ಬೆಂಗಳೂರು: ಸಿಎಂ ಸಿದ್ದರಾಮಯ್ಯನವರು ದಲಿತರಿಂದ ಮತ ಪಡೆದು ದಲಿತರ ಬೆನ್ನಿಗೆ ಚೂರಿ ಹಾಕುತ್ತಿದ್ದಾರೆ ಎಂದು ಕರ್ನಾಟಕ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಈ ಬಗ್ಗೆ ಸೋಮವಾರ ಟ್ವೀಟ್ ಮಾಡಿರುವ ಬಿಜೆಪಿ, ಸಿದ್ದರಾಮಯ್ಯರಿಗೆ ʼನಕಲಿ ಅಹಿಂದ ನಾಯಕʼ ಅಂತಾ ಕುಟುಕಿದೆ.
ನಕಲಿ ಅಹಿಂದ ನಾಯಕ ಸಿಎಂ ಸಿದ್ದರಾಮಯ್ಯರ ವಿರುದ್ಧ ಕೊನೆಗೂ ಕಾಂಗ್ರೆಸ್ ಪಕ್ಷದ ದಲಿತ ನಾಯಕರು ರಾಮಬಾಣ ಹೂಡಲು ಸಿದ್ಧರಾಗಿದ್ದಾರೆ. ದಲಿತರ ಕುರ್ಚಿಗೂ ಕನ್ನ, ದಲಿತರ ಅನುದಾನಕ್ಕೂ ಕನ್ನ, ದಲಿತರ ಅಧಿಕಾರಕ್ಕೂ ಕನ್ನ, ದಲಿತರ ಜಮೀನಿಗೂ ಕನ್ನ, ದಲಿತರ ಮೀಸಲಾತಿಗೂ ಕನ್ನ ಮತ್ತು ದಲಿತರ ಹಕ್ಕುಗಳಿಗೂ ಕನ್ನ ಹಾಕುತ್ತಿದ್ದಾರೆ. ದಲಿತರಿಂದ ಮತ ಪಡೆದು ದಲಿತರ ಬೆನ್ನಿಗೆ ಚೂರಿ ಹಾಕುತ್ತಿರುವ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ನಾಡಿನ ದಲಿತ ಸಮಾಜ ಎಚ್ಚೆತ್ತುಕೊಳ್ಳಬೇಕಿದೆʼ ಎಂದು ಬಿಜೆಪಿ ಸಲಹೆ ನೀಡಿದೆ.
ಇದನ್ನೂ ಓದಿ: ಸಿದ್ದು ಸರ್ಕಾರದ ವಿರುದ್ಧ R ಅಶೋಕ್ ಕಿಡಿ
ನಕಲಿ ಅಹಿಂದ ನಾಯಕ @siddaramaiah ವಿರುದ್ಧ ಕೊನೆಗೂ @INCKarnataka ದ ದಲಿತ ನಾಯಕರು ರಾಮಬಾಣ ಹೂಡಲು ಸಿದ್ಧರಾಗಿದ್ದಾರೆ.
▪️ದಲಿತರ ಕುರ್ಚಿಗೂ ಕನ್ನ
▪️ದಲಿತರ ಅನುದಾನಕ್ಕೂ ಕನ್ನ
▪️ದಲಿತರ ಅಧಿಕಾರಕ್ಕೂ ಕನ್ನ
▪️ದಲಿತರ ಜಮೀನಿಗೂ ಕನ್ನ
▪️ದಲಿತರ ಮೀಸಲಾತಿಗೂ ಕನ್ನ
▪️ದಲಿತರ ಹಕ್ಕುಗಳಿಗೂ ಕನ್ನದಲಿತರಿಂದ ಮತ ಪಡೆದು ದಲಿತರ ಬೆನ್ನಿಗೆ ಚೂರಿ… pic.twitter.com/DX45rFtTln
— BJP Karnataka (@BJP4Karnataka) July 8, 2024
ರೇಟ್‌ಕಾರ್ಡ್ ಫಿಕ್ಸ್ ಮಾಡಿ ವರ್ಗಾವಣೆ ದಂಧೆ!
ರಾಜ್ಯ @INCKarnataka ಸರ್ಕಾರದ ನಿರ್ಲಕ್ಷ್ಯದಿಂದ ಪುಟಾಣಿ ಮಕ್ಕಳಿಗೆ ಅಕ್ಷರ ಜ್ಞಾನ ನೀಡುವ ಅಂಗವಾಡಿಗಳು ಮೂಲಸೌಕರ್ಯ ಕೊರತೆಯಿಂದ ಅಧೋಗತಿಗೆ ತಲುಪುತ್ತಿವೆ. ಹಲವೆಡೆ ಸ್ವಂತ ಕಟ್ಟಡವಿಲ್ಲ, ಆಟದ ಮೈದಾನ, ಕಾಂಪೌಂಡ್ ಇಲ್ಲವೇ ಇಲ್ಲ, ಕಾರ್ಯಕರ್ತೆಯರ ನೇಮಕ ಹಾಗೂ ಅಗತ್ಯವಿರುವೆಡೆ ಬಾಡಿಗೆ ಕಟ್ಟಡಗಳಿಗೆ ನೀಡುವುದಕ್ಕೂ ಹಣವಿಲ್ಲ, ಅಲ್ಲದೇ ಚುನಾವಣಾ… pic.twitter.com/EGFLEjsTje
— BJP Karnataka (@BJP4Karnataka) July 8, 2024
ʼರಾಜ್ಯದಲ್ಲಿ ಅಧಿಕಾರದ ಗದ್ದುಗೆ ಹಿಡಿದ ಆರಂಭದಿಂದಲೂ ಕಾಂಗ್ರೆಸ್ ರೇಟ್‌ಕಾರ್ಡ್ ಫಿಕ್ಸ್ ಮಾಡಿ ವರ್ಗಾವಣೆ ದಂಧೆಗೆ ನಾಂದಿ ಹಾಡಿತ್ತು. ಇದೀಗ ಅಧಿಕಾರಿಗಳ ವರ್ಗಾವಣೆ ಎನ್ನುವುದು ದಂಧೆಯಾಗಿದೆ ಎಂದು ಭ್ರಷ್ಟ ಮುಖ್ಯಮಂತ್ರಿ ಸಿದ್ದರಾಮಯ್ಯರ ಆರ್ಥಿಕ ಸಲಹೆಗಾರರೇ ಒಪ್ಪಿಕೊಂಡಿದ್ದಾರೆ. ಒಂದೇ ಹುದ್ದೆಗೆ ಐದಾರು ಶಿಫಾರಸ್ಸುಗಳನ್ನು ಮಾಡಿ ಕಾಸಿಗಾಗಿ ಪೋಸ್ಟಿಂಗ್ ದಂಧೆ ಶುರುಮಾಡಿದ್ದ ಶ್ಯಾಡೋ ಸಿಎಂ ಡಾ.ಯತೀಂದ್ರ ಸಿದ್ದರಾಮಯ್ಯ ಅವರಂತೆ ಜಿಲ್ಲಾ ಉಸ್ತುವರಿ ಸಚಿವರುಗಳು ವರ್ಗಾವಣೆ ದಂಧೆಯ ಕಿಂಗ್‌ಪಿನ್‌ಗಳಾಗಿದ್ದಾರೆ. ಮುಡಾ, ವಾಲ್ಮೀಕಿ ನಿಗಮ, ಕಾರ್ಮಿಕ ಇಲಾಖೆ, ವರ್ಗಾವಣೆ ದಂಧೆ, ಕಮಿಷನ್, ಕಲೆಕ್ಷನ್ ಹಗರಣಗಳ ಮೂಲಕವೇ ಕಾಂಗ್ರೆಸ್ ಸರ್ಕಾರ ಸಾವಿರಾರು ಕೋಟಿ ಭ್ರಷ್ಟಾಚಾರದ ಕೊಳಚೆಯಲ್ಲಿ ಬಿದ್ದು ತಿಂದು ತೇಗುತ್ತಿದೆ ಎಂದು ಬಿಜೆಪಿ ಟೀಕಿಸಿದೆ.
ಅಧೋಗತಿಗೆ ತಲುಪುತ್ತಿರುವ ಅಂಗವಾಡಿಗಳು!
ರಾಜ್ಯದಲ್ಲಿ ಅಧಿಕಾರದ ಗದ್ದುಗೆ ಹಿಡಿದ ಆರಂಭದಿಂದಲೂ @INCKarnataka ರೇಟ್ ಕಾರ್ಡ್ ಫಿಕ್ಸ್ ಮಾಡಿ ವರ್ಗಾವಣೆ ದಂಧೆಗೆ ನಾಂದಿ ಹಾಡಿತ್ತು. ಇದೀಗ ಅಧಿಕಾರಿಗಳ ವರ್ಗಾವಣೆ ಎನ್ನುವುದು ದಂಧೆಯಾಗಿದೆ ಎಂದು ಭ್ರಷ್ಟ ಮುಖ್ಯಮಂತ್ರಿ @siddaramaiah ಅವರ ಆರ್ಥಿಕ ಸಲಹೆಗಾರರೇ ಒಪ್ಪಿಕೊಂಡಿದ್ದಾರೆ.
ಒಂದೇ ಹುದ್ದೆಗೆ ಐದಾರು ಶಿಫಾರಸ್ಸುಗಳನ್ನು ಮಾಡಿ… pic.twitter.com/M9dqZJnVvC
— BJP Karnataka (@BJP4Karnataka) July 8, 2024
ʼರಾಜ್ಯ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯದಿಂದ ಪುಟಾಣಿ ಮಕ್ಕಳಿಗೆ ಅಕ್ಷರಜ್ಞಾನ ನೀಡುವ ಅಂಗವಾಡಿಗಳು ಮೂಲಸೌಕರ್ಯ ಕೊರತೆಯಿಂದ ಅಧೋಗತಿಗೆ ತಲುಪುತ್ತಿವೆ. ಹಲವೆಡೆ ಸ್ವಂತ ಕಟ್ಟಡವಿಲ್ಲ, ಆಟದ ಮೈದಾನ, ಕಾಂಪೌಂಡ್ ಇಲ್ಲವೇ ಇಲ್ಲ, ಕಾರ್ಯಕರ್ತೆಯರ ನೇಮಕ ಹಾಗೂ ಅಗತ್ಯವಿರುವೆಡೆ ಬಾಡಿಗೆ ಕಟ್ಟಡಗಳಿಗೆ ನೀಡುವುದಕ್ಕೂ ಹಣವಿಲ್ಲ, ಅಲ್ಲದೇ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದ್ದ ಕಾರ್ಯಕರ್ತೆಯರಿಗೆ 15 ಸಾವಿರ ವೇತನ ನೀಡುವ ಭರವಸೆ ಯಾವಾಗ ಈಡೇರಿಸುವಿರಿ? ಅಭಿವೃದ್ಧಿ ಚಿಂತನೆ ಇಲ್ಲದ, ದೂರದೃಷ್ಟಿ ರಹಿತ ಕಾಂಗ್ರೆಸ್ ಸರ್ಕಾರದ 'ಕೈ' ಗೆ ಸಿಲುಕಿ ಕರ್ನಾಟಕ ನಲುಗುತ್ತಿದೆʼ ಎಂದು ಬಿಜೆಪಿ ಕಿಡಿಕಾರಿದೆ.
ಇದನ್ನೂ ಓದಿ: ಮಣಿಪಾಲ್ ಆಸ್ಪತ್ರೆಯ ರೋಗಿಗಳಿಗೆ ಉತ್ತಮ ಚಿಕಿತ್ಸೆ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.