ನವದೆಹಲಿ: ಮಹಾರಾಷ್ಟ್ರವನ್ನು ರಾಷ್ಟ್ರಪತಿ ಆಡಳಿತಕ್ಕೆ ಒಳಪಡಿಸಬೇಕು ಎಂದು ಕೇಂದ್ರ ಸಚಿವ ಸಂಪುಟ ಶಿಫಾರಸು ಮಾಡಿದೆ ಎಂದು ಮೂಲಗಳು ತಿಳಿಸಿವೆ.
ಅಕ್ಟೋಬರ್ 24 ರಂದು ಚುನಾವಣಾ ಫಲಿತಾಂಶದ 20 ದಿನಗಳ ನಂತರ ರಾಜ್ಯದಲ್ಲಿ ಸರ್ಕಾರ ರಚನೆಯ ಬಗ್ಗೆ ಅನಿಶ್ಚಿತತೆ ಇರುವ ಹಿನ್ನಲೆಯಲ್ಲಿ ಈಗ ಕೇಂದ್ರ ಸರ್ಕಾರ ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸ್ಸು ಮಾಡಿದೆ
Sources: #Maharashtra Governor Bhagat Singh Koshyari recommends President's rule in the state. pic.twitter.com/h1tpcrRhos
— ANI (@ANI) November 12, 2019
ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ಬಿಜೆಪಿ ಮತ್ತು ಶಿವಸೇನೆ ಸಾಕಷ್ಟು ಸಂಖ್ಯೆಯನ್ನು ತೋರಿಸಲು ವಿಫಲವಾದ ನಂತರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯರಿ ಶರದ್ ಪವಾರ್ ಅವರ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವನ್ನು (ಎನ್ಸಿಪಿ) ಆಹ್ವಾನಿಸಿದ್ದರು, ಇಂದು ರಾತ್ರಿ 8.30 ರೊಳಗೆ ಎನ್ಸಿಪಿ ಉತ್ತರ ನೀಡಬೇಕಾಗಿತ್ತು, ಅದಕ್ಕೂ ಮುಂಚೆಯೇ ರಾಷ್ಟ್ರಪತಿ ಆಡಳಿತ ಶಿಫಾರಸು ಮಾಡಿರುವುದು ಅನೇಕರನ್ನು ಈಗ ಆಶ್ಚರ್ಯಗೊಳಿಸಿದೆ.