Clove to control Blood Sugar : ಲವಂಗವನ್ನು ಈ ರೀತಿಯಲ್ಲಿ ಮತ್ತು ಈ ಸಮಾಯದಲ್ಲಿಯೇ ನಿಯಮಿತವಾಗಿ ಬಳಸುವುದರಿಂದ ಮಧುಮೇಹದ ಸಮಸ್ಯೆಯನ್ನು ಸುಲಭವಾಗಿ ನಿವಾರಿಸಬಹುದು.
Clove benefits to control Blood Sugar :ನಾವು ನಿತ್ಯದ ಅಡುಗೆಯಲ್ಲಿ ಬಹಳಷ್ಟು ಮಸಾಲೆಗಳನ್ನು ಬಳಸುತ್ತೇವೆ. ಈ ಎಲ್ಲಾ ಮಸಾಲೆಗಳನ್ನು ನಾವು ತಯಾರಿಸುವ ಅಡುಗೆಯ ರುಚಿ ಹೆಚ್ಚಿಸುವ ಸಲುವಾಗಿ ಬಳಸಲಾಗುತ್ತದೆ. ಇಂಥ ಮಸಾಲೆಗಳಲ್ಲಿ ಒಂದು ಲವಂಗ.ಇದುಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಲವಂಗವನ್ನು ನಿಯಮಿತವಾಗಿ ಬಳಸುವುದರಿಂದ ಮಧುಮೇಹದ ಸಮಸ್ಯೆಯನ್ನು ಸುಲಭವಾಗಿ ನಿವಾರಿಸಬಹುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಮಧುಮೇಹ ಅಥವಾ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗಿದ್ದಾಗ ನಿರಂತರವಾಗಿ ಔಷಧಿ ತೆಗೆದುಕೊಳ್ಳಬೇಕು.ಹಾಗಿದ್ದರೆ ಮಾತ್ರ ಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಸಾಧ್ಯ. ಆದರೆ, ಕೆಲವೊಂದು ಮನೆ ಮದ್ದಿನ ಸಹಾಯದಿಂದಲೇ ಶುಗರ್ ಅನ್ನು ನಾರ್ಮಲ್ ಮಾಡಿಕೊಳ್ಳಬಹುದು.
ನಾವಿಲ್ಲಿ ನಿತ್ಯ ಅಡುಗೆಯಲ್ಲಿ ಬಳಸುವ ಲವಂಗದ ಬಗ್ಗೆ ಹೇಳುತ್ತಿದ್ದೇವೆ. ಲವಂಗದಲ್ಲಿ ಅನೇಕ ಔಷಧೀಯ ಗುಣಗಳಿವೆ.ಲವಂಗವನ್ನು ಅನೇಕ ರೋಗಗಳನ್ನು ಗುಣಪಡಿಸಲು ಬಳಸಲಾಗುತ್ತದೆ.ಲವಂಗ ನಂಜುನಿರೋಧಕವಾಗಿದ್ದು ಮಧುಮೇಹದ ಸಮಸ್ಯೆಯನ್ನು ನಿವಾರಿಸುತ್ತದೆ.ನೋವು ನಿವಾರಕವಾಗಿ ಅಥವಾ ಪೈನ್ ಕಿಲ್ಲರ್ ಆಗಿಯೂ ಇದನ್ನು ಬಳಸಬಹುದು.
ಲವಂಗವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಇದು ಇನ್ಸುಲಿನ್ ಹೆಚ್ಚಳ ಮಾಡಲು ಸಹಾಯ ಮಾಡುತ್ತದೆ.
ಲವಂಗವು ಹೈಪೊಗ್ಲಿಸಿಮಿಕ್ ಪರಿಣಾಮವನ್ನು ಹೊಂದಿದ್ದು, ಇನ್ಸುಲಿನ್ ಸ್ರವಿಸುವಿಕೆಯನ್ನು ಮತ್ತು ಇನ್ಸುಲಿನ್ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ದೇಹದಲ್ಲಿನ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಲವಂಗವನ್ನು ಹಲವಾರು ರೀತಿಯಲ್ಲಿ ಸೇವಿಸಬಹುದು.ಅದರಲ್ಲಿ ಮುಖ್ಯವಾಗಿ ರಾತ್ರಿ ಮಲಗುವ ಮುನ್ನ 2 ರಿಂದ 3 ಲವಂಗವನ್ನು ಬಾಯಿಯಲ್ಲಿ ಇಟ್ಟುಕೊಂಡರೆ ಬೆಳಗಾಗುವುದರ ಹೊತ್ತಿಗೆ ರಕ್ತದಲ್ಲಿನ ಸಕ್ಕರೆ ಮಟ್ಟ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿರುತ್ತದೆ.
ಲವಂಗದ ಪುಡಿಯನ್ನು ಸಾಂಪ್ರದಾಯಿಕವಾಗಿ ಗಾಯಗಳನ್ನು ಗುಣಪಡಿಸಲು ಕೂಡಾ ಬಳಸಲಾಗುತ್ತದೆ. ಲವಂಗವನ್ನು ಶೀತ-ಕೆಮ್ಮು ಇದ್ದಾಗ ಲವಂಗವನ್ನು ಚಹಾದ ರೂಪದಲ್ಲಿ ಬಳಸಲಾಗುತ್ತದೆ. (ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)