Home Remedies For Uric Acid : ದೇಹದಲ್ಲಿ ಯೂರಿಕ್ ಆಸಿಡ್ ಹೆಚ್ಚಾದರೆ, ಅನೇಕ ಸಮಸ್ಯೆಗಳನ್ನು ಉಂಟುಮಾಡುತ್ತದೆ.ಯೂರಿಕ್ ಆಸಿಡ್ ದೇಹದಲ್ಲಿ ಹೆಚ್ಚಾದಾಗ ಅದು ದೇಹದ ಕೀಲುಗಳಲ್ಲಿ ರೂಪುಗೊಳ್ಳಲು ಪ್ರಾರಂಭಿಸುತ್ತದೆ.ಇದು ಗೆಡ್ಡೆಯಂತೆ ಕಾಣಿಸುತ್ತದೆ.ಇದರಿಂದಾಗಿ ಕೀಲುಗಳಲ್ಲಿ ಅಸಹನೀಯ ನೋವು ಇರುತ್ತದೆ. ಈ ಸ್ಥಿತಿಯಲ್ಲೂ ಎಚ್ಚರಿಕೆ ವಹಿಸಿದರೆ ಗಂಭೀರ ಆರೋಗ್ಯ ಸಮಸ್ಯೆಗಳೂ ಬರಬಹುದು.
ಯೂರಿಕ್ ಆಸಿಡ್ ಮಟ್ಟವನ್ನು ನಿಯಂತ್ರಣದಲ್ಲಿಡಲು ಸುಲಭವಾದ ಮಾರ್ಗವೆಂದರೆ ಪ್ಯೂರಿನ್-ಭರಿತ ಆಹಾರಗಳ ಸೇವನೆಯನ್ನು ಕಡಿಮೆ ಮಾಡುವುದು.ಅಂದರೆ ಆಹಾರದಲ್ಲಿ ಬೇಳೆಕಾಳುಗಳು,ಕಿಡ್ನಿ ಬೀನ್ಸ್, ಆಲ್ಕೋಹಾಲ್ ಮತ್ತು ಸಕ್ಕರೆ ಪದಾರ್ಥಗಳ ಪ್ರಮಾಣವನ್ನು ಕಡಿಮೆ ಮಾಡುವುದು ಅಥವಾ ನಿಲ್ಲಿಸುವುದು.ಈ ವಸ್ತುಗಳ ಬದಲಿಗೆ, ಆಹಾರದಲ್ಲಿ ಹಣ್ಣುಗಳು, ತರಕಾರಿಗಳು ಮತ್ತು ಧಾನ್ಯಗಳನ್ನು ಸೇರಿಸಿಕೊಳ್ಳಬಹುದು. ಈ ಬದಲಾವಣೆಯೊಂದಿಗೆ,ಆಯುರ್ವೇದ ಔಷಧದ ಸಹಾಯದಿಂದ ಯೂರಿಕ್ ಆಸಿಡ್ ಅನ್ನು ಸಂಪೂರ್ಣವಾಗಿ ನಿಯಂತ್ರಿಸಬಹುದು.
ಇದನ್ನೂ ಓದಿ: ನಿಮಗೂ ರಾತ್ರಿ ವೇಳೆ ಹೀಗಾಗುತ್ತಿದ್ದರೆ ಬ್ಲಡ್ ಪ್ರೆಶರ್ ನಲ್ಲಿ ಏರುಪೇರಾಗಿರುವುದು ಖಂಡಿತಾ !ಸರಿಯಾಗಿ ಗಮನಿಸಿ
ಆಯುರ್ವೇದ ಔಷಧ ಪದ್ಧತಿಯ ಪ್ರಕಾರ ದೇಹದಲ್ಲಿ ಮೂರು ದೋಷಗಳಿರುತ್ತವೆ. ಅವುಗಳೆಂದರೆ ವಾತ, ಪಿತ್ತ ಮತ್ತು ಕಫ.ಈ ದೋಷದ ಆಧಾರದ ಮೇಲೆ ಮಾತ್ರವಲ್ಲ ನಿವಾರಿಸಲೂಬಹುದು. ಆಯುರ್ವೇದ ವೈದ್ಯಕೀಯ ಪದ್ಧತಿಯ ಪ್ರಕಾರ, ಹೈ ಯೂರಿಕ್ ಆಸಿಡ್ ಅನ್ನು ರಕ್ತ ದೋಷ ಎಂದು ಕರೆಯಲಾಗುತ್ತದೆ. ಅದನ್ನು ನಿಯಂತ್ರಿಸಲು ತ್ರಿಫಲಾ ಅತ್ಯುತ್ತಮ ಪರಿಹಾರ.
ಮೂರು ಭಾರತೀಯ ಗಿಡಮೂಲಿಕೆಗಳ ಸಂಯೋಜನೆ ತ್ರಿಫಲ :
ತ್ರಿಫಲ ಎಂದರೆ ಅಳಲೆಕಾಯಿ, ಬಹೇದಾ ಅಥವಾ ಶಾಂತಿ ಮರದ ಕಾಯಿ ಮತ್ತು ನೆಲ್ಲಿಕಾಯಿ. ಈ ಮೂರು ಶಕ್ತಿಶಾಲಿ ಗಿಡಮೂಲಿಕೆಗಳು ಒಟ್ಟಾದಾಗ ಅದರ ಪ್ರಯೋಜನಗಳು ಕೂಡಾ ಮೂರು ಪಟ್ಟು ಹೆಚ್ಚಾಗುತ್ತದೆ.ತ್ರಿಫಲವನ್ನು ವಿವಿಧ ರೋಗಗಳ ಚಿಕಿತ್ಸೆಯಲ್ಲಿ ಅನೇಕ ವರ್ಷಗಳಿಂದ ಬಳಸಲಾಗುತ್ತಿದೆ.ತ್ರಿಫಲಾ ಯೂರಿಕ್ ಆಸಿಡ್ ಅನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.ತ್ರಿಫಲ ಸೇವನೆಯು ದೇಹದಲ್ಲಿನ ಎಲ್ಲಾ ಮೂರು ದೋಷಗಳನ್ನು ಸಮತೋಲನಗೊಳಿಸುತ್ತದೆ.
ಇದನ್ನೂ ಓದಿ : ನಿಂಬೆ ರಸವನ್ನು ಈ ರೀತಿ ಸೇವಿಸಿದರೆ ಸಾಕು.. ತಕ್ಷಣವೇ ಕಂಟ್ರೋಲ್ಗೆ ಬರುತ್ತೆ ಬ್ಲಡ್ ಶುಗರ್ !
ತ್ರಿಫಲದ ಪ್ರಯೋಜನಗಳು :
-ತ್ರಿಫಲ ದೇಹದ ಉರಿಯೂತವನ್ನು ನಿವಾರಿಸುತ್ತದೆ.ಯೂರಿಕ್ ಆಸಿಡ್ ಕಾರಣದಿಂದ ಕೀಲುಗಳಲ್ಲಿ ಕಾಣಿಸಿಕೊಂಡಿರುವ ಉರಿಯೂತವನ್ನು ತ್ವರಿತವಾಗಿ ನಿವಾರಿಸುತ್ತದೆ.
- ದೇಹದಲ್ಲಿ ಯೂರಿಕ್ ಆಸಿಡ್ ಮಟ್ ಹೆಚ್ಚಾದಾಗ,ಅನೇಕ ಸಮಸ್ಯೆಗಳು ಸಹ ಹೆಚ್ಚಾಗಲು ಪ್ರಾರಂಭಿಸುತ್ತವೆ. ಅವುಗಳಲ್ಲಿ ಒಂದು ಮೂತ್ರಪಿಂಡದ ಕಲ್ಲುಗಳು. ಯೂರಿಕ್ ಆಸಿಡ್ ನಿರಂತರವಾಗಿ ಅಧಿಕವಾಗಿದ್ದರೆ, ಕಲ್ಲುಗಳ ರಚನೆಯ ಸಾಧ್ಯತೆಗಳು ಹೆಚ್ಚಾಗುತ್ತವೆ. ಈ ಹೊತ್ತಿನಲ್ಲಿ ತ್ರಿಫಲ ಸೇವಿಸಿದರೆ, ಈ ಸಮಸ್ಯೆಯಿಂದ ಮುಕ್ತರಾಗಬಹುದು.
-ತ್ರಿಫಲ ಸೇವನೆಯಿಂದ ರಕ್ತದಲ್ಲಿನ ಸಕ್ಕರೆ ಮಟ್ಟವೂ ನಿಯಂತ್ರಣದಲ್ಲಿರುತ್ತದೆ. ಯೂರಿಕ್ ಆಸಿಡ್ ಮಟ್ಟವನ್ನು ನಿಯಂತ್ರಿಸುವುದರ ಜೊತೆಗೆ, ತ್ರಿಫಲಾ ರಕ್ತದಲ್ಲಿನ ಸಕ್ಕರೆಯನ್ನು ಕೂಡಾ ನಿಯಂತ್ರಿಸುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.