ನವದೆಹಲಿ: ರಾಜ್‌ಕೋಟ್‌ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡವು ಆಸ್ಟ್ರೇಲಿಯಾವನ್ನು 36 ರನ್‌ಗಳಿಂದ ಸೋಲಿಸಿ ಮೂರು ಪಂದ್ಯಗಳ ಸರಣಿಯನ್ನು 1-1ರಿಂದ ಸಮಬಲಗೊಳಿಸಿತು.
ಮೊದಲು ಟಾಸ್ ಗೆದ್ದ ಆಸ್ಟ್ರೇಲಿಯಾ ಭಾರತಕ್ಕೆ ಬ್ಯಾಟಿಂಗ್ ಅವಕಾಶವನ್ನು ನೀಡಿತು. ಇದರ ಅವಕಾಶವನ್ನು ಪಡೆದ ಭಾರತ ತಂಡವು ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ 81 ರನ್ ಗಳ ಜೊತೆಯಾಟ ನೀಡಿದರು. ಧವನ್ (96) ಶತಕ ವಂಚಿತ ರಾಗಿ ನಿರಾಸೆ ಅನುಭವಿಸಿದರು.
ಇನ್ನೊಂದೆಡೆಗೆ ವಿರಾಟ್ ಕೊಹ್ಲಿ 78, ಹಾಗೂ ಕೆ.ಎಲ್.ರಾಹುಲ್ 80 ರನ್ ಗಳಿಸುವ ಮೂಲಕ ಭಾರತ ತಂಡವನ್ನು 300 ಗಡಿ ದಾಟಿಸುವಲ್ಲಿ ನೆರವಾದರು. ಅದರಲ್ಲೂ ಕೆ.ಎಲ್ ರಾಹುಲ್ ಈ ಪಂದ್ಯದಲ್ಲಿ ಕೇವಲ 52 ಎಸೆತಗಳಲ್ಲಿ 80 ರನ್ ಗಳಿಸಿದರು. ಇದರಲ್ಲಿ ಆರು ಬೌಂಡರಿ ಹಾಗೂ ಮೂರು ಸಿಕ್ಸರ್ ಗಳು ಸೇರಿದ್ದವು. ಭಾರತ 50 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 340 ರನ್ ಗಳ ಬೃಹತ್ ಮೊತ್ತವನ್ನು ಗಳಿಸಿತು.
India win by 36 runs!
Jasprit Bumrah picks up the last wicket of Adam Zampa, bowling Australia out for 304.#INDvAUS SCORECARD: https://t.co/sKfTjteboN pic.twitter.com/sZjL6RkGEM
— ICC (@ICC) January 17, 2020
ಈ ಮೊತ್ತವನ್ನು ಬೆನ್ನತ್ತಿದ ಆಸಿಸ್ ಪಡೆ ಆರಂಭದಲ್ಲಿ 20 ರನ್ ಆದಾಗ ಡೇವಿಡ್ ವಾರ್ನರ್ ಕಳೆದುಕೊಳ್ಳುವ ಮೂಲಕ ಆಘಾತ ಎದುರಿಸಿತು. ಒಂದು ಹಂತದಲ್ಲಿ ಭದ್ರ ನೆಲೆ ಊರಿ ಅಪಾಯಕಾರಿಯಾಗಿದ್ದ ಸ್ಟೀವ್ ಸ್ಮಿತ್ 98 ರನ್ ಗಳಿಗೆ ವಿಕೆಟ್ ಒಪ್ಪಿಸಿದರು. ಇವರಿಗೆ ಸಾಥ್ ನೀಡಿದ ಮರ್ನಸ್ ಲಾಬುಸ್ ಚೇಂಜ್ ಅವರು 46 ರನ್ ಗಳಿಸಿದರು.
ಇನ್ನೊಂದೆಡ ಭಾರತ ತಂಡದ ಬೌಲರ್ ಗಳು ಕೊನೆಯಲ್ಲಿ ತಮ್ಮ ಕಾರ್ಯವನ್ನು ಅದ್ಬುತವಾಗಿ ನಿಭಾಯಿಸಿದರು. ಮೊಹಮ್ಮದ್ ಶಮಿ, 3 ಹಾಗೂ ನವದೀಪ್ ಸಿನಿ,2 ಜಡೇಜಾ 2 ಕುಲದೀಪ್ ಯಾದವ್ 2 ವಿಕೆಟ್ ಗಳನ್ನು ಪಡೆಯುವ ಮೂಲಕ ಆಸಿಸ್ ಪಡೆಯನ್ನು 304 ರನ್ ಗಳಿಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾದರು. ಆ ಮೂಲಕ ಈಗ ಭಾರತ ತಂಡವು ಸರಣಿಯಲ್ಲಿ 1-1 ರಲ್ಲಿ ಸಮಗೊಂಡಿದೆ.