಹೆಚ್ಚಿನವರು ತಿನ್ನುವುದಿಲ್ಲ. ಆದರೆ ನೀವು ಸೇವಿಸಬೇಕಾದ ಕಾರ್ಬೋಹೈಡ್ರೇಟ್ ಪ್ರಮಾಣವನ್ನು ಗಮನದಲ್ಲಿಟ್ಟುಕೊಂಡು ಅನ್ನವನ್ನು ತಿನ್ನಬಹುದು. ನಿಯಮಿತ ವ್ಯಾಯಾಮ ಮಾಡುವುದು ಆರೋಗ್ಯಕರ ಹವ್ಯಾಸವಾಗಿದೆ. ಕ್ಯಾಲೊರಿಗಳನ್ನು ಬರ್ನ್ ಮಡಲು ಮತ್ತು ಚಯಾಪಚಯವನ್ನು ಹೆಚ್ಚಿಸಲು ಇದು ಸಹಾಯ ಮಾಡುತ್ತದೆ. ಅನ್ನ ತಿಂದರೂ ದಪ್ಪ ಆಗದ ಹಾಗೆ ನೋಡಿಕೊಳ್ಳುವುದು ಹೇಗೆ ಅನ್ನೋ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ...
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಬಾಸ್ಮತಿ, ಜಾಸ್ಮಿನ್ ಅಕ್ಕಿಯನ್ನು ಆರಿಸಿ, ಇವುಗಳು ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಅನ್ನು ಹೊಂದಿದ್ದು, ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ನಿಧಾನ ಮತ್ತು ಸ್ಥಿರವಾದ ಏರಿಕೆಗೆ ಕಾರಣವಾಗುವುದರ ಜೊತೆಗೆ ಬೇಗನೆ ಹಸಿವು ಕೂಡ ಆಗುವುದಿಲ್ಲ.
ನೀವು ಎಷ್ಟು ಅನ್ನ ತಿನ್ನುತ್ತೀರಿ ಎನ್ನುವುದು ಬಹಳ ಮುಖ್ಯವಾಗಿದೆ. ಸಣ್ಣ ಬೌಲ್‌ಗಳು ಅಥವಾ ಪ್ಲೇಟ್‌ಗಳನ್ನು ಬಳಸಬೇಕು. ಇವುಗಳು 100-150 ಕ್ಯಾಲೊರಿಗಳನ್ನು ಹೊಂದಿದ್ದು, ನಿಮಗೆ ಅನ್ನ ತಿಂದ ನಂತರ ಹೆಚ್ಚು ಭಾರ ಎನಿಸುವುದಿಲ್ಲ.
ಅನ್ನವನ್ನು ಚಿಕನ್ ಗ್ರಿಲ್, ಮೀನು, ತೋಫು ಅಥವಾ ಕಾಳುಗಳೊಂದಿಗೆ ತಿಂದಾಗ ನಿಮ್ಮ ದೇಹವು ಹೆಚ್ಚು ಕ್ಯಾಲೊರಿಗಳನ್ನು ಬರ್ನ್ ಮಾಡಿ ಅದನ್ನು ಜೀರ್ಣಿಸಿಕೊಳ್ಳುತ್ತದೆ. ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.
ಅನ್ನದ ಜೊತೆಗೆ ವಿವಿಧ ರೀತಿಯ ತರಕಾರಿಗಳನ್ನು ಸೇರಿಸಿ ತಿನ್ನುವುದರಿಂದ, ಸುವಾಸನೆ ಮತ್ತು ಹಲವು ಪೌಷ್ಠಿಕಾಂಶಗಳು ಫೈಬರ್, ಜೀವಸತ್ವಗಳು ಮತ್ತು ಖನಿಜಗಳೂ ದೊರಕುತ್ತವೆ. ಅಕ್ಕಿಯನ್ನು ಹೆಚ್ಚು ಹುರಿಯುವುದು ಹಾಗೂ ಅತಿಯಾದ ಎಣ್ಣೆಯಿಂದ ಬೇಯಿಸುವುದನ್ನು ತಪ್ಪಿಸಬೇಕು. ಹಬೆಯಲ್ಲಿ ಬೇಯಿಸುವುದು, ಕುದಿಸುವುದು ಅಥವಾ ಅಕ್ಕಿ ಕುಕ್ಕರ್ ಅನ್ನು ಬಳಸುವುದು ಆರೋಗ್ಯಕರ ಅಡುಗೆ ವಿಧಾನಗಳಾಗಿವೆ.
ಅನ್ನವನ್ನು ಬೆಳಗ್ಗೆ ಸೇವಿಸುವುದರಿಂದ ನಿಮಗೆ ದಿನವಿಡೀ ಶಕ್ತಿ ದೊರೆಯುತ್ತದೆ. ಕ್ಯಾಲೊರಿಗಳನ್ನು ಬರ್ನ್ ಮಾಡಲು ದಿನವಿಡೀ ಸಾಕಷ್ಟು ಸಮಯ ದೊರಕುತ್ತದೆ. ಆದರೆ, ಹೆಚ್ಚುವರಿ ಕ್ಯಾಲೊರಿ ಸಂಗ್ರಹವನ್ನು ತಡೆಯಲು ರಾತ್ರಿ ಹೊತ್ತು ಅನ್ನ ಸೇವನೆ ಕಡಿಮೆ ಮಾಡಬೇಕು.