T20 World Cup: ದಾಂಪತ್ಯದಲ್ಲಿ ಬಿರುಕು ವಿಚ್ಛೇದನ ವರದಿಗಳ ನಡುವೆ ನ್ಯೂಯಾರ್ಕ್ ತಲುಪಿದ ಹಾರ್ದಿಕ್ ಪಾಂಡ್ಯ

T20 World Cup: ದಾಂಪತ್ಯದಲ್ಲಿ ಬಿರುಕು ವಿಚ್ಛೇದನ ವರದಿಗಳ ನಡುವೆ  ಹಾರ್ದಿಕ್ ಪಾಂಡ್ಯ ನ್ಯೂಯಾರ್ಕ್ ತಲುಪಿದ್ದು ಟೀಮ್ ಇಂಡಿಯಾದೊಂದಿಗೆ ಸೇರ್ಪಡೆಗೊಂಡಿದ್ದಾರೆ. 

Written by - Yashaswini V | Last Updated : May 29, 2024, 10:15 AM IST
  • ಹಾರ್ದಿಕ್ ಪಾಂಡ್ಯ ತಮ್ಮ ವೈಯಕ್ತಿಕ ಜೀವನದಿಂದಾಗಿ ಒತ್ತಡದಲ್ಲಿದ್ದಾರೆ.
  • ಹಾರ್ದಿಕ್ ಪಾಂಡ್ಯ ಅವರ ಪತ್ನಿ ನತಾಶಾ ಸ್ಟಾಂಕೋವಿಕ್‌ನಿಂದ ವಿಚ್ಛೇದನ ಪಡೆಯುವ ಬಗೆಗಿನ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸದ್ದು ಮಾಡುತ್ತಿದೆ.
T20 World Cup: ದಾಂಪತ್ಯದಲ್ಲಿ ಬಿರುಕು ವಿಚ್ಛೇದನ ವರದಿಗಳ ನಡುವೆ  ನ್ಯೂಯಾರ್ಕ್ ತಲುಪಿದ ಹಾರ್ದಿಕ್ ಪಾಂಡ್ಯ title=
Image Credit_ ANI

T20 Worldcup Hardik Pandya: ವೈಯಕ್ತಿಕ ಬದುಕಿನ ಜಂಜಾಟಗಳ ಸುದ್ದಿಯ ನಡುವೆ ಟೀಂ  ಇಂಡಿಯಾದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ (Team India star all rounder Hardik Pandya) ಬುಧವಾರ (ಮೇ 29) ನ್ಯೂಯಾರ್ಕ್ ತಲುಪಿದ್ದು, ಭಾರತ ತಂಡವನ್ನು ಸೇರ್ಪಡೆಗೊಂಡಿದ್ದಾರೆ. ಟಿ20 ವಿಶ್ವಕಪ್ (T20 World Cup 2024) ಆರಂಭಕ್ಕೂ ಮುನ್ನ ಟೀಂ ಇಂಡಿಯಾ ಇಲ್ಲಿ ಅಭ್ಯಾಸ ಪಂದ್ಯವನ್ನು ಆಡಬೇಕಿದೆ. 

ಭಾರತೀಯ ಕ್ರಿಕೆಟ್ ತಂಡದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ (All-rounder Hardik Pandya) ಅವರು ತಮ್ಮ ಪತ್ನಿ ನತಾಸಾ ಸ್ಟಾಂಕೋವಿಕ್ ಅವರೊಂದಿಗೆ ವಿಚ್ಛೇದನದ ಕುರಿತು ಹಲವು ವದಂತಿಗಳೊಂದಿಗೆ ಇತ್ತೀಚೆಗೆ ಸುದ್ದಿಯಲ್ಲಿದ್ದರು. ಇದಲ್ಲದೆ,  2024 ರ ಟಿ 20 ವಿಶ್ವಕಪ್‌ಗೆ ಮುಂಚಿತವಾಗಿ ನ್ಯೂಯಾರ್ಕ್‌ಗೆ ಹಾರಿದ ಭಾರತೀಯ ಕ್ರಿಕೆಟ್ ತಂಡದ ಮೊದಲ ಬ್ಯಾಚ್‌ನಲ್ಲಿ ಹಾರ್ದಿಕ್ ಪಾಂಡ್ಯ ಇಲ್ಲದಿದ್ದನ್ನು ಕಂಡ ಅಭಿಮಾನಿಗಳು ಈ ಪಂದ್ಯಗಳಲ್ಲಿ ಅವರು ಆಡುತ್ತಾರೋ ಇಲ್ಲವೋ ಎಂಬ ಬಗ್ಗೆ ಅನುಮಾನಗಳನ್ನು ಕೂಡ ವ್ಯಕ್ತಪಡಿಸಿದ್ದರು. 

ಇದನ್ನೂ ಓದಿ- ಟೀಮ್ ಇಂಡಿಯಾದ ಮುಖ್ಯ ಕೋಚ್ ಹುದ್ದೆಗೆ ಗೌತಮ್ ಗಂಭೀರ್ ಪ್ರಬಲ ಸ್ಪರ್ಧಿ! ಯಾಕ್ ಗೊತ್ತಾ?

ವಾಸ್ತವವಾಗಿ, ದಾಂಪತ್ಯದಲ್ಲಿ ಬಿರುಕು,  ಪತ್ನಿ ನತಾಸಾ ಸ್ಟಾಂಕೋವಿಕ್ (Natasa Stankovic) ಅವರೊಂದಿಗೆ ವಿಚ್ಛೇದನ ವರದಿಗಳ ನಡುವೆ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ (ಎಂಐ) ಅಭಿಯಾನದ ನಂತರ ವಿರಾಮದಲ್ಲಿದ್ದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಇದೀಗ ಟಿ20 ವಿಶ್ವಕಪ್ ಪಂದ್ಯಕ್ಕಾಗಿ ನ್ಯೂಯಾರ್ಕ್ ತಲುಪಿದ್ದು ತಂಡದೊಂದಿಗೆ ತರಬೇತಿಯನ್ನು ಕೂಡ ಆರಂಭಿಸಿದ್ದಾರೆ. ಇದು ಅವರ ಅಭಿಮಾನಿಗಳಲ್ಲಿ ಹರ್ಷ ಮೂಡಿಸಿದೆ. 

ಇನ್ನೂ ಈ ಸಂಬಂಧ ಹಾರ್ದಿಕ್ ಪಾಂಡ್ಯ (Hardik Pandya) ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ನಲ್ಲಿ ತಮ್ಮ ಕೆಲವು ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಪಾಂಡ್ಯ ತಮ್ಮ ಸಹ ಆಟಗಾರಒಂದಿಗೆ ತರಬೇತಿ ಪಡೆಯುತ್ತಿರುವುದನ್ನು ಕಾಣಬಹುದಾಗಿದೆ.

ಇದನ್ನೂ ಓದಿ- T20 World Cup 2024: ಇಲ್ಲಿದೆ ನೋಡಿ ಟೀಂ ಇಂಡಿಯಾದ ವೇಳಾಪಟ್ಟಿ, ಆಟಗಾರರ ಸಂಪೂರ್ಣ ಮಾಹಿತಿ

ಈ ಬಾರಿಗೆ ಟಿ20 ವಿಶ್ವಕಪ್‌ನಲ್ಲಿ ಹಾರ್ದಿಕ್ ಪಾಂಡ್ಯ ಅವರನ್ನು ಟೀಂ ಇಂಡಿಯಾದ ಉಪನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News