Aishwarya Rai Bachan Networth: ಭಾರತದ ಚಿತ್ರರಂಗದ ಶ್ರೀಮಂತ ನಟಿಯರಲ್ಲಿ ಒಬ್ಬರಾದ ಐಶ್ವರ್ಯಾ ರೈ ಪ್ರಪಂಚದಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದು, ಈಕೆ ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಹಲವಾರು ಸೂಪರ್ ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಐಶ್ವರ್ಯಾ ರೈ ಉದ್ಯಮಕ್ಕೆ ಹೆಜ್ಜೆಹಾಕುವ ಮೊದಲು 1994 ರಲ್ಲಿ ವಿಶ್ವ ಸುಂದರಿ ಆಗಿ, ವಿಶ್ವದ ಅತ್ಯಂತ ಸುಂದರ ಮಹಿಳೆಯರಲ್ಲಿ ಒಬ್ಬರು ಎಂಬ ಪ್ರಸಿದ್ಧಿಯನ್ನು ಪಡೆದುಕೊಂಡಿದ್ದಾರೆ.
ನಟಿ ಐಶ್ವರ್ಯ ರೈ ನೀಲಿ ಕಣ್ಣುಗಳು ಮತ್ತು ಆಕರ್ಷಕ ಮುಖದೊಂದಿದೆ ಎಲ್ಲಾ ವಿಶ್ವಸುಂದರಿಯರ ಮಧ್ಯೆ ಬಹಳ ವಿಭಿನ್ನವಾಗಿ ಕಾಣಿಸುತ್ತಾರೆ. ಸೌಂದರ್ಯ, ಸಂಪತ್ತು, ಖ್ಯಾತಿ ಯಾವುದಕ್ಕೂ ಕೊರತೆಯೇ ಇಲ್ಲದ ಚೆಲುವೆ, 50ರ ಹರೆಯದಲ್ಲೂ ಯಂಗ್ ನಟಿಮಣಿಯರ ಜೊತೆಗೆ ಪೈಪೋಟಿಗೆ ನೀಡಬಲ್ಲರು. ನಟಿ ಐಶ್ವರ್ಯ ರೈ ಬಚ್ಚನ್ ಭಾರತದ ಶ್ರೀಮಂತ ನಟಿಯರಲ್ಲಿ ಒಬ್ಬಾರಿದ್ದು, ಈ ನಟಿ ಪ್ರತಿ ಸಿನಿಮಾ 12 ಕೊಟಿ ರೂಪಾಯಿಯವರೆಗೆ ಸಂಭಾವನೆ ಪಡೆಯುತ್ತಿರವರ ನಿವ್ವಳ ಮೌಲ್ಯ ರೂ 776 ಕೋಟಿಗಳು ಇದೆ ಎನ್ನಾಲಾಗಿದೆ.
ಇದೀಗ ಐಶ್ವರ್ಯ ರೈ ಬಚ್ಚನ್ ಒಟ್ಟು ಆಸ್ತಿ 800 ಕೋಟಿ ಎಂದು ಹೇಳಲಾಗುತ್ತಿದೆ. ಈ ನಟಿ ಮುಂಬೈನ ಜುಹುದಲ್ಲಿರುವ ಬಚ್ಚನ್ ಕುಟುಂಬಕ್ಕೆ ಸೇರಿದ 100 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಅಪಾರ್ಟ್ಮೆಂಟ್ ಜಲ್ಸಾದಲ್ಲಿ ನೆಲೆಸಿದ್ದಾರೆ. ಈ ನಟಿ 2015ರಲ್ಲಿ ಮುಂಬೈನ ಬಾಂದ್ರಾದಲ್ಲಿ 5 BHK ಬಂಗಲೆಯನ್ನು 21 ಕೋಟಿಗೆ ಕೊಂಡುಕೊಂಡಿದ್ದರು. ಈ ಮನೆಯ ವಿಸ್ತೀರ್ಣ 5,500 ಚದರ ಅಡಿಯಾಗಿದ್ದು, ಇದರ ಮೌಲ್ಯ ಇಂದಿನ ರಿಯಲ್ ಎಸ್ಟೇಟ್ ಬೆಲೆ 50 ಕೋಟಿ ರುಪಾಯಿಗೂ ಅಧಿಕವಾಗಿದೆ.
ಇಷ್ಟು ಮಾತ್ರವಲ್ಲದೇ ಈ ನಟಿ ದುಬೈನ ಜುಮೇರಾ ಗಾಲ್ಫ್ ಎಸ್ಟೇಟ್‌ನಲ್ಲಿ 15 ಕೋಟಿಗೆ ಐಷಾರಾಮಿ ಮನೆಯನ್ನು ಖರೀದಿಸಿದ್ದಾರೆ. ಈ ಮನೆಯಲ್ಲಿ ಜಿಮ್ನಾಷಿಯಂ, ಈಜುಕೊಳ ಮತ್ತು ಇತರ ಹಲವು ಐಷಾರಾಮಿ ವೈಶಿಷ್ಟ್ಯಗಳನ್ನು ಹೊಂದಿದ್ದು, ಇದು ಅತ್ಯಂತ ದುಬಾರಿ ಮನೆಗಳಲ್ಲಿ ಒಂದಾಗಿದೆ. ನಟಿ ಐಶ್ವರ್ಯ ಬಳಿ ರೈ ರೋಲ್ಸ್ ರಾಯ್ಸ್ ಘೋಸ್ಟ್ (6.95 ಕೋಟಿ), ಆಡಿ ಎ8ಎಲ್ (1.34 ಕೋಟಿ), ಮರ್ಸಿಡಿಸ್ ಬೆಂಝ್ ಎಸ್ 500 (1.98 ಕೋಟಿ), ಮರ್ಸಿಡಿಸ್ ಬೆಂಜ್ ಎಸ್ 350 ಡಿ ಕೂಪೆ (1.60 ಕೋಟಿ), ಸಿ.40 ಕೋಟಿ. ಕೋಟಿಗಳು), ಲೆಕ್ಸಸ್ LX 570(2.8 ಕೋಟಿ) ಐಷಾರಾಮಿ ಕಾರುಗಳು ಸಹ ಇವೆ.
ನಟಿ ಐಶ್ವರ್ಯ 2007 ರಲ್ಲಿ ಅಭಿಷೇಕ್ ಬಚ್ಚನ್ ಅವರನ್ನು ಮದುವೆಯಾಗಿದ್ದು,ಈ ಜೋಡಿ ಆರಾಧ್ಯ ಎಂಬ ಒಬ್ಬಳು ಮಗಳಿ ಇದ್ದಾಳೆ. ಸದ್ಯ ಈ ನಟಿಯ ಆಸ್ತಿಯ ಬಗ್ಗೆ ತಿಳಿದ ನೆಟ್ಟಿಗರು ಅಯ್ಯೋ ಇರೋದು ಒಬ್ಬಳು ಮಗಳು, ಇಷ್ಟೊಂದು ಆಸ್ತಿಯನ್ನು ಏನು ಮಾಡುತ್ತೀರಿ ಎಂದು ಕೇಳುತ್ತಿದ್ದಾರೆ. ಐಶ್ವರ್ಯ ರೈ 50 ವರ್ಷಗಳ ನಂತರವೂ ದಂತದ ಗೊಂಬೆಯಂತಿದ್ದು, ಕೊನೆಯದಾಗಿ ಈ ನಟಿ ಮಣಿರತ್ನಂ ನಿರ್ದೇಶನದ “ಪೊನ್ನಿಯಿನ್ ಸೆಲ್ವನ್” ಚಿತ್ರದಲ್ಲಿ ನಂದಿನಿಯಾಗಿ ನಟಿಸಿದ್ದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.