/kannada/photo-gallery/try-this-simple-trick-to-remove-cockroaches-in-every-corner-of-the-house-within-few-minutes-249320 ಮನೆಯ ಮೂಲೆ ಮೂಲೆಯಲ್ಲಿ ಅವಿತಿರುವ ಜಿರಳೆಗಳನ್ನು 5 ನಿಮಿಷದಲ್ಲಿ ಹೊರಹಹಾಕಲು ಸಿಂಪಲ್ ಟ್ರಿಕ್ ಮನೆಯ ಮೂಲೆ ಮೂಲೆಯಲ್ಲಿ ಅವಿತಿರುವ ಜಿರಳೆಗಳನ್ನು 5 ನಿಮಿಷದಲ್ಲಿ ಹೊರಹಹಾಕಲು ಸಿಂಪಲ್ ಟ್ರಿಕ್ 249320

IND vs ZIM: ಮೂರನೇ ಪಂದ್ಯಕ್ಕೆ ರೆಡಿಯಾಯ್ತು ಪ್ಲೇಯಿಂಗ್‌ XI..! ಇಬ್ಬರು ಔಟ್‌.. ಶಿವಂ ದುಬೆ ಇನ್..?

Indias playing 11: ಮೊದಲ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಹೀನಾಯ ಸೋಲು ಕಂಡು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ಟೀಂ ಇಂಡಿಯಾ ಸಂಚಲನ ಮೂಡಿಸುವ ಗೆಲುವಿನ ಮೂಲಕ ಎದುರಾಳಿ ತಂಡದ ವಿರುದ್ಧ ಸೇಡು ತೀರಿಸಿಕೊಂಡಿದೆ. ಭಾನುವಾರ ನಡೆದ ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 100 ರನ್‌ಗಳ ಅಂತರದಿಂದ ಜಿಂಬಾಬ್ವೆ ತಂಡವನ್ನು ಮಣಿಸುವಲ್ಲಿ ಯಶಸ್ವಿಯಾಗಿದೆ.   

Written by - Zee Kannada News Desk | Last Updated : Jul 8, 2024, 07:11 AM IST
  • ಭಾನುವಾರ ನಡೆದ ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 100 ರನ್‌ಗಳ ಅಂತರದಿಂದ ಜಿಂಬಾಬ್ವೆ ತಂಡವನ್ನು ಮಣಿಸುವಲ್ಲಿ ಯಶಸ್ವಿಯಾಗಿದೆ.
  • ಉಭಯ ತಂಡಗಳ ನಡುವಿನ ಮೂರನೇ ಟಿ20 ಬುಧವಾರ, ಜುಲೈ 08 ರಂದು ಹರಾರೆ ಮೈದಾನದಲ್ಲಿ ನಡೆಯಲಿದೆ.
  • ರಿಯಾನ್ ಪರಾಗ್ ಬದಲಿಗೆ ಶಿವಂ ದುಬೆ ಬರುವ ಸಾಧ್ಯತೆ ಇದೆ, ಸಾಯಿ ಸುದರ್ಶನ್ ಬದಲಿಗೆ ಯಶಸ್ವಿ ಜೈಸ್ವಾಲ್ ಆಡಬಹುದು.
IND vs ZIM: ಮೂರನೇ ಪಂದ್ಯಕ್ಕೆ ರೆಡಿಯಾಯ್ತು ಪ್ಲೇಯಿಂಗ್‌ XI..! ಇಬ್ಬರು ಔಟ್‌.. ಶಿವಂ ದುಬೆ ಇನ್..? title=

Indias playing 11: ಮೊದಲ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಹೀನಾಯ ಸೋಲು ಕಂಡು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ಟೀಂ ಇಂಡಿಯಾ ಸಂಚಲನ ಮೂಡಿಸುವ ಗೆಲುವಿನ ಮೂಲಕ ಎದುರಾಳಿ ತಂಡದ ವಿರುದ್ಧ ಸೇಡು ತೀರಿಸಿಕೊಂಡಿದೆ. ಭಾನುವಾರ ನಡೆದ ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 100 ರನ್‌ಗಳ ಅಂತರದಿಂದ ಜಿಂಬಾಬ್ವೆ ತಂಡವನ್ನು ಮಣಿಸುವಲ್ಲಿ ಯಶಸ್ವಿಯಾಗಿದೆ. 

ಉಭಯ ತಂಡಗಳ ನಡುವಿನ ಮೂರನೇ ಟಿ20 ಬುಧವಾರ, ಜುಲೈ 08 ರಂದು ಹರಾರೆ ಮೈದಾನದಲ್ಲಿ ನಡೆಯಲಿದೆ. ಈ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾದ ಅಂತಿಮ ತಂಡದ ಆಯ್ಕೆಯನ್ನು ತಂಡದ ನಾಯಕ ಶುಭಮನ್ ಗಿಲ್ ಹಾಗೂ ಕೋಚ್ ವಿವಿಎಸ್ ಲಕ್ಷ್ಮಣ್ ಮಾಡಿದ್ದಾರೆ, ತಂಡದ ಆಯ್ಕೆ ತಲೆ ನೋವಾಗಿ ಪರಿನಮಿಸಿದರೂ ಕೂಡ ತಂಡ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. 

ಇದನ್ನೂ ಓದಿ: IND VS ZIM Playing XI: ಭಾರತ ತಂಡದಲ್ಲಿ ಮಹತ್ವ ಬದಲಾವಣೆ..? ಎರಡನೇ ಪಂದ್ಯಕ್ಕೆ ರೆಡಿಯಾಯ್ತು ಆಟಗಾರರ ಪಟ್ಟಿ...

ಟಿ20 ವಿಶ್ವಕಪ್ 2024ರ ತಂಡದ ಭಾಗವಾಗಿರುವ ಯಶಸ್ವಿ ಜೈಸ್ವಾಲ್, ಶಿವಂ ದುಬೆ ಮತ್ತು ಸಂಜು ಸ್ಯಾಮ್ಸನ್ ಭಾರತ ತಂಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಟಿ20 ವಿಶ್ವಕಪ್ 2024 ಜಿಂಬಾಬ್ವೆ ಪ್ರವಾಸದ ಮೊದಲ ಎರಡು ಟಿ20 ಪಂದ್ಯಗಳಿಂದ ಈ ಮೂವರು ಹೊರಗುಳಿದಿದ್ದರು.

ಸಾಯಿ ಸುದರ್ಶನ್, ಹರ್ಷಿತ್ ರಾಣಾ ಮತ್ತು ಜಿತೇಶ್ ಶರ್ಮಾ ಅವಾರ ಸ್ಥಾನಕ್ಕೆ ಈ ಮೂವರು ಎಂಟ್ರಿ ಕೊಡಲಿದ್ದಾರೆ. ಶಿವಂ ದುಬೆ, ಸಂಜು ಸ್ಯಾಮ್ಸನ್ ಮತ್ತು ಯಶಸ್ವಿ ಜೈಸ್ವಾಲ್ ಕೊನೆಯ ಮೂರು ಟಿ20 ಐ ಗಳಿಗೆ ಲಭ್ಯವಿದ್ದು, ಸಾಯಿ ಸುದರ್ಶನ್, ಹರ್ಷಿತಾ ರಾಣಾ ಮತ್ತು ಜಿತೇಶ್ ಶರ್ಮಾ ತಂಡವನ್ನು ತೊರೆಯಲಿದ್ದಾರೆ. 

ರಿಯಾನ್ ಪರಾಗ್ ಬದಲಿಗೆ ಶಿವಂ ದುಬೆ ಬರುವ ಸಾಧ್ಯತೆ ಇದೆ, ಸಾಯಿ ಸುದರ್ಶನ್ ಬದಲಿಗೆ ಯಶಸ್ವಿ ಜೈಸ್ವಾಲ್ ಆಡಬಹುದು. ಈ ಬದಲಾವಣೆಗಳನ್ನು ಹೊರತುಪಡಿಸಿ, ಇತರ ಸಂಯೋಜನೆಗಳಲ್ಲಿ ಯಾವುದೇ ಬದಲಾವಣೆಗಳ ಸಾಧ್ಯತೆಯಿಲ್ಲ. ಶುಭಮನ್ ಗಿಲ್ ಮತ್ತು ಅಭಿಷೇಕ್ ಶರ್ಮಾ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ. ರಿಂಕು ಸಿಂಗ್ ಫಿನಿಶರ್ ಆಗಿ ಆಡಲಿದ್ದರೆ, ವಾಷಿಂಗ್ಟನ್ ಸುಂದರ್ ಸ್ಪಿನ್ ಆಲ್ ರೌಂಡರ್ ಆಗಿ ಆಡಲಿದ್ದಾರೆ. ಇನ್ನೂ, ರವಿ ಬಿಷ್ಣೋಯ್ ಸ್ಪೆಷಲಿಸ್ಟ್ ಸ್ಪಿನ್ನರ್ ಆಗಿ ಮುಂದುವರಿಯಲಿದ್ದಾರೆ. 

ಇದನ್ನೂ ಓದಿ: ಮೊದಲ ಪಂದ್ಯದಲ್ಲೇ ನಿರಾಸೆ ಮಡಿಸಿದ ಐಪಿಎಲ್‌ ಸ್ಟಾರ್ಸ್‌..!ತಪ್ಪು ನಿರ್ಧಾರ ತೆಗೆದುಕೊಂಡ್ರಾ ಬಿಸಿಸಿಐ..?

ಜಿಂಬಾಬ್ವೆ ವಿರುದ್ಧದ ಕೊನೆಯ ಮೂರು T20I ಪಂದ್ಯಗಳಿಗೆ ಟೀಂ ಇಂಡಿಯಾ ಪ್ಲೇಯಿಂಗ್‌ XI:
ಶುಭಮನ್ ಗಿಲ್ (ನಾಯಕ), ರುತುರಾಜ್ ಗಾಯಕ್ವಾಡ್, ಅಭಿಷೇಕ್ ಶರ್ಮಾ, ರಿಂಕು ಸಿಂಗ್, ಧ್ರುವ್ ಜುರೆಲ್, ಸಂಜು ಸ್ಯಾಮ್ಸನ್, ರಯಾನ್ ಪರಾಗ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಅವೇಶ್ ಖಾನ್, ಖಲೀಲ್ ಅಹ್ಮದ್, ಮುಖೇಶ್ ಕುಮಾರ್, ಮುಖೇಶ್ ಕುಮಾರ್ , ಯಶಸ್ವಿ ಜೈಸ್ವಾಲ್, ಶಿವಂ ದುಬೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ