ಮಕ್ಕಳನ್ನು ಮಾಡಿಕೊಳ್ಳುವುದು ಬೇಡ ಎಂಬ ಕಂಡಿಷನ್‌ ಮೇಲೆ ವಿವಾಹ.. ಮದುವೆಯಾದ ಎರಡೇ ತಿಂಗಳಲ್ಲಿ ಗರ್ಭಿಣಿಯಾದ ನಟಿ ಈಕೆ!!

Famous Actress: ನಟಿ ಕವಿತಾ ಚಿತ್ರರಂಗದ ಹಿರಿಯ ನಟಿ. ಅವರು 11 ನೇ ವಯಸ್ಸಿನಲ್ಲಿ ಬಾಲ ಕಲಾವಿದೆಯಾಗಿ ನಟಿಸಲು ಪ್ರಾರಂಭಿಸಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ನೂರಾರು ಚಿತ್ರಗಳಲ್ಲಿ ನಟಿಸಿದ್ದಾರೆ.    

Written by - Savita M B | Last Updated : Aug 7, 2024, 04:31 PM IST
  • ನಟಿ ಕವಿತಾ ಚಿತ್ರರಂಗದ ಹಿರಿಯ ನಟಿ.
  • ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ ನಟಿ ಕವಿತಾ
ಮಕ್ಕಳನ್ನು ಮಾಡಿಕೊಳ್ಳುವುದು ಬೇಡ ಎಂಬ ಕಂಡಿಷನ್‌ ಮೇಲೆ ವಿವಾಹ.. ಮದುವೆಯಾದ ಎರಡೇ ತಿಂಗಳಲ್ಲಿ ಗರ್ಭಿಣಿಯಾದ ನಟಿ ಈಕೆ!! title=

Actress Kavitha: ನಟಿ ಕವಿತಾ ಚಿತ್ರರಂಗದ ಹಿರಿಯ ನಟಿ. ಅವರು 11 ನೇ ವಯಸ್ಸಿನಲ್ಲಿ ಬಾಲ ಕಲಾವಿದೆಯಾಗಿ ನಟಿಸಲು ಪ್ರಾರಂಭಿಸಿ.. ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ನೂರಾರು ಚಿತ್ರಗಳಲ್ಲಿ ನಟಿಸಿದ್ದಾರೆ. 

ಎನ್‌ಟಿಆರ್, ಎಎನ್‌ಎನ್‌ಆರ್, ಕೃಷ್ಣ, ಚಿರಂಜೀವಿ ಮುಂತಾದ ದಿಗ್ಗಜರ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ನಾಯಕಿಯಾಗಿ ಮತ್ತು ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಎರಡರಲ್ಲೂ ಮಿಂಚಿದ್ದರು.. ಆದರೆ ಇವರ ವೃತ್ತಿಜೀವನದಂತೆ ವೈಯಕ್ತಿಕ ಜೀವನ ಯಶಸ್ಸಿನಿಂದ ಕೂಡಿರಲಿಲ್ಲ.. 

ಇದನ್ನೂ ಓದಿ-ತರುಣ್‌ ಸುಧೀರ್‌ ಕೈ ಹಿಡಿಯುತ್ತಿರುವ ಬೆನ್ನಲ್ಲೆ ಸೋನಾಲ್‌ ಸಖತ್‌ ಪಾರ್ಟಿ..ಇಲ್ಲಿವೆ ನೋಡಿ ಫೋಟೋಸ್‌

ಕೋವಿಡ್ ಸಮಯದಲ್ಲಿ ಕವಿತಾ ತನ್ನ ಪತಿ ಮತ್ತು ಮಗನನ್ನು ಒಂದೇ ಬಾರಿಗೆ ಕಳೆದುಕೊಂಡರು.. ಆ ದುರಂತಗಳಿಂದ ಅವರು ಇಂದಿಗೂ ಚೇತರಿಸಿಕೊಳ್ಳುತ್ತಿದ್ದಾಳೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಕವಿತಾ ತಮ್ಮ ಕುಟುಂಬದ ಬಗ್ಗೆ ಸಂವೇದನಾಶೀಲ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. 

ಇದನ್ನೂ ಓದಿ-ದಿಗಂತ್ - ಧನ್ಯಾರಾಮ್‌ ನಟನೆಯ ಪೌಡರ್ ಚಿತ್ರದ ಟ್ರೇಲರ್ ಬಿಡುಗಡೆ

ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ ನಟಿ ಕವಿತಾ "ನಾನು ತುಂಬಾ ಚಿಕ್ಕ ವಯಸ್ಸಿನಲ್ಲೇ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟೆ. ಮದುವೆ ಬೇಗ ಆಯಿತು. ಆ ಸಮಯದಲ್ಲಿ ಪ್ರೀತಿಯ ಬಗ್ಗೆ ಹೆಚ್ಚು ತಿಳಿದಿರಲಿಲ್ಲ. ಆದರೆ ನನ್ನ ಭಾವಿ ಪತಿ ಸೂಪರ್ ಸ್ಟಾರ್ ಕೃಷ್ಣ.. ರಿಷಿ ಕಪೂರ್ ಅವರಂತೆ ಆಗಬೇಕು ಎಂದು ಕನಸು ಕಾಣುತ್ತಿದ್ದೆ. ಮದುವೆಯ ನಂತರ ನನ್ನ ಗಂಡನನ್ನು ಪ್ರೀತಿಸಿದೆ. ಆದರೆ ಹಿರಿಯರು ಮದುವೆ ನಿಶ್ಚಯಿಸಿದ ನಂತರ ನಾವು ಅವರಿಗೆ ಷರತ್ತು ಹಾಕಿದ್ದೆವು.. ನನಗೆ ಮಕ್ಕಳು ಬೇಡ ಎಂದು ಹೇಳಿದೆ. ಅವರು ಅದನ್ನು ತಮಾಷೆ ಎಂದು ಭಾವಿಸಿದರು.. ಮದುವೆ ನಡೆಯಿತು. ನನ್ನ ಅತ್ತೆ ಮಗುವನ್ನುನ ಬೇಗ ಕೊಡಿ ಎಂದು ಕೇಳುತ್ತಿದ್ದರು.. ಆಗ ನಾನು ನನಗೆ ಮಕ್ಕಳಾಗುವುದಿಲ್ಲ ಎಂದು ಹೇಳಿದೆ.. 

ಅದೇ ವೇಳೆ ನಮ್ಮ ಮನೆಯಲ್ಲಿ ನಡೆದ ದುರಂತದ ಬಗ್ಗೆ ನೆನಪಿಸಿಕೊಂಡೆ. ನಿನಗೆ ಒಬ್ಬ ಕಿರಿಯ ಸಹೋದರನಿರುತ್ತಿದ್ದ ಆತ ಹುಟ್ಟಿದ ಕೂಡಲೇ ಇಹಲೋಕ ತ್ಯಜಿಸಿದ ಹೀಗಾಗಿ ಮಕ್ಕಳು ಹುಟ್ಟುವುದು ಬೇಡ ಸಾಯುವುದು ಬೇಡ ಎಂದು ನಿರ್ಧರಿಸಿದ್ದೆ..  ಆಗ ನನ್ನ ತಾಯಿ ಮತ್ತು ನನ್ನ ಪತಿ ನನ್ನನ್ನು ಪ್ರೋತ್ಸಾಹಿಸಿದರು. ಅದರಿಂದ ಹೊರಗೆ ಬಾ. ಸಹೋದರನ ಬಗ್ಗೆ ಯೋಚಿಸುತ್ತಾ ಕುಳಿತರೆ ಬೇಸರವಾಗುತ್ತದೆ ಎಂದರು" ಎಂದು ಹೇಳಿಕೊಂಡಿದ್ದಾರೆ..    

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News