Viral Video: ಕಪಾಳಮೋಕ್ಷ ಮಾಡಿದ YSR ಕಾಂಗ್ರೆಸ್ ಶಾಸಕನಿಗೆ ತಿರುಗಿ ಬಾರಿಸಿದ ಮತದಾರ..!

ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಮತಗಟ್ಟೆಯಲ್ಲಿ ಸೋಮವಾರ ಬೆಳಗ್ಗೆ ಈ ಘಟನೆ ನಡೆದಿದೆ. ಸರದಿ ಸಾಲು ತಪ್ಪಿಸಿಕೊಂಡು ಬಂದ ಶಾಸಕನ ವರ್ತನೆಗೆ ಮತದಾರನೊಬ್ಬ ಆಕ್ಷೇಪ ವ್ಯಕ್ತಪಡಿಸಿದ್ದ. ಇದರಿಂದ ಕುಪಿತಗೊಂಡ ಶಾಸಕ ಆ ಮತದಾರನ ಕೆನ್ನೆಗೆ ಬಾರಿಸಿದ್ದಾನೆ. ಕೂಡಲೇ ಮತದಾರನೂ ಶಾಸಕನಿಗೆ ತಿರುಗಿ ಬಾರಿಸಿದ್ದಾನೆ. 

Written by - Puttaraj K Alur | Last Updated : May 13, 2024, 04:25 PM IST
  • ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ಮತಗಟ್ಟೆಯಲ್ಲಿ ಕಿರಿಕ್‌
  • ಕಪಾಳಮೋಕ್ಷ ಮಾಡಿದ ಕಾಂಗ್ರೆಸ್ ಶಾಸಕನಿಗೆ ತಿರುಗಿ ಬಾರಿಸಿದ ಮತದಾರ
  • ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿರುವ ವಿಡಿಯೋ
Viral Video: ಕಪಾಳಮೋಕ್ಷ ಮಾಡಿದ YSR ಕಾಂಗ್ರೆಸ್ ಶಾಸಕನಿಗೆ ತಿರುಗಿ ಬಾರಿಸಿದ ಮತದಾರ..! title=
ಶಾಸಕನಿಗೆ ತಿರುಗಿ ಬಾರಿಸಿದ ಮತದಾರ!

Andhra Pradesh Assembly Election 2024: ಆಂಧ್ರ ಪ್ರದೇಶದ ಮತಗಟ್ಟೆಯೊಂದರಲ್ಲಿ ಕಿರಿಕ್ ಆಗಿದ್ದು, ಕಪಾಳಮೋಕ್ಷ ಮಾಡಿದ ಕಾಂಗ್ರೆಸ್ ಶಾಸಕನಿಗೆ ಮತದಾರನೊಬ್ಬ ತಿರುಗಿ ಬಾರಿಸಿರುವ ಘಟನೆ ನಡೆದಿದೆ. ಈ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ‌

ಹೌದು, ಮತಗಟ್ಟೆಯಲ್ಲಿ VIP ಸಂಸ್ಕೃತಿ ಪ್ರದರ್ಶಿಸಲು ಮುಂದಾದ ತೆನಾಲಿ ಕ್ಷೇತ್ರದ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಶಾಸಕ ಎ.ಶಿವಕುಮಾರ್ ಮತ್ತು ಮತದಾರನೊಬ್ಬ ಕಿತ್ತಾಡಿರುವ ಘಟನೆ ನಡೆದಿದೆ. ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಮತಗಟ್ಟೆಯಲ್ಲಿ ಸೋಮವಾರ ಬೆಳಗ್ಗೆ ಈ ಘಟನೆ ನಡೆದಿದೆ. ಸರದಿ ಸಾಲು ತಪ್ಪಿಸಿಕೊಂಡು ಬಂದ ಶಾಸಕನ ವರ್ತನೆಗೆ ಮತದಾರನೊಬ್ಬ ಆಕ್ಷೇಪ ವ್ಯಕ್ತಪಡಿಸಿದ್ದ. ಇದರಿಂದ ಕುಪಿತಗೊಂಡ ಶಾಸಕ ಆ ಮತದಾರನ ಕೆನ್ನೆಗೆ ಬಾರಿಸಿದ್ದಾನೆ. ಕೂಡಲೇ ಮತದಾರನೂ ಶಾಸಕನಿಗೆ ತಿರುಗಿ ಬಾರಿಸಿದ್ದಾನೆ. 

ಇದನ್ನೂ ಓದಿ: ದೆಹಲಿಯ ಎರಡು ಸರ್ಕಾರಿ ಆಸ್ಪತ್ರೆಗಳಿಗೆ ಬಾಂಬ್ ಬೆದರಿಕೆಯ ಮೇಲ್

ಕೂಡಲೇ ಶಾಸಕನ ಬೆಂಬಲಿಗರು ಮತದಾರನ ಮೇಲೆ ಮುಗಿಬಿದ್ದು ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಸರದಿ ಸಾಲಿನಲ್ಲಿ ನಿಂತಿದ್ದ ಕೆಲವು ಮತದಾರರು ಹಲ್ಲೆ ತಡೆಯಲು ಪ್ರಯತ್ನಿಸಿದ್ದಾರೆ. ಆದರೆ MLA ಬೆಂಬಲಿಗರು ಆತನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ. ೧೦ ಸೆಕೆಂಡ್‌ಗಳಿರುವ ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದ್ದು, ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಮತಗಟ್ಟೆಯಲ್ಲಿ ಶಾಸಕ ಶಿವಕುಮಾರ್‌ ಮತ್ತು ಆತನ ಬೆಂಬಲಿಗರು ತೋರಿದ ದುಂಡಾವರ್ತನೆಗೆ ನೆಟಿಜನ್ಸ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಮತದಾರನನ್ನು ರಕ್ಷಿಸಲು ಯಾವುದೇ ಭದ್ರತಾ ಸಿಬ್ಬಂದಿ ಬರದಿರುವುದು ಹಾಗೂ ಮತದಾರನ ಮೇಲೆ ಕೈಮಾಡಿದ ಶಾಸಕ ಮತ್ತು ಆತನ ಬೆಂಬಲಿಗರ ದುರ್ವರ್ತನೆ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಹಾಲಿ ಅಭ್ಯರ್ಥಿಯೂ ಆಗಿರುವ ಅನ್ನಬಾತುನಿ ಶಿವಕುಮಾರ್, ಸರತಿಯಲ್ಲಿ ನಿಲ್ಲದೆ ನೇರವಾಗಿ ಮತಗಟ್ಟೆಯೊಳಗೆ ಹೋಗಿ ವೋಟಿಂಗ್‌ ಮಾಡಲು ಪ್ರಯತ್ನಿಸಿದ್ದರಂತೆ. ಇದನ್ನು ಆ ಮತದಾರ ಪ್ರಶ್ನಿಸಿದ್ದ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Loksabha Election 4 Phase : ಇಂದು 10 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶ ಸೇರಿದಂತೆ 96 ಕ್ಷೇತ್ರಗಳಲ್ಲಿ ಮತದಾನ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News