Actress Rekha relationship with manager: ಬಾಲಿವುಡ್ ಖ್ಯಾತ ನಟಿ ರೇಖಾ ಮಹಿಳಾ ಮ್ಯಾನೇಜರ್ ಜೊತೆಯೇ ಸಂಬಂಧ ಹೊಂದಿದ್ದರೆಂಬ ವದಂತಿಯೊಂದಿದೆ. ಇದನ್ನು ಬಯೋಗ್ರಫಿಯಲ್ಲಿ ಸಹ ಬರೆಯಲಾಗಿದೆ ಎನ್ನಲಾಗಿದೆ.
ಬಾಲಿವುಡ್ನ ಖ್ಯಾತ ನಟಿ ರೇಖಾ. ಅಮಿತಾಬ್ ಬಚ್ಚನ್ ಜೊತೆಗಿನ ಸಂಬಂಧ ಮಾತ್ರವಲ್ಲ ಇವರು ತಮ್ಮ ಸ್ವಂತ ರೇಖಾ ಮ್ಯಾನೇಜರ್ ಫರ್ಜಾನಾ ಜೊತೆಯೇ ರಿಲೇಶನ್ಶಿಪ್ನಲ್ಲಿದ್ದರು ಎನ್ನಲಾಗಿದೆ.
ಲೇಖಕಾ ಯಾಸೀರ್ ಉಸ್ಮಾನ್ ಅವರು ನಟಿ ರೇಖಾ ಬಯೋಗ್ರಫಿ ಬರೆದಿದ್ದಾರೆ. 'ರೇಖಾ: ದಿ ಅನ್ಟೋಲ್ಡ್ ಸ್ಟೋರಿ' ಎಂಬುದು ಆ ಪುಸ್ತಕದ ಹೆಸರು. ಇದರಲ್ಲಿ ಈ ವಿಚಾರ ಬರೆಯಲಾಗಿದೆ.
ನಟಿ ರೇಖಾ ಮಹಿಳಾ ಮ್ಯಾನೇಜರ್ ಫರ್ಜಾನಾ ಜೊತೆಯೇ ಸಂಬಂಧದಲ್ಲಿದ್ದರು ಎನ್ನಲಾಗುತ್ತಿದೆ.
ನಟಿ ರೇಖಾ ಬೆಡ್ ರೂಮ್ ಒಳಗಡೆ ಯಾರಿಗೂ ಪ್ರವೇಶವಿರಲಿಲ್ಲ. ರೇಖಾ ಮನೆಯ ಕೆಲಸದವರಿಗೂ ಆ ಬೆಡ್ ರೂಮ್ ಒಳಗೆ ಎಂಟ್ರಿ ಇರಲಿಲ್ಲ. ಆದರೆ ಫರ್ಜಾನಾ ಒಬ್ಬರೇ ರೇಖಾ ಕೋಣೆಗೆ ಹೋಗಲು ಅವಕಾಶವಿತ್ತು.
1990ರಲ್ಲಿ ರೇಖಾ ದೆಹಲಿ ಮೂಲದ ಉದ್ಯಮಿ ಮಕೇಶ್ ಅಗರ್ವಾಲ್ ಜೊತೆ ಮದುವೆಯಾದರು.
ರೇಖಾ ಪತಿ ಮದುವೆಯಾದ 7 ತಿಂಗಳಲ್ಲೇ ಆತ್ಮಹತ್ಯೆ ಮಾಡಿಕೊಂಡರು. ಆ ವೇಳೆ ರೇಖಾ ಲಂಡನ್ನಲ್ಲಿ ಇದ್ದರು ಎನ್ನಲಾಗಿದೆ.
ಫರ್ಜಾನಾ ಜೊತೆಗಿನ ಸಂಬಂಧವೇ ರೇಖಾ ಪತಿ ಆತ್ಮಹತ್ಯೆಗೆ ಕಾರಣ ಎಂದು ಆರೋಪಿಸಲಾಯಿತು.