T20 World Cup 2024 Super 8: T20 ವಿಶ್ವಕಪ್ 2024 ಸೂಪರ್ 8 ಹಂತ ತಲುಪಿದೆ. ಭಾರತ, ಅಮೆರಿಕ, ಆಸ್ಟ್ರೇಲಿಯಾ, ಇಂಗ್ಲೆಂಡ್, ಅಫ್ಘಾನಿಸ್ತಾನ, ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಈಗಾಗಲೇ ಸೂಪರ್ 8 ತಲುಪಿವೆ. ಮತ್ತೊಂದು ಸ್ಥಾನಕ್ಕಾಗಿ ಬಾಂಗ್ಲಾದೇಶ ಮತ್ತು ನೆದರ್ಲೆಂಡ್ಸ್ ನಡುವೆ ಪೈಪೋಟಿ ಇದೆ.
ಸೂಪರ್ 8 ತಲುಪಿದ 8 ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಗ್ರೂಪ್ '1' ಭಾರತ, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ, ಬಾಂಗ್ಲಾದೇಶ ಅಥವಾ ನೆದರ್ಲ್ಯಾಂಡ್ಸ್ ಅನ್ನು ಒಳಗೊಂಡಿದೆ. ಮತ್ತು ಗುಂಪು 2 ರಲ್ಲಿ ಅಮೆರಿಕ, ಇಂಗ್ಲೆಂಡ್, ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳಿವೆ.
ಸೂಪರ್ 8 ಪಂದ್ಯಗಳು ಮುಗಿದ ನಂತರ ಎರಡು ಗುಂಪಿನ ಅಗ್ರ 2 ತಂಡಗಳು ಸೆಮಿಸ್’ಗೆ ತಲುಪಲಿವೆ. ಅದರ ನಂತರ ಸೆಮಿಫೈನಲ್ ಪಂದ್ಯಗಳು ಜೂನ್ 27 ರಂದು ನಡೆಯಲಿದ್ದು, ಜೂನ್ 29 ರಂದು ಫೈನಲ್ ನಡೆಯಲಿದೆ.
ಸೂಪರ್ 8ರಲ್ಲಿ ಭಾರತದ ಗುಂಪಿನ ವಿಷಯಕ್ಕೆ ಬಂದರೆ ಎರಡು ಅಗ್ರ ತಂಡಗಳು ಮತ್ತು ಎರಡು ದುರ್ಬಲ ತಂಡಗಳಿವೆ. ಆದರೆ ಈ ಎರಡು ದುರ್ಬಲ ತಂಡಗಳೂ ದೊಡ್ಡ ತಂಡಗಳಿಗೆ ಆಘಾತ ನೀಡುವ ಸಾಮರ್ಥ್ಯ ಹೊಂದಿವೆ.
ವಿಶೇಷವಾಗಿ ಅಫ್ಘಾನಿಸ್ತಾನದಿಂದ ಭಾರತಕ್ಕೆ ಅಪಾಯವಿದೆ. ಬ್ರಿಡ್ಜ್ ಟೌನ್’ನಲ್ಲಿ ಟೀಂ ಇಂಡಿಯಾ ಅಫ್ಘಾನಿಸ್ತಾನವನ್ನು ಎದುರಿಸಲಿದೆ. ವೆಸ್ಟ್ ಇಂಡೀಸ್ ಪಿಚ್‌ಗಳು ನಿಧಾನವಾಗಿದ್ದು, ಇದು ಅಫ್ಘಾನಿಸ್ತಾನಕ್ಕೆ ಹೊಂದಿಕೊಳ್ಳುವ ಸಾಧ್ಯತೆ ಇದೆ.
ಅಫ್ಘಾನಿಸ್ತಾನ ತಂಡವು ರಶೀದ್ ಖಾನ್ ಮತ್ತು ನೂರ್ ಅಹ್ಮದ್ ಅವರಂತಹ ಗುಣಮಟ್ಟದ ಸ್ಪಿನ್ನರ್’ಗಳನ್ನು ಹೊಂದಿದೆ. ಅವರನ್ನು ಕಡಿಮೆ ಅಂದಾಜು ಮಾಡಲು ಸಾಧ್ಯವಿಲ್ಲ. ವೇಗಿ ಫಾರೂಕಿ ಸೂಪರ್ ಫಾರ್ಮ್’ನಲ್ಲಿದ್ದಾರೆ. ನ್ಯೂಜಿಲೆಂಡ್ ತಂಡವನ್ನು 75 ರನ್’ಗಳಿಗೆ ಆಲೌಟ್ ಮಾಡಿದ ಹೆಮ್ಮೆ ಅಫ್ಘಾನಿಸ್ತಾನಕ್ಕಿದೆ.
ಇದನ್ನೂ ಓದಿ: ಟೀಂ ಇಂಡಿಯಾದ ಮುಂದಿನ ಮುಖ್ಯ ಕೋಚ್ ಇವರೇ.. ಅಧಿಕೃತ ಘೋಷಣೆಗೆ ಮುಹೂರ್ತ ಫಿಕ್ಸ್ ಮಾಡಿದ ಬಿಸಿಸಿಐ
ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್’ನಲ್ಲಿ ಇಂಗ್ಲೆಂಡ್, ಪಾಕಿಸ್ತಾನದಂತಹ ಅಗ್ರ ತಂಡಗಳಿಗೆ ಅಫ್ಘಾನಿಸ್ತಾನ ಶಾಕ್ ನೀಡಿತ್ತು. ಸೂಪರ್ 8 ರಲ್ಲಿ, ಆಸ್ಟ್ರೇಲಿಯಾಕ್ಕಿಂತ ಟೀಮ್ ಇಂಡಿಯಾಗೆ ಹೆಚ್ಚು ಅಪಾಯಕಾರಿ ಅಫ್ಘಾನಿಸ್ತಾನ ಎಂದೇ ಹೇಳಬಹುದು. ಹೀಗಿರುವಾಗ ಅಫ್ಘಾನಿಸ್ತಾನ ವಿರುದ್ಧ ಭಾರತ ಸರಿಯಾದ ಯೋಜನೆಯೊಂದಿಗೆ ಕಣಕ್ಕೆ ಇಳಿಯಬೇಕು. ಇಲ್ಲದಿದ್ದರೆ ಮೊದಲ ಹಂತದಲ್ಲಿ ಹೊಡೆತ ಬೀಳುವ ಸಾಧ್ಯತೆ ಇರುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.