ಕ್ಯಾನ್ಸರ್ ಎನ್ನುವ ಮಹಾ ಮಾರಿ ಅಚ್ಚ ಕನ್ನಡದ ನಿರೂಪಕಿ ಅಪರ್ಣಾ ಅವರನ್ನು ಬಾರದ ಲೋಕಕ್ಕೆ ಕರೆದೊಯ್ದಿದೆ.ಕಳೆದ ಎರಡು ವರ್ಷಗಳಿಂದ ಶ್ವಾಸಕೋಶ ಕ್ಯಾನ್ಸರ್ ನೊಂದಿಗೆ ಹೋರಾಡುತ್ತಿದ್ದ ಅಪರ್ಣಾ ಇಹ ಲೋಕ ತ್ಯಜಿಸಿದ್ದಾರೆ.
ಬೆಂಗಳೂರು :ಅಪರ್ಣಾ ಅವರ ಪೂರ್ತಿ ಹೆಸರು ಅಪರ್ಣಾ ವಸ್ತಾರೆ. ಅಪರ್ಣಾ ಮೂಲತ ಚಿಕ್ಕಮಗಳೂರಿನ ಪಂಚನಹಳ್ಳಿಯವರು. ಇವರ ತಂದೆ ಖ್ಯಾತ ಸಿನಿಮಾ ಪತ್ರಕರ್ತ. ಅಪರ್ಣಾ ನಟನೆಗಿನ್ತಲೂ ತಮ್ಮ ಅದ್ಭತ ಕಂಠ ಸಿರಿ ಮತ್ತು ನಿರೂಪಣೆಯಿಂದಲೇ ಹೆಸರು ಮಾಡಿವರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಕ್ಯಾನ್ಸರ್ ಎನ್ನುವ ಮಹಾ ಮಾರಿ ಅಚ್ಚ ಕನ್ನಡದ ನಿರೂಪಕಿ ಅಪರ್ಣಾ ಅವರನ್ನು ಬಾರದ ಲೋಕಕ್ಕೆ ಕರೆದೊಯ್ದಿದೆ.ಕಳೆದ ಎರಡು ವರ್ಷಗಳಿಂದ ಶ್ವಾಸಕೋಶ ಕ್ಯಾನ್ಸರ್ ನೊಂದಿಗೆ ಹೋರಾಡುತ್ತಿದ್ದ ಅಪರ್ಣಾ ಇಹ ಲೋಕ ತ್ಯಜಿಸಿದ್ದಾರೆ.
ಅಪರ್ಣಾ 1984ರಲ್ಲಿ ಬಿಡುಗಡೆಯಾದ ಮಸಣದ ಹೂವು ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟವರು. ಪುಟ್ಟಣ್ಣ ಕಣಗಾಲ್ ಸಿನಿಮಾ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರೂ ಅವಕಾಶಗಳು ಇವರನ್ನು ಅರಸಿ ಬರಲಿಲ್ಲ. ಇವರು ನಟಿಸಿದ್ದು ಕೇವಲ 10 ಸಿನಿಮಾಗಳಲ್ಲಿ.
ಇನ್ನು ಇವರ ನಿರೂಪಣಾ ಶೈಲಿಯಲ್ಲಿ ಹುಡುಕಿದರೂ ಹುಳುಕು ಸಿಗದು. ಕನ್ನಡ ಭಾಷೆಯನ್ನು ನಿರ್ಗಳವಾಗಿ ಮಾತನಾಡುತ್ತಿದ್ದ ಅಪರ್ಣಾ ಅಪಾರ ಅಭಿಮಾನಿ ಬಳವನ್ನ ಹೊಂದಿದ್ದರು.ಹಲವು ದಶಕಗಳ ಕಾಲ ಸಾವಿರಕ್ಕೂ ಹೆಚ್ಚು ಕಾರ್ಯಕ್ರಮಗಳನ್ನ ನಿರೂಪಿಸಿದ್ದರು.
1998 ರಲ್ಲಿ ದೀಪಾವಳಿ ಕಾರ್ಯಕ್ರವೊಂದನ್ನು ಎಂಟು ಗಂಟೆಗಳ ನಿರೂಪಣೆ ಮಾಡಿದ ದಾಖಲೆ ಅಪರ್ಣಾ ಮುಡಿಯಲ್ಲಿದೆ.
ದೊಡ್ಡ ಪರದೆಯಲ್ಲಿ ಸಿಗದ ಯಶಸ್ಸು ಇವರಿಗೆ ಕಿರು ತೆರೆ ತಂದು ಕೊಟ್ಟಿತು. ಕಿರು ತೆರೆ ಮೂಲಕ ರಾಜ್ಯದ ಮೂಳೆ ಮೂಲೆಗೂ ಇವರು ಚಿರಪರಿಚಿತ ಎನಿಸಿಕೊಂಡರು
ಇನ್ನು ಇವರು ಅನೇಕ ಧಾರವಾಹಿಗಳಲ್ಲಿ ಕೂಡಾ ನಟಿಸಿದ್ದಾರೆ. ಮುಕ್ತ’, ‘ಮೂಡಲಮನೆ’,‘ಇವಳು ಸುಜಾತ’ ಧಾರಾವಾಹಿಗಳಲ್ಲಿ ಅಪರ್ಣಾ ಕಾಣಿಸಿಕೊಂಡಿದ್ದರು.
‘ಬಿಗ್ ಬಾಸ್ ಕನ್ನಡ ಸೀಸನ್ 1’ ರಿಯಾಲಿಟಿ ಶೋನಲ್ಲಿಯೂ ಮಿಂಚಿದ್ದರು. ಇಲ್ಲಿ ಸುದೀಪ್ ಅಪರ್ಣಾ ಅವರನ್ನು ಬಿಗ್ ಮನೆಯ ಅನ್ನಪೂರ್ಣೆ ಎಂದೇ ಕರೆಯುತ್ತಿದ್ದರು.
ಇನ್ನು ‘ಮಜಾ ಟಾಕೀಸ್’ ನಲ್ಲಿ ಹಾಸ್ಯ ಅಭಿನಯದ ಮೂಲಕವೂ ಮನೆ ಮಾತಾಗಿದ್ದರು. ಒನ್ ಅಂಡ್ ಓನ್ಲಿ ವರಲಕ್ಷಿಯಾಗಿ ಎಲ್ಲರ ಗಮನ ಸೆಳೆದಿದ್ದರು.