Budget 2020: ಮೂಲಸೌಕರ್ಯ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನ ನೀಡಿದ ಸರ್ಕಾರ

2020-21ರಲ್ಲಿ ಸಾರಿಗೆ ಮೂಲಸೌಕರ್ಯಕ್ಕಾಗಿ 1.70 ಲಕ್ಷ ಕೋಟಿ ರೂ. 2024 ರ ವೇಳೆಗೆ ಉಡಾನ್ ಯೋಜನೆಯಡಿ ಇನ್ನೂ 100 ವಿಮಾನ ನಿಲ್ದಾಣಗಳನ್ನು ನಿರ್ಮಿಸಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.

Written by - Yashaswini V | Last Updated : Feb 1, 2020, 01:18 PM IST
Budget 2020: ಮೂಲಸೌಕರ್ಯ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನ ನೀಡಿದ ಸರ್ಕಾರ title=

ನವದೆಹಲಿ: ಮುಂದಿನ 5 ವರ್ಷಗಳಲ್ಲಿ ಸರ್ಕಾರವು ಮೂಲಸೌಕರ್ಯಕ್ಕಾಗಿ 100 ಲಕ್ಷ ಕೋಟಿ ಖರ್ಚು ಮಾಡುವುದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕಟಿಸಿದರು. 2020-21ರಲ್ಲಿ ಸಾರಿಗೆ ಮೂಲಸೌಕರ್ಯಕ್ಕಾಗಿ 1.70 ಲಕ್ಷ ಕೋಟಿ ರೂ. 2024 ರ ವೇಳೆಗೆ ಉಡಾನ್ ಯೋಜನೆಯಡಿ ಇನ್ನೂ 100 ವಿಮಾನ ನಿಲ್ದಾಣಗಳನ್ನು ನಿರ್ಮಿಸಲಾಗುವುದು ಎಂದವರು ವಿವರಿಸಿದರು.

'ದೇಶದಲ್ಲಿ ಮೂಲಸೌಕರ್ಯಗಳನ್ನು ಉತ್ತೇಜಿಸಲು, ಸರ್ಕಾರವು ಹೆಚ್ಚಿನ ಹೂಡಿಕೆ ಮಾಡುತ್ತದೆ. ಇದರ ಅಡಿಯಲ್ಲಿ ಆಧುನಿಕ ರೈಲ್ವೆ ನಿಲ್ದಾಣಗಳು, ವಿಮಾನ ನಿಲ್ದಾಣಗಳು, ಬಸ್ ನಿಲ್ದಾಣಗಳು ಮತ್ತು ಲಾಜಿಸ್ಟಿಕ್ ಕೇಂದ್ರಗಳನ್ನು ನಿರ್ಮಿಸಲಾಗುವುದು. ದೆಹಲಿ-ಮುಂಬೈ ಎಕ್ಸ್‌ಪ್ರೆಸ್ ವೇ, ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್ ವೇ ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ' ಎಂದು ವಿತ್ತ ಸಚಿವರು ತಿಳಿಸಿದರು.

'ಹೂಡಿಕೆ ಕ್ಲಿಯರೆನ್ಸ್ ಸೆಲ್ ರಚಿಸಲಾಗುವುದು ಎಂದು ಮಾಹಿತಿ ನೀಡಿದ ಹಣಕಾಸು ಸಚಿವರು, ಎಲೆಕ್ಟ್ರಾನಿಕ್ ಉತ್ಪಾದನಾ ಉದ್ಯಮಕ್ಕಾಗಿ ಹೊಸ ಯೋಜನೆಯನ್ನು ಪ್ರಾರಂಭಿಸಲಾಗುವುದು. ಪ್ರತಿ ಜಿಲ್ಲೆಯಲ್ಲೂ ರಫ್ತು ಕೇಂದ್ರವನ್ನು ಸ್ಥಾಪಿಸುವ ಯೋಜನೆಯನ್ನು ಪ್ರಾರಂಭಿಸಲಾಗುವುದು' ಎಂದರು.

ಶಿಕ್ಷಣ ಕ್ಷೇತ್ರಕ್ಕೆ 99,300 ಕೋಟಿ ರೂಪಾಯಿಗಳ ಪ್ರಸ್ತಾವನೆ ಇದೆ. ರಾಷ್ಟ್ರೀಯ ಪೊಲೀಸ್ ವಿಶ್ವವಿದ್ಯಾಲಯ ಮತ್ತು ನ್ಯಾಯಾಂಗ ವಿಜ್ಞಾನ ವಿಶ್ವವಿದ್ಯಾಲಯದ ಪ್ರಸ್ತಾಪ. ಕೌಶಲ್ಯ ಅಭಿವೃದ್ಧಿಗೆ 3 ಸಾವಿರ ಕೋಟಿ ಪ್ರಸ್ತಾವನೆ ಇರುವುದಾಗಿ ನಿರ್ಮಲಾ ಸೀತಾರಾಮನ್ ಹೇಳಿದರು. ಡಿಪ್ಲೊಮಾ ತರಬೇತಿಗಾಗಿ ಮಾರ್ಚ್ 2021ರವರೆಗೆ ಒಟ್ಟು 150 ಇನ್ಸ್ಟಿಟ್ಯೂಟ್ ಗಳನ್ನು ತೆರೆಯಲಾಗುವುದು ಎಂದವರು ತಿಳಿಸಿದರು.

ರಾಷ್ಟ್ರೀಯ ತಾತ್ರಿಕ ಜವಳಿ ಮಿಶನ್ ಘೋಷಣೆ, ಈ ಯೋಜನೆಗೆ 1480 ಕೋಟಿ ರೂಗಳ ಅನುದಾನ ನೀಡಲಾಗುವುದು. ಮೊಬೈಲ್, ಎಲೆಕ್ಟ್ರಾನಿಕ್ ಉಪಕರಣಗಳು, ಅರೆ ಕಂಡಕ್ಟರ್ ಪ್ಯಾಕೇಜಿಂಗ್ ತಯಾರಿಕೆಯನ್ನು ಉತ್ತೇಜಿಸುವ ಯೋಜನೆಗೆ ಅನುದಾನ ಮೀಸಲಿರಿಸುವುದಾಗಿ ಸೀತಾರಾಮನ್ ತಿಳಿಸಿದರು.

'2020-21ರಲ್ಲಿ ಸ್ವಚ್ಛ ಭಾರತ್ ಮಿಷನ್ಗಾಗಿ ಸುಮಾರು 12,300 ಕೋಟಿ ರೂ. ವಾಟರ್ ಲೈಫ್ ಮಿಷನ್ ಯೋಜನೆಗೆ 11,500 ಕೋಟಿ ರೂ. ಮೀಸಲಿರಿಸಿರುವುದಾಗಿ' ವಿತ್ತ ಸಚಿವರು ತಿಳಿಸಿದರು.

Trending News