Realme C63 Price & Specifications: ಈ ಫೋನ್ನ ಬ್ಯಾಟರಿ ಬ್ಯಾಕಪ್ ಅದ್ಭುತವಾಗಿದೆ. ಇದು 45W ವೇಗದ ಚಾರ್ಜಿಂಗ್ನೊಂದಿಗೆ 5000mAh ಬ್ಯಾಟರಿ ಬ್ಯಾಕಪ್ ಒದಗಿಸುತ್ತದೆ. ಇದು ಏರ್ ಗೆಸ್ಚರ್ಗಳನ್ನು ಹೊಂದಿದ್ದು, ಕಾಲ್ಗಳಿಗೆ ಉತ್ತರಿಸಲು, ಇನ್ಕಮಿಂಗ್ ಕರೆಗಳನ್ನು ಮ್ಯೂಟ್ ಮಾಡಲು ಮತ್ತು ವಿಡಿಯೋ ಸ್ಟ್ರೀಮ್ಗಳ ನಡುವೆ ಮೇಲಕ್ಕೆ/ಕೆಳಗೆ ಸ್ವೈಪ್ ಮಾಡುವ ಆಯ್ಕೆಯನ್ನು ಹೊಂದಿದೆ.
Realme C63 Specifications: ರಿಯಲ್ಮಿ ಕಂಪನಿಯು ಭಾರತೀಯ ಮಾರುಕಟ್ಟೆಗೆ ನಾಳೆ ತನ್ನ ಹೊಚ್ಚ ಹೊಸ ಸ್ಮಾರ್ಟ್ಫೋನ್ ಬಿಡುಗಡೆ ಮಾಡುತ್ತಿದೆ. ಹಲವಾರು ಉತ್ತಮ ವೈಶಿಷ್ಟ್ಯ ಹೊಂದಿರುವ ವಿವಿಧ ಶ್ರೇಣಿಯ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡಿರುವ ರಿಯಲ್ಮಿ ಇದೀಗ ನೂತನ ಮೊಬೈಲ್ ಪರಿಚಯಿಸುತ್ತಿದೆ. Realme C63 ಸ್ಮಾರ್ಟ್ಫೋನ್ ಜುಲೈ 4ರಂದು ಬಿಡುಗಡೆಯಾಗಲಿದೆ. ಇದು 50MP ಕ್ಯಾಮೆರಾ, 5000mAh ಬ್ಯಾಟರಿ, UNISOC T612 ಆಕ್ಟಾ-ಕೋರ್ 12 nm ಪ್ರೊಸೆಸರ್ ಹೊಂದಿದೆ. ಈ ಹೊಸ ಸ್ಮಾರ್ಟ್ಫೋನ್ನ ಬೆಲೆ & ಫೀಚರ್ಸ್ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ...
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.
Realme C63 ಸ್ಮಾರ್ಟ್ಫೋನ್ ಜುಲೈ 4ರಂದು ಬಿಡುಗಡೆಯಾಗಲಿದೆ. ಇದು 50MP ಕ್ಯಾಮೆರಾ, 5000mAh ಬ್ಯಾಟರಿ, UNISOC T612 ಆಕ್ಟಾ-ಕೋರ್ 12 nm ಪ್ರೊಸೆಸರ್ ಹೊಂದಿದೆ. ಇನ್ನು ಹಲವಾರು ಅದ್ಭುತ ವೈಶಿಷ್ಟ್ಯಗಳನ್ನು ಹೊಂದಿರುವ ಸ್ಮಾರ್ಟ್ಫೋನ್ ಬಜೆಟ್ ಬೆಲೆಗೆ ಲಭ್ಯವಿರಲಿದೆ ಎಂದು ಹೇಳಲಾಗುತ್ತಿದೆ.
Realme C63 ಸ್ಮಾರ್ಟ್ಫೋನ್ ಕೇವಲ 7.74mm ದಪ್ಪವಿದೆ. ಇದು 8GB RAM & ಹೆಚ್ಚುವರಿ 8GB ವರ್ಚುವಲ್ RAM ಹೊಂದಿದೆ. ಇದು Unisoc T612 SoC ಪ್ರೊಸೆಸರ್ನೊಂದಿಗೆ(ಜೊತೆಗೆ Mali-G57 GPU)ಕಾರ್ಯನಿರ್ವಹಿಸಲಿದೆ. ಇದರ ಡಿಸ್ಪ್ಲೇಯು 560nits ಗರಿಷ್ಠ ಬ್ರೈಟ್ನೆಸ್ ಹೊಂದಿದೆ. 50MP ಹಿಂಬದಿಯ ಕ್ಯಾಮರಾ, 8MP ಫ್ರಂಟ್ ಕ್ಯಾಮರಾ ಇರುವ ಈ ಫೋನ್ ಸೈಡ್-ಮೌಂಟೆಡ್ ಫಿಂಗರ್ಪ್ರಿಂಟ್ ಸ್ಕ್ಯಾನರ್ ಹೊಂದಿದೆ.
ರಿಯಲ್ಮಿ UI T ಆವೃತ್ತಿಯೊಂದಿಗೆ Android 13 OSನೊಂದಿಗೆ ಕಾರ್ಯನಿರ್ವಹಿಸಲಿದೆ. ಡ್ಯುಯಲ್ ಸಿಮ್ (ನ್ಯಾನೋ + ನ್ಯಾನೋ + ಮೈಕ್ರೊ ಎಸ್ಡಿ) ಹೊಂದಿರುವ ಈ ಫೋನ್ 3.5mm ಆಡಿಯೋ ಜ್ಯಾಕ್ (bottom-ported speaker) ಹೊಂದಿದೆ. 167.26×76.67×7.74 mm ಅರಳತೆಯ ಈ ಫೋನ್ 189 ಗ್ರಾಂ (Jade Green)/191 ಗ್ರಾಂ (Leather Blue) ತೂಕ ಹೊಂದಿದೆ. ಇದು ಡ್ಯುಯಲ್ 4G VoLTE, Wi-Fi 802.11 ac (2.4GHz + 5GHz), ಬ್ಲೂಟೂತ್ 5.=0, GPS + ಗ್ಲೋನಾಸ್, USB ಟೈಪ್-C ಕನೆಕ್ಟಿವಿಟಿ ಆಯ್ಕೆ ಹೊಂದಿದೆ.
ಈ ಫೋನ್ನ ಬ್ಯಾಟರಿ ಬ್ಯಾಕಪ್ ಅದ್ಭುತವಾಗಿದೆ. ಇದು 45W ವೇಗದ ಚಾರ್ಜಿಂಗ್ನೊಂದಿಗೆ 5000mAh ಬ್ಯಾಟರಿ ಬ್ಯಾಕಪ್ ಒದಗಿಸುತ್ತದೆ. ಇದು ಏರ್ ಗೆಸ್ಚರ್ಗಳನ್ನು ಹೊಂದಿದ್ದು, ಕಾಲ್ಗಳಿಗೆ ಉತ್ತರಿಸಲು, ಇನ್ಕಮಿಂಗ್ ಕರೆ ಮ್ಯೂಟ್ ಮಾಡಲು & ವಿಡಿಯೋ ಸ್ಟ್ರೀಮ್ಗಳ ನಡುವೆ ಮೇಲಕ್ಕೆ/ಕೆಳಗೆ ಸ್ವೈಪ್ ಮಾಡುವ ಆಯ್ಕೆ ಹೊಂದಿದೆ.
ರಿಯಲ್ಮಿ C63 ಜೂನ್ 5ರಿಂದ ಇಂಡೋನೇಷ್ಯಾದಲ್ಲಿ ಮಾರಾಟ ಆರಂಭಿಸಿತ್ತು. ಇಂಡೋನೇಷಿಯನ್ ವೆಬ್ಸೈಟ್ನಲ್ಲಿ ಇದರ ಆರಂಭಿಕ ಬೆಲೆ 10,250 ರೂ. ಇತ್ತು. 6GB/128GB ಸ್ಟೋರೇಜ್ ವೇರಿಯಂಟ್ನ ಬೆಲೆ 10,250 ರೂ.(IDR1,999,000 = $125/€115)ಇದೆ. 8GB/128GB ಸ್ಟೋರೇಜ್ ಮಾದರಿಯ ಬೆಲೆ 11,790 ರೂ. (IDR2,299,000 = $140/€130) ಇದೆ. ಭಾರತದಲ್ಲಿ ಇದೇ ಬೆಲೆಗೆ ಬಿಡುಗಡೆಯಾಗುತ್ತಾ? ಅಥವಾ ಬೇರೆ ಬೆಲೆಯೊಂದಿಗೆ ಲಾಂಚ್ ಆಗುತ್ತಾ? ಅಂತಾ ಕಾದುನೋಡಬೇಕಿದೆ.