ಆಧುನಿಕತೆ, ತಂತ್ರಜ್ಞಾನ ಎಷ್ಟೇ ಮುಂದುವರೆದರು ಜನರಲ್ಲಿನ ಮೌಢ್ಯಾಚರಣೆಗಳು ಮಾತ್ರ ಕಡಿಮೆಯಾಗಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ತುಮಕೂರು ಜಿಲ್ಲೆಯ ಗೊಲ್ಲರಹಟ್ಟಿಗಳಲ್ಲಿ ಮೈಲಿಗೆ ಹೆಸರಲ್ಲಿ ಮೌಢ್ಯಾಚರಣೆ ಮುಂದುವರಿದೆ. ಸದ್ಯ ಕೊರಟಗೆರೆ ತಾಲೂಕಿನ ಬಿಸಾಡಿಹಳ್ಳಿಯ ಗೊಲ್ಲರಹಟ್ಟಿಯಲ್ಲಿ ಊರಾಚೆಗಿದ್ದ ಮೂವರು ಬಾಣಂತಿಯರು ಹಾಗೂ ಶಿಶುಗಳನ್ನು ರಕ್ಷಣೆ ಮಾಡಲಾಗಿದೆ.
ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ (State Women Commission chairperson Nagalaxmi Choudhari) ಗೊಲ್ಲರಹಟ್ಟಿಗಳಿಗೆ ಭೇಟಿ ನೀಡಿದ ವೇಳೆ ಬಾಣಂತಿ ಹಾಗೂ ನವಜಾತ ಶಿಶುಗಳು (New Born Babies) ಊರ ಹೊರಗಿನ ಸುರಕ್ಷಿತವಲ್ಲದ ಗುಡಿಸಲಲ್ಲಿ ಇರೋದು ಕಂಡುಬಂದಿದೆ. ತಕ್ಷಣ ಪೋಷಕರ ಮನವೊಲಿಸಿ ಬಾಣಂತಿ ಹಾಗೂ ಶಿಶುಗಳನ್ನು ಅವರವರ ಮನೆಯೊಳಗೆ ಪ್ರವೇಶ ಕಲ್ಪಿಸಿಕೊಡಲಾಯಿತು. ಈ ವೇಳೆ ಮೂರು ಕೃಷ್ಣ ಕುಟೀರಗಳಿಗೆ ಬೀಗ ಹಾಕಲಾಯಿತು.
ಇದನ್ನೂ ಓದಿ- ಕಾಡುಗೊಲ್ಲರ ಮೂಢನಂಬಿಕೆಗೆ ಹಸುಗೂಸು ಬಲಿ ಪ್ರಕರಣ: ಗಂಡ-ತಂದೆ ವಿರುದ್ದ ಎಫ್ಐಆರ್ ದಾಖಲು
ಈ ಬಗ್ಗೆ ಪ್ರತಿಕ್ರಿಯಿಸಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ, ಮಾನವೀಯತೆಗೆ (Humanity) ವಿರುದ್ಧವಾದಂತಹ ಇಂತಹ ಮೌಢ್ಯದ ಆಚರಣೆ ಬಹಳ ದುಃಖಕರ. ಚಳಿ, ಗಾಳಿ ಮಧ್ಯೆ ಬಾಣಂತಿಯರನ್ನು ಊರಿನ ಹೊರಗೆ ಇರಿಸುವ ಸಂಪ್ರದಾಯವನ್ನು ಇಲ್ಲಿಗೆ ನಿಲ್ಲಿಸಬೇಕು ಎಂದು ಜನರಲ್ಲಿ ಮನವಿ ಮಾಡಿದರು.
ಕೃಷ್ಣ ಕುಟೀರಗಳು ಮುಂದೆ ಗ್ರಂಥಾಲಯವಾಗಿ ಮಾರ್ಪಡಿಸಲಾಗುವುದು ಎಂದು ನಾಗಲಕ್ಷ್ಮಿ ಚೌಧರಿ ತಿಳಿಸಿದರು. ಅಲ್ಲದೇ ಗೊಲ್ಲರಟ್ಟಿಗಳಿಗೆ ಮೂಲ ಸೌಲಭ್ಯ ಒದಗಿಸುವ ಭರವಸೆ ನೀಡಿದರು.
ಇದನ್ನೂ ಓದಿ- ಎರಡು ದಿನಗಳ ದಕ್ಷಿಣ ಭಾರತ ಉತ್ಸವಕ್ಕೆ ಅರಮನೆ ಮೈದಾನ ಸಜ್ಜು : ಪ್ರವಾಸೋದ್ಯಮ ಇಲಾಖೆ ಮತ್ತು ಎಫ್.ಕೆ.ಸಿ.ಸಿಐ ನಿಂದ ಆಯೋಜನೆ
ಕಾಡುಗೊಲ್ಲ ಸಮುದಾಯದಿಂದ ಮುಂದುವರೆದಿದ್ದ ಮೌಢ್ಯಾಚರಣೆ:
ಈ ಹಿಂದೆ ಅಲೆಮಾರಿಗಳಾಗಿ ಕಾಡು ಮೇಡುಗಳಲ್ಲಿ ವಾಸಿಸುತ್ತಿದ್ದ ಕಾಡುಗೊಲ್ಲ ಸಮುದಾಯದವರಿಗೆ ಕುರಿ ಸಾಕಾಣೆ, ಹೈನುಗಾರಿಕೆಯೇ ಮೂಲ ಕಸಬಾಗಿತ್ತು. ತಮ್ಮ ಕಸಬನ್ನು ಮುಂದುವರೆಸಿಕೊಂಡು ಅಲ್ಲಲ್ಲಿ ಗುಡಿಸಲು ನಿರ್ಮಿಸಿ ವಾಸಿಸುತ್ತಿದ್ದ ಈ ಕಾಡುಗೊಲ್ಲ ಸಮುದಾಯದವರು ಕುರಿ, ಮೇಕೆ, ಹಸುಗಳೊಂದಿಗೆ ಇರುತ್ತಿದ್ದರು. ಈ ವೇಳೆ ಹೆಣ್ಣು ಋತುಮತಿಯಾದರೆ, ಬಾಣಂತಿಯಾದರೆ ಪ್ರಾಣಿಗಳ ಆರೋಗ್ಯಕ್ಕೆ ತೊಂದರೆಯಾಗಬಹುದು ಎಂದು ಈ ಹಿಂದೆ ಪೂರ್ವಿಕರು ಅಂತಹ ಹೆಣ್ಣು ಮಕ್ಕಳನ್ನು ಬೇರೆಡೆ ಗುಡಿಸಲು ನಿರ್ಮಿಸಿ ಇರಿಸುತ್ತಿದ್ದರು. ಆನಂತದ ದಿನಗಳಲ್ಲಿ ಇದೊಂದು ಮೌಢ್ಯವಾಗಿ ಪರಿವರ್ತನೆಯಾಗಿದೆ.
ಹೆಣ್ಣು ಮಗು ಋತುಮತಿಯಾದರೆ, ಮಾಸಿಕ ಋತುಚಕ್ರ, ಹೆರಿಗೆಯಾಗುವುದನ್ನು ಸೂತಕವೆಂದು ಪರಿಗಣಿಸಿರುವ ಕಾಡುಗೊಲ್ಲ ಸಮುದಾಯದವರು ಇವರನ್ನು ಹಟ್ಟಿಯ ಒಳಗೆ ಇರಿಸುವುದರಿಂದ ಅವರ ಆರಾಧ್ಯ ದೈವ ವೀರಗಾರರಾದ ಜುಂಜಪ್ಪ, ಸಿದ್ಧಪ್ಪ, ಯತ್ತಪ್ಪ ದೇವರಿಗೆ ಇದರಿಂದ ಮೈಲಿಗೆಯಾಗುತ್ತದೆ. ದೇವರಿಗೆ ಮೈಲಿಗೆಯಾಗಿ ಇಡೀ ಹಟ್ಟಿಯವರಿಗೆ ಸಂಕಷ್ಟ ಎದುರಾಗುತ್ತದೆ ಎಂಬ ನಂಬಿಕೆಯಿಂದಾಗಿ ಇಂದಿಗೂ ಕೂಡ ಈ ಮೌಢ್ಯವನ್ನು ಆಚರಿಸಿಕೊಂಡು ಬರುತ್ತಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.