ಮದುವೆಯಾದ ಒಂದು ವರ್ಷಕ್ಕೆ ಪತಿಗೆ ವಿಚ್ಛೇದನದ ನೀಡಲು ಸಿದ್ಧರಾದ್ರಾ ಈ ಸ್ಟಾರ್ ಹೀರೋಯಿನ್?

divorce rumors viral on heroine parineeti chopra: ಇತ್ತೀಚಿನ ದಿನಗಳಲ್ಲಿ ವಿಚ್ಛೇದನ ಪಡೆಯುವವರ ಸಂಖ್ಯೆ ಅಧಿಕವಾಗಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ. ಈ ಪಟ್ಟಿಯಲ್ಲಿ ಹೆಚ್ಚಾಗಿ ಸೆಲೆಬ್ರಿಟಿಗಳೇ ಇದ್ದಾರೆ... ಯಾವ ದಿನ ಯಾವ ಸೆಲೆಬ್ರಿಟಿಗಳು ತಮ್ಮ ವಿಚ್ಛೇದನವನ್ನು ಘೋಷಿಸುತ್ತಾಯೋ ಎನ್ನುವ ಸ್ಥಿತಿಗೆ ಬಂದು ತಲುಪಿದೆ..

Written by - Savita M B | Last Updated : Jul 28, 2024, 08:15 AM IST
  • ಜೊತೆಯಲ್ಲಿ ಇರಲು ಸಾಧ್ಯವಾಗದೆ ತಾರೆಯರು ವಿಚ್ಛೇದನದ ಹಾದಿ ಹಿಡಿದಿದ್ದಾರೆ.
  • ಸ್ಟಾರ್ ಹೀರೋಯಿನ್ ವಿಚ್ಛೇದನದ ಹಾದಿ ಹಿಡಿದಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ
 ಮದುವೆಯಾದ ಒಂದು ವರ್ಷಕ್ಕೆ ಪತಿಗೆ ವಿಚ್ಛೇದನದ ನೀಡಲು ಸಿದ್ಧರಾದ್ರಾ ಈ ಸ್ಟಾರ್ ಹೀರೋಯಿನ್? title=

heroine parineeti chopra: ಜೊತೆಯಲ್ಲಿ ಇರಲು ಸಾಧ್ಯವಾಗದೆ ತಾರೆಯರು ವಿಚ್ಛೇದನದ ಹಾದಿ ಹಿಡಿದಿದ್ದಾರೆ. ಎಷ್ಟೋ ಸೆಲೆಬ್ರಿಟಿಗಳ ಜೀವನ ಹೀಗೇ ಇರುತ್ತದೆ. ಸೂಪರ್ ಸ್ಟಾರ್ ಗಳು ಕೂಡ ತಮ್ಮ ವೈವಾಹಿಕ ಜೀವನಕ್ಕೆ ಗುಡ್ ಬೈ ಹೇಳಿ ಒಂಟಿ ಜೀವನ ನಡೆಸುತ್ತಿದ್ದಾರೆ. ಇತ್ತೀಚಿಗೆ ಬಾಲಿವುಡ್ ಸ್ಟಾರ್ ಹೀರೋಯಿನ್ ವಿಚ್ಛೇದನದ ಹಾದಿ ಹಿಡಿದಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.

ಇದನ್ನೂ ಓದಿ-ಕೊನೆಗೂ ಕೂಡಿಬಂತಾ ಸಲ್ಮಾನ್‌ ಖಾನ್‌ʼಗೆ ಮದುವೆ ಭಾಗ್ಯ!? 44 ವರ್ಷ ವಯಸ್ಸಿನ ಈ ನಟಿ ಜೊತೆ ಸಲ್ಲು ಮ್ಯಾರೇಜ್‌...!!

 ಬಾಲಿವುಡ್ ಸ್ಟಾರ್ ಹೀರೋಯಿನ್ ಪ್ರಿಯಾಂಕಾ ಚೋಪ್ರಾ ಸಹೋದರಿ ಪರಿಣಿತಿ ಚೋಪ್ರಾ ಎಲ್ಲರಿಗೂ ಪರಿಚಿತ.. ಪ್ರಿಯಾಂಕಾ ಚೋಪ್ರಾ ಅವರ ಸಹೋದರಿಯಾಗಿ ಅವರು ಎಂಟ್ರಿ ಕೊಟ್ಟರೂ ತಮ್ಮದೇ ಪ್ರತಿಭೆಯಿಂದ ಅತೀ ಕಡಿಮೆ ಸಮಯದಲ್ಲೇ ತಮ್ಮದೇ ಆದ ಇಮೇಜ್ ಕ್ರಿಯೇಟ್ ಮಾಡಿದರು. ಹಲವು ಸ್ಟಾರ್ ಹೀರೋಗಳ ಜೊತೆ ಸಿನಿಮಾ ಮಾಡಿ ಜನಪ್ರಿಯತೆ ಹೆಚ್ಚಿಸಿಕೊಂಡರು. ವೃತ್ತಿಜೀವನದ ಉತ್ತುಂಗದಲ್ಲಿದ್ದಾಗ ಅವರು ಎಎಪಿ ಸಂಸದ ರಾಘವ ಚಡ್ಡಾ ಅವರನ್ನು ಪ್ರೀತಿಸಿ ವಿವಾಹವಾದರು. ಆದರೆ ಇದೀಗ ಪತಿಗೆ ವಿಚ್ಛೇದನ ನೀಡಲು ಸಿದ್ಧವಾಗಿದ್ದಾರೆ ಎಂಬ ಮಾತು ಬಾಲಿವುಡ್ ನಲ್ಲಿ ಕೇಳಿಬರುತ್ತಿದೆ.

ಇದನ್ನೂ ಓದಿ-44ನೇ ವಯಸ್ಸಿಗೆ 2ನೇ ಮದುವೆಯಾಗಿದ್ದ ನಟಿ ಊರ್ವಶಿ... ಕುಡಿತದ ಚಟಕ್ಕೆ ದಾಸಳಾಗಿದ್ದ ಈಕೆಯ ಇಬ್ಬರು ಗಂಡಂದಿರು ಯಾರು ಗೊತ್ತಾ? ಒಬ್ಬ ನಟ.. ಮತ್ತೊಬ್ಬ ಖ್ಯಾತ ನಿರ್ದೇಶಕ

 ಅವರ ಇತ್ತೀಚಿನ ಪೋಸ್ಟ್ ನೋಡಿದ ಯಾರಾದರೂ ಪರಿಣಿತಿ ಚೋಪ್ರಾ ವಿಚ್ಛೇದನದ ಮೂಲಕ ಹೋಗುತ್ತಿದ್ದಾರೆ ಎಂದು ಭಾವಿಸುತ್ತಾರೆ. ಹೌದು "ಜೀವನ ಪ್ರತಿಬಿಂಬಿಸಲು ಸ್ವಲ್ಪ ಸಮಯ ತೆಗೆದುಕೊಂಡಿತು ಮತ್ತು ಇದು ನನ್ನ ನಂಬಿಕೆಯನ್ನು ಪುನರುಚ್ಚರಿಸಿತು: ಮನಸ್ಸಿಗೆ ಎಲ್ಲವೂ ಅರ್ಥವಾಗಿದೆ... ಮುಖ್ಯವಲ್ಲದ ವಿಷಯಗಳಿಗೆ (ಅಥವಾ ಜನರು) ಪ್ರಾಮುಖ್ಯತೆಯನ್ನು ನೀಡಬೇಡಿ. ಒಂದೇ ಒಂದು ಸೆಕೆಂಡ್ ವ್ಯರ್ಥ ಮಾಡಬೇಡಿ. ಜೀವನವು ಒಂದು ಗಡಿಯಾರ.. ಪ್ರತಿ ಕ್ಷಣವೂ ನಿಮ್ಮ ಆಯ್ಕೆಯಾಗಿದೆ.. ಇತರರನ್ನು ಮೆಚ್ಚಿಸಲು ಬದುಕುವುದನ್ನು ನಿಲ್ಲಿಸಿ! ಇತರ ಜನರು ಏನು ಯೋಚಿಸುತ್ತಾರೆ ಎನ್ನುವುದನ್ನು ತಲೆಕಕೆಡಿಸಿಕೊಳ್ಳಬೇಡಿ ನಿಮ್ಮ ಸ್ವಂತ ಜೀವನವನ್ನು ನೀವು ಆನಂದಿಸಿ ನಿಮ್ಮ ಜೀವನದಿಂದ TOXIC ಜನಗಳನ್ನು ಕಿತ್ತುಹಾಕಲು ಹಿಂಜರಿಯಬೇಡಿ.. ಇದು ಜೀವನಕ್ಕೆ ಸೀಮಿತವಾಗಿದೆ. ನೀವು ಹೇಗೆ ಬದುಕಬೇಕೋ ಹಾಗೆ ಬದುಕಿರಿ’’ ಎಂದು ಪೋಸ್ಟ್‌ ಹಂಚಿಕೊಂಡು ಬರೆದುಕೊಂಡಿದ್ದಾರೆ,,  ಸದ್ಯ ನಟಿ ವಿಚ್ಛೇದನಕ್ಕೆ ರೆಡಿಯಾಗಿದ್ದು, ಅದಕ್ಕಾಗಿಯೇ ಮೊದಲೇ ಈ ಸುಳಿವು ನೀಡುತ್ತಿದ್ದಾರೆ ಎಂಬುದು ನೆಟಿಜನ್‌ಗಳ ಅಭಿಪ್ರಾಯ. ಈ ವದಂತಿಗಳಿಗೆ ಪರಿಣಿತಿ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 
 

Trending News