iVooMi Energy Electric Scooter In Affordable Price: ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ತಯಾರಿಕೆಯಲ್ಲಿ ಪ್ರಮುಖ ಆವಿಷ್ಕಾರಕವಾಗಿ ಹೊರಹೊಮ್ಮಿರುವ iVooMi ಎನರ್ಜಿ Jeetx Z Eಹೆಸರಿನಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಹಲವು ಆಧುನಿಕ ವೈಶಿಷ್ಟ್ಯಗಳೊಂದಿಗೆ ಲಭ್ಯವಿರುವ ಈ ಸ್ಕೂಟರ್ ಜನಸಾಮಾನ್ಯರಿಗೆ ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗಲಿದೆ ಎಂದು ಕಂಪನಿ ಹೇಳಿಕೊಂಡಿದೆ.
ಕಂಪನಿ ನೀಡಿರುವ ಮಾಹಿತಿಯ ಪ್ರಕಾರ, ಒಂದೂವರೆ ವರ್ಷಗಳ ವ್ಯಾಪಕ ಸಂಶೋಧನೆ ಮತ್ತು ಅಭಿವೃದ್ಧಿಯ ನಂತರ iVooMi ಎನರ್ಜಿ ಎಲೆಕ್ಟ್ರಿಕ್ ಸ್ಕೂಟರ್ Jeetx ZE (iVooMi Energy Electric Scooter Jeetx ZE) ಅನ್ನು ಬಿಡುಗಡೆ ಮಾಡಲಾಗಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ JeetX ನ ಮುಂದಿನ ಪೀಳಿಗೆಯ ಸ್ಕೂಟರ್ ಎನ್ನಲಾಗಿದೆ.
iVooMi ಎನರ್ಜಿ ಎಲೆಕ್ಟ್ರಿಕ್ ಸ್ಕೂಟರ್ Jeetx ZE ಬೆಲೆ:
iVooMi ಎನರ್ಜಿ Jeetx ZE ಎಲೆಕ್ಟ್ರಿಕ್ ಸ್ಕೂಟರ್ (Electric Scooter) ಎಕ್ಸ್ ಶೋ ರೂಂ ಬೆಲೆ 79999 ರೂ. ಎಂದು ಕಂಪನಿ ತಿಳಿಸಿದೆ.
ಇದನ್ನೂ ಓದಿ- ATM Card Trap Scam: ಏನಿದು ಎಟಿಎಂ ಕಾರ್ಡ್ ಟ್ರ್ಯಾಪ್ ಸ್ಕ್ಯಾಮ್? ಈ ಬಗ್ಗೆ ಇರಲಿ ಎಚ್ಚರ
iVooMi ಎನರ್ಜಿ Jeetx ZE ಎಲೆಕ್ಟ್ರಿಕ್ ಸ್ಕೂಟರ್ 3 ಬ್ಯಾಟರಿ ರೂಪಾಂತರಗಳಲ್ಲಿ ಲಭ್ಯವಿದ್ದು, ಇದರಲ್ಲಿ ಗ್ರಾಹಕರು 2.1 kwh, 2.5 kwh ಮತ್ತು 3 kwh ಬ್ಯಾಟರಿ ಪ್ಯಾಕ್ ಅನ್ನು ಪಡೆಯುತ್ತಾರೆ.
8 ಪ್ರೀಮಿಯಂ ಆಯ್ಕೆಗಳಲ್ಲಿ ಲಭ್ಯ:
iVooMi ಎನರ್ಜಿ Jeetx ZE ಎಲೆಕ್ಟ್ರಿಕ್ ಸ್ಕೂಟರ್ ಬೂದು, ಕೆಂಪು, ಹಸಿರು, ಗುಲಾಬಿ, ಪ್ರೀಮಿಯಂ ಚಿನ್ನ, ನೀಲಿ, ಬೆಳ್ಳಿ ಮತ್ತು ಕಂದು ಈ ರೀತಿ 8 ಪ್ರೀಮಿಯಂ ಬಣ್ಣಗಳಲ್ಲಿ ಲಭ್ಯವಿದೆ.
ಇದನ್ನೂ ಓದಿ- ಫೋನ್ ಮಾತುಕತೆಯನ್ನು ಇನ್ನೂ ಮಜವಾಗಿಸಲು ಗೂಗಲ್ ಪರಿಚಯಿಸಿದೆ ಆಡಿಯೋ ಎಮೋಜಿ!
iVooMi ಎನರ್ಜಿ Jeetx ZE ಎಲೆಕ್ಟ್ರಿಕ್ ಸ್ಕೂಟರ್ನ ವೈಶಿಷ್ಟ್ಯ:
* ಈ ಎಲೆಕ್ಟ್ರಿಕ್ ಸ್ಕೂಟರ್ 1350 ಎಂಎಂ, 760 ಎಂಎಂ ಉದ್ದ ಮತ್ತು 770 ಎಂಎಂ ಎತ್ತರದ ಸೀಟ್ ಅನ್ನು ಹೊಂದಿದೆ.
* ಈ ಸ್ಕೂಟರ್ನಲ್ಲಿ ಕಂಪನಿಯು ವಿಸ್ತರಿಸಿದ ಲೆಗ್ರೂಮ್ ಮತ್ತು ಬೂಟ್ ಸ್ಪೇಸ್ ಅನ್ನು ಸಹ ನೀಡಿದೆ.
* ಈ ಸ್ಕೂಟರ್ನಲ್ಲಿ ಟರ್ನ್ ಬೈ ಟರ್ನ್ ನ್ಯಾವಿಗೇಷನ್ ಲಭ್ಯವಿದೆ.
* ಈ ಸ್ಕೂಟರ್ನ ಬ್ಯಾಟರಿ ಪ್ಯಾಕ್ 7 kw ಗರಿಷ್ಠ ಶಕ್ತಿಯನ್ನು ಉತ್ಪಾದಿಸುತ್ತದೆ.
* ಇದಲ್ಲದೆ, ಸ್ಕೂಟರ್ 2.4 ಪಟ್ಟು ಉತ್ತಮ ಕೂಲಿಂಗ್ ಮತ್ತು ಸುಧಾರಿತ ಸ್ಥಳವನ್ನು ಪಡೆಯುತ್ತದೆ.
iVooMi ಎನರ್ಜಿ Jeetx ZE ಎಲೆಕ್ಟ್ರಿಕ್ ಸ್ಕೂಟರ್ನಲ್ಲಿ ಭರಪೂರ ಕೊಡುಗೆ:
iVooMi ಎನರ್ಜಿ Jeetx ZE ಎಲೆಕ್ಟ್ರಿಕ್ ಸ್ಕೂಟರ್ನಲ್ಲಿ ಕಂಪನಿಯು ಭರಪೂರ ಕೊಡುಗೆಗಳನ್ನು ಸಹ ನೀಡುತ್ತದೆ. ಸ್ಕೂಟರ್ನ ಚಾಸಿಸ್, ಬ್ಯಾಟರಿ ಮತ್ತು ಬಣ್ಣದ ಮೇಲೆ 5 ವರ್ಷಗಳ ವಾರಂಟಿ ಲಭ್ಯವಿದೆ. ಇದಲ್ಲದೇ ಬ್ಯಾಟರಿಯಲ್ಲಿ IP67 ಅಳವಡಿಸಲಾಗಿದ್ದು, ಮಳೆಯಲ್ಲಿ ಒದ್ದೆಯಾದರೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಕಂಪನಿ ಹೇಳಿಕೊಂಡಿದೆ. ಅಷ್ಟೇ ಅಲ್ಲದೇ, ಈ ಕಂಪನಿಯು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಸ್ಕೂಟರ್ನ ಯಾವುದೇ ಭಾಗವನ್ನು ಒಂದು ಬಾರಿ ಬದಲಾಯಿಸುವ ಸೌಲಭ್ಯವನ್ನು ಸಹ ಗ್ರಾಹಕರಿಗೆ ಒದಗಿಸುತ್ತಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.