Actress Manjula Son: 80 – 90ರ ದಶಕದ ಸಿನಿಮಾಗಳನ್ನು ನಾವು ನೆನಪಿಸಿಕೊಂಡರೇ ಸಾಕಷ್ಟು ಸಾಲು ಸಾಲು ಸಿನಿಮಾಗಳು ಕಣ್ಣಮುಂದೆ ಬರುತ್ತವೆ.. ಅವುಗಳಲ್ಲಿ ನಟಿಸಿದ ನಟ-ನಟಿಯರೂ ಸಿನಿರಪ್ರೇಕ್ಷಕರ ಮನಸ್ಸಲ್ಲಿ ಅಚ್ಚಳಿಯದೇ ಉಳಿದಿದ್ದಾರೆ..
ತಮ್ಮ ಅದ್ಭುತ ನಟನೆಯಿಂದಲೇ ಎಲ್ಲರ ಗಮನ ಸೆಳೆದ ನಟಿಯರಲ್ಲಿ ಮಂಜುಳಾ ಕೂಡ ಒಬ್ಬರು.. ಅಂದಿನ ಕಾಲದಲ್ಲಿ ನಟಿಸಿ ಇಂದಿಗೂ ಎವರ್ಗ್ರೀನ್ ಎನಿಸಿಕೊಂಡಿದ್ದಾರೆ.. ಸಾಲು ಸಾಲು ಹಿಟ್ ಸಿನಿಮಾಗಳಲ್ಲಿ ನಟಿಸಿ ಅದ್ಭುತ ಅಭಿನೇತ್ರಿ ಎನಿಸಿಕೊಂಡ ಮಹಾನ್ ಕಲಾವಿದೆ ನಟಿ ಮಂಜುಳಾ ಎಂದರೇ ತಪ್ಪಾಗುವುದಿಲ್ಲ..
ನಟಿ ಮಂಜುಳಾ ಮಾಡದೇ ಇರುವ ಪಾತ್ರಗಳೇ ಇಲ್ಲ.. ಪ್ರತಿಯೊಂದು ಪಾತ್ರಕ್ಕೂ ತಮ್ಮದೇ ಆದ ವಿಭಿನ್ನ ಶೈಲಿಯಲ್ಲಿ ನಟಿಸಿದ ಇವರ ಸಿನಿಮಾಗಳು ಇಂದಿಗೂ ತೆರೆಕಂಡರೇ 100 ದಿನ ಓಡೋದ್ರಲ್ಲಿ ಯಾವುದೇ ಆಶ್ವರ್ಯವಿಲ್ಲ..
ಅದ್ಭುತ ಕಲಾವಿದೆ ಮಂಜುಳಾ ಅವರು ಇಂದು ನಮ್ಮೊಂದಿಗೆ ಇಲ್ಲದೇ ಇದ್ದರೂ ಅವರ ನೆನಪೂ ಮಾತ್ರ ಶಾಶ್ವತವಾಗಿ ಅಚ್ಚಳಿಯದೆ ಉಳಿದಿದೆ.. ಇವರ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಇಂದಿಗೂ ಜನರಲ್ಲಿದೆ.. ಹಾಗಾದ್ರೆ ಈ ನಟಿಗೆ ಇರುವ ಒಬ್ಬನೇ ಮಗ ಎಲ್ಲಿದ್ದಾರೆ? ಹೇಗಿದ್ದಾರೆ ಗೊತ್ತಾ?
ದಿವಂಗತ ನಟಿ ಮಂಜುಳಾ ಅವರ ಮಗನ ಹಸೆರು ಅಭಿಷೇಕ್.. ಇವರು ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಬೆಂಗಳೂರಿನ ನಿವಾಸಿಯಾಗಿದ್ದಾರೆ.. ಇವರು ಸಂದರ್ಶನಗಳಲ್ಲಿಯೂ ಭಾಗವಹಿಸಿದ್ದು ತಮ್ಮ ಅಮ್ಮ ನಟಿಸಿದ ಎರಡು ಕನಸು ಸಿನಿಮಾ ತುಂಬಾ ಇಷ್ಟ ಎಂದು ಹೇಳಿಕೊಂಡಿದ್ದರು..
ಮಂಜುಳಾ ಪುತ್ರ ಅಭಿಷೇಕ್ ಅವರಿಗೂ ಸಿನಿಮಾ ರಂಗಕ್ಕೆ ಬರುವ ಆಸಕ್ತಿ ಇದ್ದು ಮುಂದೆ ಅವಕಾಶ ಸಿಕ್ಕರೆ ತಮ್ಮ ಮಗನನ್ನು ಸಿನಿಮಾ ಮಾಡಲು ಕಳುಹಿಸುತ್ತೇನೆ ಎಂದಿದ್ದಾರೆ..