Kavya Maran father: ಕಾವ್ಯಾ ಮಾರನ್ ಇಂಡಿಯನ್ ಪ್ರೀಮಿಯರ್ ಲೀಗ್‌ನ ಅತ್ಯಂತ ಪ್ರಸಿದ್ಧ ಮುಖಗಳಲ್ಲಿ ಒಬ್ಬರು. ಅವರು 2018 ರಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ನ ಮಾಲೀಕರಾದರು.. ಅವರು ಮಾಧ್ಯಮ ಉದ್ಯಮಿ, ಸನ್ ಗ್ರೂಪ್ ಸಂಸ್ಥಾಪಕ, ಕಲಾನಿತಿ ಮಾರನ್ ಮತ್ತು ಕಾವೇರಿ ಮಾರನ್ ಅವರ ಪುತ್ರಿ.
ಆಗಸ್ಟ್ 6, 1992 ರಂದು ಚೆನ್ನೈನಲ್ಲಿ ಜನಿಸಿದ ಕಾವ್ಯಾ ಮಾರನ್ ಸನ್ ಟಿವಿ ನೆಟ್‌ವರ್ಕ್‌ನಲ್ಲಿಯೂ ಸಕ್ರಿಯರಾಗಿದ್ದಾರೆ. ಇವರು ಚೆನ್ನೈನ ಸ್ಟೆಲ್ಲಾ ಮೋರಿಸ್ ಕಾಲೇಜಿನಲ್ಲಿ ಪದವಿ ಪಡೆದರು. ನಂತರ ಅವರು ಯುಕೆಯ ವಾರ್ವಿಕ್ ಬ್ಯುಸಿನೆಸ್ ಸ್ಕೂಲ್‌ನಿಂದ ಎಂಬಿಎ ಮಾಡಿದರು. ಕಾವ್ಯಾ ರಾಜಕಾರಣಿ ದಯಾನಿಧಿ ಮಾರನ್ ಅವರ ಸೊಸೆ. ಅವರು ತಮಿಳುನಾಡು ಮಾಜಿ ಸಿಎಂ ಎಂ ಕರುಣಾನಿಧಿ ಅವರ ಸಂಬಂಧಿ ಕೂಡ.
ಇದನ್ನೂ ಓದಿ-RCB vs GT: ಈ ಸಲ ಕಪ್ ನಮ್ದಾ? RCB ಪಾಲಿಗೆ ಇಂದು ನಿರ್ಣಾಯಕ ಪಂದ್ಯ! ಬೆಂಗಳೂರು ತಂಡದ ಪ್ಲೇಆಫ್ ಕನಸು ನನಸಾಗುತ್ತಾ?
ಕಾವ್ಯಾ ಅವರ ತಂದೆ ಕಲಾನಿತಿ ಮಾರನ್ ಇವರು ಮಾಜಿ ಕೇಂದ್ರ ಸಚಿವ ಮುರಸೋಲಿ ಮಾರನ್ ಅವರ ಪುತ್ರ. ಇವರು ತಮಿಳುನಾಡು ಮಾಜಿ ಸಿಎಂ ಎಂ ಕರುಣಾನಿಧಿ ಅವರ ಮೊಮ್ಮಗ. ಅವರು ಚೆನ್ನೈನ ಲೊಯೊಲಾ ಕಾಲೇಜಿನಲ್ಲಿ ವಾಣಿಜ್ಯ ಪದವಿ ಪಡೆದರು ಮತ್ತು ಸ್ಕ್ರ್ಯಾಂಟನ್ ವಿಶ್ವವಿದ್ಯಾಲಯದಲ್ಲಿ ತಮ್ಮ ಎಂಬಿಎ ಮಾಡಿದರು. ಸದ್ಯ ಇವರ ಕುಟುಂಬದ ಒಟ್ಟು ಆಸ್ತಿ ಕುಟುಂಬದ ನಿವ್ವಳ ಮೌಲ್ಯ 18,800 ಕೋಟಿ ರೂ. ಇದೆ ಎಂದು ಅಂದಾಜು ಮಾಡಲಾಗಿದೆ..
ಅವರು ದೇಶದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಕಾರ್ಯನಿರ್ವಾಹಕರಲ್ಲಿ ಒಬ್ಬರು. ಕಳೆದ 10 ವರ್ಷಗಳಲ್ಲಿ ಕುಟುಂಬವು 1470 ಕೋಟಿ ರೂಪಾಯಿಗಳನ್ನು ಸಂಬಳವಾಗಿ ತೆಗೆದುಕೊಂಡಿದೆ ಎಂದು ವರದಿ ಮಾಡಲಾಗಿದೆ..
ಇದನ್ನೂ ಓದಿ-MI vs KKR: ಕೊಲ್ಕತ್ತಾದ ಮಿಚೆಲ್ ಸ್ಟಾರ್ಕ್ ದಾಳಿಗೆ ತತ್ತರಿಸಿದ ಮುಂಬೈ ಇಂಡಿಯನ್ಸ್