Dragon Fruit Juice: ಡ್ರ್ಯಾಗನ್ ಫ್ರೂಟ್ ಜ್ಯೂಸ್ ಸೇವಿಸಿದ್ರೆ ದೇಹಕ್ಕೆ ಇಷ್ಟೊಂದು ಪ್ರಯೋಜನಗಳಿವೆ

Health Benefits of Dragon Fruit: ಸೂಪರ್‌ ಫ್ರೂಟ್‌ ಆಗಿರುವ ಡ್ರ್ಯಾಗನ್‌ ಹಣ್ಣು ಕಡಿಮೆ ಕ್ಯಾಲೋರಿ ಅಂದರೆ ಸುಮಾರು 60 ಕ್ಯಾಲೋರಿಗಳನ್ನು ಹೊಂದಿರುತ್ತವೆ. ಇದರಲ್ಲಿ ವಿಟಮಿನ್‌ C, B1, B2, B3 ಮತ್ತು ಕಬ್ಬಿಣ, ಕ್ಯಾಲ್ಸಿಯಂ ಮತ್ತು ರಂಜಕದಂತಹ ಖನಿಜಗಳಿಂದ ಸಮೃದ್ಧವಾಗಿದೆ. 

Health Benefits of Dragon Fruit: ಡ್ರ್ಯಾಗನ್‌ ಫ್ರೂಟ್ ಉಷ್ಣವಲಯದ ಹಣ್ಣಾಗಿದ್ದು, ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಒದಗಿಸುತ್ತದೆ. ಇದೊಂದು ಸೂಪರ್ ಫ್ರೂಟ್‌ ಆಗಿದ್ದು, ಹಲವಾರು ಕಾಯಿಲೆಗಳಿಂದ ರಕ್ಷಣೆ ನೀಡುತ್ತದೆ. ಹಲವಾರು ಪೋಷಕಾಂಶಗಳಿಂದ ಸಮೃದ್ಧವಾಗಿರುವ ಈ ಹಣ್ಣನ್ನು ನಿಯಮಿತವಾಗಿ ಸೇವಿಸುವುದರಿಂದ ಹೃದಯ, ಚರ್ಮ ಸೇರಿದಂತೆ ದೇಹದ ಸಮಗ್ರ ಆರೋಗ್ಯಕ್ಕೆ ಪ್ರಯೋಜನಕಾರಿ. ಈ ರಸಭರಿತ ಹಣ್ಣಿನ ಜ್ಯೂಸ್‌ ನಿಮ್ಮ ಆರೋಗ್ಯಕ್ಕೆ ಯಾವ ರೀತಿಯ ಪ್ರಯೋಜನಗಳನ್ನು ಒದಗಿಸುತ್ತದೆ ಎಂಬುದರ ಬಗ್ಗೆ ತಿಳಿಯಿರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /5

ಸೂಪರ್‌ ಫ್ರೂಟ್‌ ಎಂದು ಕರೆಯಲ್ಪಡುವ ಈ ಹಣ್ಣು ಕಡಿಮೆ ಕ್ಯಾಲೋರಿ (60 ಕ್ಯಾಲೋರಿ) ಹೊಂದಿರುತ್ತವೆ. ಇದರಲ್ಲಿ ವಿಟಮಿನ್‌ C, B1, B2, B3 & ಕಬ್ಬಿಣ, ಕ್ಯಾಲ್ಸಿಯಂ ಮತ್ತು ರಂಜಕದಂತಹ ಖನಿಜಗಳು ಸಮೃದ್ಧವಾಗಿವೆ. ಈ ಹಣ್ಣು ಕಡಿಮೆ ಪ್ರಮಾಣದ ಕೊಲೆಸ್ಟ್ರಾಲ್‌ ಹೊಂದಿದ್ದು, ತೂಕ ಕಡಿಮೆ ಮಾಡಿಕೊಳ್ಳಲು ಬಯಸುವವರು ಡ್ರ್ಯಾಗನ್‌ ಹಣ್ಣಿನ ಜ್ಯೂಸ್‌ ಅಥವಾ ಹಣ್ಣನ್ನು ಸೇವಿಸಬಹುದು. ಮಾಡಬಹುದಾಗಿದೆ.

2 /5

ಇಂದಿನ ಜನರ ಆರೋಗ್ಯ ಸಮಸ್ಯೆಗಳಲ್ಲಿ ಹೃದಯದ ತೊಂದರೆ ಅಗ್ರಸ್ಥಾನದದೆ. ಚಿಕ್ಕ ವಯಸ್ಸಿನಲ್ಲಿಯೇ ಜೀವ ಹಿಂಡುವ ಹೃದಯದ ಸಮಸ್ಯೆಗೆ ಡ್ರ್ಯಾಗನ್ ಹಣ್ಣು ಉತ್ತಮ ಪರಿಹಾರವಾಗಿದೆ. ಇದು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವ ಮೂಲಕ ಹೃದಯವನ್ನು ಕಾಪಾಡುತ್ತದೆ. ಡ್ರ್ಯಾಗನ್‌ ಹಣ್ಣು ಮೊನೊಸಾಚುರೇಟೆಡ್‌ ಕೊಬ್ಬಿನ ಅತ್ಯುತ್ತಮ ಮೂಲವಾಗಿದೆ. ಹೃದಯದ ಬಗ್ಗೆ ಕಾಳಜಿ ನಿಮಗಿದ್ದರೆ ಆಗಾಗ ಈ ಹಣ್ಣನ್ನು ಸೇವಿಸಿರಿ. ಈ ಹಣ್ಣಿನ ರಸವು ನಿಮ್ಮ ದೇಹವನ್ನು ತಂಪಾಗಿಸಲು ಉತ್ತೇಜಿಸುತ್ತದೆ.

3 /5

ಡ್ರ್ಯಾಗನ್ ಹಣ್ಣು ವಿಟಮಿನ್‌ ʼಸಿʼ ಮತ್ತು ಕ್ಯಾರೊಟಿನಾಯ್ಡ್‌ಗಳ ಮೂಲವಾಗಿದೆ. ಇದರಲ್ಲಿನ ಉತ್ಕರ್ಷಣ ನಿರೋಧಕಗಳು ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಯ ಕಾರ್ಯ ಹೆಚ್ಚಿಸಲು ಸಹಾಯ ಮಾಡುತ್ತದೆ. ಈ ಹಣ್ಣಿನಲ್ಲಿ ಬೆಟಾಸಯಾನಿನ್‌ಗಳಿದ್ದು, ವರ್ಣದ್ರವ್ಯಗಳು ಸ್ವತಂತ್ರ ರಾಡಿಕಲ್‌ಗಳ ವಿರುದ್ಧ ಹೋರಾಡಲು ಮತ್ತು ಬಿಳಿ ರಕ್ತ ಕಣಗಳ ಸೋಂಕಿನಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಈ ಹಣ್ಣಿನಲ್ಲಿರುವ ಉತ್ಕರ್ಷಣ ನಿರೋಧಕಗಳು ಸಂಧಿವಾತ ಮತ್ತು ಉರಿಯೂತದ ಪರಿಸ್ಥಿತಿಗಳನ್ನು ತಡೆಯಲು ಸಹಾಯ ಮಾಡುತ್ತದೆ.

4 /5

ಮಧುಮೇಹ ಹೊಂದಿರುವವರು ಯಾವ ರೀತಿಯ ಹಣ್ಣು ಸೇವಿಸಬೇಕು ಅನ್ನೋ ಗೊಂದಲದಲ್ಲಿರುತ್ತಾರೆ. ಅಂತವರಿಗೆ ಡ್ರ್ಯಾಗನ್ ಫ್ರೂಟ್‌ ಅತ್ಯುತ್ತಮವಾಗಿದೆ. ಈ ಡ್ರ್ಯಾಗನ್‌ ಹಣ್ಣಿನಲ್ಲಿರುವ ಹೆಚ್ಚಿನ ಪ್ರಮಾಣದ ಫೈಬರ್‌ ಮಧುಮೇಹ ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ಸಕ್ಕರೆಯ ಸ್ಪೈಕ್ಗಳನ್ನು ನಿಗ್ರಹಿಸುವ ಮೂಲಕ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿರ್ವಹಿಸುತ್ತದೆ. 

5 /5

ಡ್ರ್ಯಾಗನ್‌ ಹಣ್ಣಿನ ರಸವು ಚರ್ಮದ ಬಣ್ಣವನ್ನು ಹೆಚ್ಚಿಸುವ ಮೂಲಕ ಕಾಂತಿಯನ್ನು ಉಂಟು ಮಾಡುತ್ತದೆ. ವಯಸ್ಸಾಗುವಿಕೆಯ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ. ಹೇರಳ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುವ ಡ್ರ್ಯಾಗನ್‌ ಹಣ್ಣನ್ನು ತಿನ್ನುವುದರಿಂದ ತ್ವಚೆಯನ್ನು ಯೌವನದಿಂದ ಇಡಬಹುದು.