ಮೊದಲು ಪಾಕಿಸ್ತಾನಕ್ಕೆ ಸೋಲು… ಬಳಿಕ ವಿಶ್ವಕಪ್ ಸೂಪರ್ 8 ಎಂಟ್ರಿ! ಬ್ಯಾಕ್ ಟು ಬ್ಯಾಕ್ ಇತಿಹಾಸ ಸೃಷ್ಟಿಸಿದ USA

USA Qualification for T20 World Cup 2026: ಶುಕ್ರವಾರ (ಜೂನ್ 14) ಫ್ಲೋರಿಡಾದಲ್ಲಿ ಐರ್ಲೆಂಡ್ ವಿರುದ್ಧ ಅಮೆರಿಕದ ಮೂರನೇ ಪಂದ್ಯವಿತ್ತು, ಆದರೆ ಈ ಪಂದ್ಯ ಮಳೆಯಿಂದಾಗಿ ಆಡಲು ಸಾಧ್ಯವಾಗಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಅಮೆರಿಕ ಮತ್ತು ಐರ್ಲೆಂಡ್ ತಲಾ ಒಂದೊಂದು ಅಂಕ ಗಳಿಸಿದವು.

Written by - Bhavishya Shetty | Last Updated : Jun 15, 2024, 08:50 PM IST
    • T20 ವಿಶ್ವಕಪ್‌’ನಲ್ಲಿ US ತಂಡದ ಪ್ರದರ್ಶನವು ಇಲ್ಲಿಯವರೆಗೆ ಅತ್ಯುತ್ತಮವಾಗಿದೆ
    • 5 ಅಂಕಗಳನ್ನು ಗಳಿಸಿ ಅಮೆರಿಕ ತಂಡ ಸೂಪರ್-8 ತಲುಪಿದೆ
    • ಸೂಪರ್ ಓವರ್‌’ನಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಐತಿಹಾಸಿಕ ಜಯ
ಮೊದಲು ಪಾಕಿಸ್ತಾನಕ್ಕೆ ಸೋಲು… ಬಳಿಕ ವಿಶ್ವಕಪ್ ಸೂಪರ್ 8 ಎಂಟ್ರಿ! ಬ್ಯಾಕ್ ಟು ಬ್ಯಾಕ್ ಇತಿಹಾಸ ಸೃಷ್ಟಿಸಿದ USA title=
File Photo

USA Qualification for T20 World Cup 2026: T20 ವಿಶ್ವಕಪ್‌’ನಲ್ಲಿ US ತಂಡದ ಪ್ರದರ್ಶನವು ಇಲ್ಲಿಯವರೆಗೆ ಅತ್ಯುತ್ತಮವಾಗಿದೆ. ಗುಂಪು ಹಂತದಲ್ಲಿ ಅದ್ಭುತವಾಗಿ ಆಡಿದ ತಂಡ, 3 ಪಂದ್ಯಗಳಲ್ಲಿ 5 ಅಂಕಗಳನ್ನು ಗಳಿಸಿ ಅಮೆರಿಕ ತಂಡ ಸೂಪರ್-8 ತಲುಪಿದೆ. ಮೊದಲ ಪಂದ್ಯದಲ್ಲಿ ಕೆನಡಾ ವಿರುದ್ಧ 195 ರನ್‌’ಗಳ ಗುರಿಯನ್ನು ಬೆನ್ನಟ್ಟಿ ಎಲ್ಲರನ್ನು ಅಚ್ಚರಿಗೊಳಿಸಿತ್ತು. ಆ ಬಳಿಕ ಸೂಪರ್ ಓವರ್‌’ನಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಐತಿಹಾಸಿಕ ಜಯ ಸಾಧಿಸಿತು.

ಇದನ್ನೂ ಓದಿ: ಪ್ರವಾಹ ಉಂಟಾಗುವ ಮುನ್ನ ಅಧಿಕಾರಿಗಳು ಮುನ್ನೆಚ್ಚರಿಕಾ ಕ್ರಮವಹಿಸಿ: ಕೃಷ್ಣ ಬೈರೇಗೌಡ

ಶುಕ್ರವಾರ (ಜೂನ್ 14) ಫ್ಲೋರಿಡಾದಲ್ಲಿ ಐರ್ಲೆಂಡ್ ವಿರುದ್ಧ ಅಮೆರಿಕದ ಮೂರನೇ ಪಂದ್ಯವಿತ್ತು, ಆದರೆ ಈ ಪಂದ್ಯ ಮಳೆಯಿಂದಾಗಿ ಆಡಲು ಸಾಧ್ಯವಾಗಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಅಮೆರಿಕ ಮತ್ತು ಐರ್ಲೆಂಡ್ ತಲಾ ಒಂದೊಂದು ಅಂಕ ಗಳಿಸಿದವು. ಅಮೆರಿಕ ತಂಡ 3 ಪಂದ್ಯಗಳಲ್ಲಿ 5 ಅಂಕಗಳೊಂದಿಗೆ ಸೂಪರ್-8 ತಲುಪಿದೆ. ಜೊತೆಗೆ ಇತಿಹಾಸ ಸೃಷ್ಟಿಸಿದೆ.

2026ರ ಟಿ20 ವಿಶ್ವಕಪ್‌’ಗೆ ಅಮೆರಿಕ ಟಿಕೆಟ್‌ ಪಡೆದುಕೊಂಡಿದೆ. ಭಾರತ ಮತ್ತು ಶ್ರೀಲಂಕಾ ಆತಿಥ್ಯದಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಅಮೆರಿಕ ತಂಡ ಭಾಗವಹಿಸಲಿದೆ. ಆತಿಥೇಯರಾಗಿರುವ ಭಾರತ ಮತ್ತು ಶ್ರೀಲಂಕಾ ಈಗಾಗಲೇ ಟಿ20 ವಿಶ್ವಕಪ್ 2026ಕ್ಕೆ ಪ್ರವೇಶ ಪಡೆದಿವೆ. ಇವೆರಡನ್ನು ಹೊರತುಪಡಿಸಿ ಸೂಪರ್-8 ತಲುಪಿರುವ ಏಳು ತಂಡಗಳು ಭಾಗವಹಿಸಲಿವೆ.

ಇದನ್ನೂ ಓದಿ: ರೂ. 100 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ ಕೆಜಿಎಫ್‌ ನಟಿ ರವೀನಾ.! ಕಾರಣ ಏನು ಗೊತ್ತಾ..?

ಭಾರತ ಸೂಪರ್-8 ತಲುಪಿದೆ. ಇದಲ್ಲದೆ, ಅಮೆರಿಕ, ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ತಂಡಗಳು ಸೂಪರ್-8 ಗೆ ಲಗ್ಗೆ ಇಟ್ಟಿವೆ. ಈ ತಂಡಗಳು ಮುಂದಿನ ಟಿ20 ವಿಶ್ವಕಪ್‌’ಗೂ ಟಿಕೆಟ್ ಪಡೆದಿವೆ. ಈ ತಂಡಗಳಲ್ಲದೆ ಇತರ ಮೂರು ದೇಶಗಳೂ ಸ್ಥಾನ ಪಡೆಯಲಿವೆ. ಜೂನ್ 30, 2024 ರವರೆಗೆ ಅತ್ಯುನ್ನತ ಶ್ರೇಣಿಯನ್ನು ಹೊಂದಿರುವ ತಂಡಗಳಿಗೆ ಆದ್ಯತೆ ನೀಡಲಾಗುತ್ತದೆ. ಒಟ್ಟು 12 ತಂಡಗಳು ನೇರ ಪ್ರವೇಶ ಪಡೆಯಲಿದ್ದು, ಐಸಿಸಿಯ ಪ್ರಾದೇಶಿಕ ಅರ್ಹತೆಯ ಮೂಲಕ 8 ತಂಡಗಳ ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News