umapathy srinivas: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಹಾಗೂ ಡಿ ಗ್ಯಾಂಗ್ ಪೊಲೀಸ್ ಕಸ್ಟಡಿಯಲ್ಲಿದ್ದಾರೆ.. ಈ ಹಿಂದೆ ನಟ ದರ್ಶನ್ ನಿರ್ಮಾಪಕ ಉಮಾಪತಿ ಅವರಿಗೆ ತಗಡು ಎಂದಿದ್ದರು.. ಅಂದು ಉಮಾಪತಿ ಸೈಲೆಂಟ್ ಆಗಿದ್ದ ಇವರು ಇಂದು ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಶೇರ್ ಮಾಡುವ ಮೂಲಕ ಖಡಕ್ ತಿರುಗೇಟು ನೀಡಿದ್ದಾರೆ..
ನಿರ್ಮಾಪಕ ಉಮಾಪತಿ ತಮ್ಮ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ಸ್ಟೋರಿ ಮೂಲಕ ಸೈಲೆಂಟಾಗಿ ಖಡಕ್ ಉತ್ತರ ನೀಡಿದ್ದಾರೆ..
ಅಂದು ತನ್ನನ್ನು ದರ್ಶನ್ ರಾಜಾರೋಷವಾಗಿ ತಗಡು ಎಂದು ಕರೆದಾಗಲೂ ಸೈಲೆಂಟ್ ಆಗಿದ್ದ ಉಮಾಪತಿ ಶ್ರೀನಿವಾಸ್ ಅವರು, ಇಂದು ವೈಲೆಂಟ್ ಉತ್ತರ ಕೊಟ್ಟಿದ್ದಾರೆ.
“ತಾಳ್ಮೆ ಕೆಲವೊಮ್ಮೆ ಶಕ್ತಿ” ಎಂದು ವಿಡಿಯೋ ಪೋಸ್ಟ್ ಮಾಡಿದ್ದಾರೆ ನಿರ್ಮಾಪಕ ಉಮಾಪತಿ.
ತಗಡು ಯಾರು ಗೊತ್ತಾಯ್ತಾ ಎಂದು ಪರೋಕ್ಷವಾಗಿ ಕೌಂಟರ್ ಕೊಟ್ಟಿದ್ದಾರೆ. ಉಮಾಪತಿ ಪರವಾಗಿ ಹಲವು ಮೀಮ್ಸ್ ವೈರಲ್ ಆಗಿವೆ.
ಸದ್ಯ ಮೀಮ್ಸ್ ಗಳನ್ನು ಉಮಾಪತಿ ತಮ್ಮ ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇನ್ನೊಂದರಲ್ಲಿ ಅಣ್ಣ ಚಿನ್ನದ ತಗಡು ಎಂದೂ ಬರೆಯಲಾಗಿದೆ.