"ಇದು ಶುರುವಾಗಿದ್ದು ಜೊತೆ ಜೊತೆಯಲಿ ಸಿನಿಮಾ ನಂತರ... ಇವರೇ ನನ್ನ ಸವತಿ"- ನೆನಪಿರಲಿ ಪ್ರೇಮ್‌ ಪತ್ನಿ ಜ್ಯೋತಿ ಅಚ್ಚರಿಯ ಹೇಳಿಕೆ

Prem wife Jyoti statement: ಸ್ಯಾಂಡಲ್ವುಡ್‌ ಮುದ್ದಾದ ಕಪಲ್‌ʼಗಳಲ್ಲಿ ನೆನಪಿರಲಿ ಪ್ರೇಮ್ ಮತ್ತು ಜ್ಯೋತಿಯವರ ಜೋಡಿ ಕೂಡ ಒಂದು. ಆದರೆ ಇದೀಗ ಜ್ಯೋತಿಯವರು ನೀಡಿರುವ ಹೇಳಿಕೆಯೊಂದು ಸಖತ್‌ ವೈರಲ್‌ ಆಗಿದ್ದು ಅಚ್ಚರಿಯನ್ನೂ ಮೂಡಿಸಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /6

ಸ್ಯಾಂಡಲ್ವುಡ್‌ ಮುದ್ದಾದ ಕಪಲ್‌ʼಗಳಲ್ಲಿ ನೆನಪಿರಲಿ ಪ್ರೇಮ್ ಮತ್ತು ಜ್ಯೋತಿಯವರ ಜೋಡಿ ಕೂಡ ಒಂದು. ಆದರೆ ಇದೀಗ ಜ್ಯೋತಿಯವರು ನೀಡಿರುವ ಹೇಳಿಕೆಯೊಂದು ಸಖತ್‌ ವೈರಲ್‌ ಆಗಿದ್ದು ಅಚ್ಚರಿಯನ್ನೂ ಮೂಡಿಸಿದೆ.  

2 /6

ಇಂದು ತರುಣ್‌ ಸುಧೀರ್‌, ನಟಿ ಸೋನಲ್‌ ಮೊಂಥೆರೋ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಅನೇಕ ಗಣ್ಯರು, ಚಿತ್ರರಂಗದ ಕಲಾವಿದರು ಆಗಮಿಸಿ ನವ ವಧು-ವರನಿಗೆ ಶುಭಕೋರಿದ್ದಾರೆ.  

3 /6

ಇನ್ನು ಗೆಳೆಯನ ಮದುವೆ ಸಂಭ್ರಮಕ್ಕೆ ಕುಟುಂಬ ಸಮೇತರಾಗಿ, ನಟ ಪ್ರೇಮ್ ಆಗಮಿಸಿದ್ದಾರೆ. ಇದೇ ಸಂದರ್ಭದಲ್ಲಿ ಮಾಧ್ಯಮದ ಮುಂದೆ ಮಾತನಾಡಿದ ಅವರು, ತಮಾಷೆಯಾಗಿ, ಇವತ್ತು ಇವರ (ಜ್ಯೋತಿ) ಸವತಿ ಮದುವೆ" ಎಂದು ಹೇಳಿದ್ದಾರೆ. ಈ ಹೇಳಿಕೆಗೆ ಒಂದು ಹಿನ್ನೆಲೆಯಿದೆ.  

4 /6

ಒಂದು ವರ್ಷದ ಹಿಂದೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿದ್ದ, ಗೋಲ್ಡನ್‌ ಸ್ಟಾರ್‌ ಗಣೇಶ್‌ ನಡೆಸಿಕೊಡುತ್ತಿದ್ದ ʼಗೋಲ್ಡನ್‌ ಗ್ಯಾಂಗ್ʼ ಟಾಕ್‌ ಶೋನಲ್ಲಿ ಪ್ರೇಮ್‌, ಜ್ಯೋತಿ, ತರುಣ್‌ ಸುಧೀರ್‌, ಶರಣ್‌ ಭಾಗವಹಿಸಿದ್ದರು.  

5 /6

ಆ ಸಂದರ್ಭದಲ್ಲಿ ಹೋಸ್ಟ್‌ ಗಣೇಶ್‌ ಅವರು, "ಮೇಡಂ ನಿಮ್ಮ ಸವತಿ ಬಗ್ಗೆ ಹೇಳಿ, ಫಸ್ಟ್‌ ಸವತಿ ಯಾರು" ಎಂದಿದ್ದಾರೆ. ಇದಕ್ಕೆ ಜೋರಾಗಿ ಎಲ್ಲರೂ ನಕ್ಕಿದ್ದಲ್ಲದೆ, ಜ್ಯೋತಿ ಪ್ರತಿಕ್ರಿಯಿಸಿ, "ಆ ಕಡೆ ಕುಳಿತಿದ್ದಾರಲ್ಲ ಅವರೇ" ಎನ್ನುತ್ತಾ ತರುಣ್‌ ಸುಧೀರ್‌ ಕಡೆ ತೋರಿಸಿದ್ದಾರೆ. "ಇದು ಜೊತೆಜೊತೆಯಲಿ ಸಿನಿಮಾ ಶೂಟಿಂಗ್‌ ಸಂದರ್ಭದಲ್ಲಿ ಶುರುವಾಗಿದ್ದು. ಶಾಪಿಂಗ್‌, ಮೂವಿ, ಎಲ್ಲೇ ಹೋದರೂ ಅವರ ಜೊತೆನೇ ಹೋಗ್ತಾರೆ. ಅದಕ್ಕೆ ನಾನು ಅವ್ರನ್ನ ಸವತಿ ಅಂತ ಫಿಕ್ಸ್‌ ಮಾಡಿಕೊಂಡಿದ್ದೇನೆ" ಎಂದು ಹೇಳಿದ್ದಾರೆ.  

6 /6

ಇನ್ನು ಇದರ ವಿಡಿಯೋ ಯೂಟ್ಯೂಬ್‌ʼನಲ್ಲಿ ಲಭ್ಯವಿದೆ.