ಪಾಕ್‌ vs ಭಾರತ ಟಿ-20 ವರ್ಲ್ಡ್‌ಕಪ್‌: ನ್ಯೂಯಾರ್ಕ್‌ನಲ್ಲಿ ಕೋಹ್ಲಿ ಜೊತೆ ಕಾಣಿಸಿಕೊಂಡ ಅನುಷ್ಕಾ.

T20 Worldcup 2024: ಪಾಕ್‌ vs ಭಾರತ ಹೈವೋಟೇಜ್‌ ಪಂದ್ಯ ಭಾನುವಾರ ರಾತ್ರಿ ನ್ಯೂಯಾರ್ಕ್‌ನಲ್ಲಿ ನಡೆಯಲಿದೆ. ಭಾರತ ತಂಡ ಈಗಾಗಲೇ ನ್ಯೂಯಾರ್ಕ್‌ನಲ್ಲಿ ಬಂದಿಳಿದಿದ್ದಾರೆ. ಈ ನಡುವೆ ಕೋಹ್ಲಿ ಹಾಗೂ ವಿರಾಟ್‌ ಜೋಡಿ ನ್ಯೂಯಾರ್ಕ್‌ ನಗರದ ರಸ್ತೆಗಳಲ್ಲಿ ಕಾಣಿಸಿಕೊಂಡಿದ್ದಾರೆ.

Written by - Zee Kannada News Desk | Last Updated : Jun 9, 2024, 01:25 PM IST
  • ಪತ್ನಿ ಅನುಷ್ಕಾ ಶರ್ಮಾ ಜೊತೆ ನ್ಯೂಯಾರ್ಕ್‌ ರಸ್ತೆಯಲ್ಲಿ ಜೊತೆಯಾಗಿ ಹೆಜ್ಜೆ ಹಾಕಿದ ಕೋಹ್ಲಿ.
  • ಭೂಷಣ್‌ ಸೇಥಿ ಎಂಬುವವರು ಹಂಚಿಕೊಂಡಿರುವ ವಿಡಿಯೋ.
  • ಕೋಹ್ಲಿ ಹಾಗೂ ಅವರ ಕುಟುಂಬದವರೊಂದಿಗಿನ ಸಂವಾದ ತುಂಬಾ ಚೆನ್ನಾಗಿತ್ತು ಎಂದ ಭೂಷಣ್‌.
ಪಾಕ್‌ vs ಭಾರತ ಟಿ-20 ವರ್ಲ್ಡ್‌ಕಪ್‌: ನ್ಯೂಯಾರ್ಕ್‌ನಲ್ಲಿ ಕೋಹ್ಲಿ ಜೊತೆ ಕಾಣಿಸಿಕೊಂಡ ಅನುಷ್ಕಾ. title=

Virushka: ಪಾಕಿಸ್ತಾನ ಹಾಗೂ ಭಾರತ ನಡುವಿನ ಹೈ ವೋಲ್ಟೇಜ್‌ ಮ್ಯಾಚ್‌ ಭಾನುವಾರ ರಾತ್ರಿ ನಸ್ಸೌ ಕೌಂಟಿ ಅಂತರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಭಾರತ ತಂಡದ ಆಟಗಾರರು ಈಗಾಗಲೇ ನ್ಯೂಯಾರ್ಕ್‌ನಲ್ಲಿ ಬಂದು ಇಳಿದಿದ್ದಾರೆ. 

ಕಿಂಗ್‌ ಕೋಹ್ಲಿ ಕೂಡ ಈ ಪಂದ್ಯದಲ್ಲಿ ಆಡಲಿದ್ದು ಪತ್ನಿ ಅನುಷ್ಕಾ ಶರ್ಮಾ ಜೊತೆ ನ್ಯೂಯಾರ್ಕ್‌ ರಸ್ತೆಯಲ್ಲಿ ಜೊತೆಯಾಗಿ ಹೆಜ್ಜೆ ಹಾಕುತ್ತಾ ಕಾಣಿಸಿಕೊಂಡಿದ್ದಾರೆ. ಜೋಡಿ ನ್ಯೂಯಾರ್ಕ್‌ನಲ್ಲಿ ಕಣಿಸಿಕೊಂಡಿರುವ ಕ್ಷಣವನ್ನು ಸೋಶಿಯಲ್‌ ಮಿಡಿಯಾ ಬಳಕೆದಾರರು ಒಬ್ಬರು ಸೆರೆ ಹಿಡಿದು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಬಲಿಷ್ಠ ಪಾಕ್‌ ಎದುರು ಅಬ್ಬರಿಸಿದ ಅಮೇರಿಕಾ: ಸೂಪರ್‌ ಓವರ್‌ನಲ್ಲಿ ಪಂದ್ಯ ಗೆದ್ದ ಯುಎಸ್‌ಎ

ಭೂಷಣ್‌ ಸೇಥಿ ಎಂಬುವವರು ಹಂಚಿಕೊಂಡಿರುವ ಈ ವಿಡಿಯೋದಲ್ಲಿ, ಕೋಹ್ಲಿ ಹಾಗೂ ಅನುಷ್ಕಾ ಜೋಡಿ ಕಾಫಿ ಕಪ್‌ ಹಿಡಿದು ಕಾರಿಗೆ ಏರುತ್ತಿರುವ ದೃಶ್ಯ ಸೆರೆಯಾಗಿದೆ. ಟಿಫಿನ್‌ ಮಾಡಲು ಹೋದ ಸಂದರ್ಭದಲ್ಲಿ ದಂಪತಿಯನ್ನು ಭೇಟಿ ಮಾಡಿದ್ದಾಗಿ ಭೂಷಣ್‌ ಸೇಥಿ ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

"ಲೆಜೆಂಡ್‌ ಕೋಹ್ಲಿಯವರನ್ನ, ಪತ್ನಿ ಅನುಷ್ಕಾ ಹಾಗೂ ಮಕ್ಕಳ ಜೊತೆಗೆ ರೆಸ್ಟೋರೆಂಟ್‌ನಲ್ಲಿ ಭೇಟಿಯಾದೆ. ಜೊತೆಯಲ್ಲಿಯೇ ನಾವು ಬ್ರೇಕ್‌ಫಾಸ್ಟ್‌ ಸೇವಿಸಿದೆವು. ಕೋಹ್ಲಿ ಹಾಗೂ ಅವರ ಕುಟುಂಬದವರೊಂದಿಗಿನ ಸಂವಾದ ತುಂಬಾ ಚೆನ್ನಾಗಿತ್ತು" ಎಂದು  ಭೂಷಣ್‌ ಸೇಥಿ ವಿಡಿಯೋ ಹಂಚಿಕೊಳ್ಳುವ ಮೂಲಕ ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

 
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News