Janhvi Kapoor hospitalised : ಬಿಟೌನ್ ಸ್ಟಾರ್ ಹೀರೋಯಿನ್ ಜಾನ್ವಿ ಕಪೂರ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ನಟಿಯನ್ನು ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ.. ಇದರಿಂದಾಗಿ ಅವರ ಅಭಿಮಾನಿಗಳು ಆತಂಕಗೊಂಡಿದ್ದಾರೆ... ಈ ಕುರಿತು ವರದಿ ಇಲ್ಲಿದೆ..
ಸ್ಟಾರ್ ಹೀರೋಯಿನ್ ಜಾನ್ವಿ ಕಪೂರ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ವರದಿಯಾಗಿದೆ. ವೈದ್ಯರ ಸಲಹೆಯಂತೆ ಬೆಡ್ ರೆಸ್ಟ್ ತೆಗೆದುಕೊಳ್ಳುತ್ತಿದ್ದಾರೆ ಎಂದು ಹೇಳಾಗುತ್ತಿದೆ..
ಅನಾರೋಗ್ಯದ ಕಾರಣ ಜಾನ್ವಿ ಕಪೂರ್ ಸದ್ಯ ಯಾವುದೇ ಸಿನಿಮಾ ಶೂಟಿಂಗ್ನಲ್ಲಿ ಭಾಗವಹಿಸುತ್ತಿಲ್ಲವಂತೆ. ಬುಧವಾರದವರೆಗಿನ ಎಲ್ಲಾ ದಿನಾಂಕಗಳನ್ನು ರದ್ದುಗೊಳಿಸಿದ್ದಾರೆಂದು ತಿಳಿದು ಬಂದಿದೆ..
ಗುರುವಾರ ನಟಿಯ ಆರೋಗ್ಯ ಹದಗೆಟ್ಟಿದ್ದು, ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಜಾನ್ವಿ ಕಪೂರ್ ಫುಡ್ ಪಾಯಿಸನ್ನಿಂದ ಅಸ್ವಸ್ಥರಾಗಿದ್ದಾರೆ ಎಂದು ಕೆಲ ಮಾಧ್ಯಮಗಳಲ್ಲಿ ವರದಿಯಾಗಿದೆ
ಇದರ ನಡುವೆ ಮುಂಬೈನಲ್ಲಿ ಧಾರಾಕಾರ ಮಳೆಯಾಗುತ್ತಿದೆ. ನಗರದಲ್ಲಿ ಸೋಂಕುಗಳು ಮತ್ತು ಅನಾರೋಗ್ಯ ಪ್ರಕರಣಗಳು ಹೆಚ್ಚಿವೆ. ಜಾನ್ವಿ ಕಪೂರ್ ಅವರ ಸ್ಥಿತಿ ಸುಧಾರಿಸುವವರೆಗೂ ವೈದ್ಯರ ಮೇಲ್ವಿಚಾರಣೆಯಲ್ಲಿರಲಿದ್ದಾರೆ..
ಕಳೆದ ವರ್ಷದವರೆಗೂ ಬಾಲಿವುಡ್ ಚಿತ್ರಗಳಲ್ಲಿ ಮಾತ್ರ ಬ್ಯುಸಿಯಾಗಿದ್ದ ಜಾನ್ವಿ ಕಪೂರ್ ಈಗ ಟಾಲಿವುಡ್ಗೂ ಎಂಟ್ರಿ ಕೊಟ್ಟಿದ್ದಾರೆ. ದೇವರ ಚಿತ್ರದ ಮೂಲಕ ಮೊದಲ ಬಾರಿಗೆ ಜೂನಿಯರ್ ಎನ್ಟಿಆರ್ ಜೊತೆ ಜಾನ್ವಿ ಸ್ಕ್ರೀನ್ ಶೇರ್ ಮಾಡಲಿದ್ದಾರೆ..
ಅಲ್ಲದೆ, ರಾಮಚರಣ್ ಜೊತೆ ಬುಚ್ಚಿಬಾಬು ನಿರ್ದೇಶನದ ಮತ್ತೊಂದು ತೆಲುಗು ಚಿತ್ರದಲ್ಲೂ ಜೂನಿಯರ್ ಶ್ರೀದೇವಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಪ್ರಸ್ತುತ, ಜಾನ್ವಿ ಕಪೂರ್ 'ಉಲಾಜ್' ಚಿತ್ರದಲ್ಲಿ ರಾಯಭಾರ ಕಚೇರಿಯ ಡೆಪ್ಯುಟಿ ಹೈಕಮಿಷನರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ʼಉಲಾಜ್ʼ ಸುಧಾಂಶು ಸರಿಯಾ ನಿರ್ದೇಶನದ ಈ ಚಿತ್ರದಲ್ಲಿ ಗುಲ್ಶನ್ ದೇವಯ್ಯ, ರೋಷನ್ ಮ್ಯಾಥ್ಯೂ, ರಾಜೇಶ್ ತೈಲಾಂಗ್ ಮತ್ತು ಆದಿಲ್ ಹುಸೇನ್ ಸಹ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.