Bajaj Finance FD Interest Rates: ದೇಶದ ಅತಿದೊಡ್ಡ ಫೈನಾನ್ಷಿಯಲ್ ಸರ್ವಿಸ್ ಸಮೂಹಗಳಲ್ಲಿ ಒಂದಾದ ಬಜಾಜ್ ಫೈನಾನ್ಸ್ ಮಹತ್ವದ ಘೋಷಣೆ ಮಾಡಿದೆ. ಬಜಾಜ್ನ ಅಂಗಸಂಸ್ಥೆಯಾದ ಬಜಾಜ್ ಫೈನಾನ್ಸ್ ಲಿಮಿಟೆಡ್ ತನ್ನ ಹೆಚ್ಚಿನ ಎಫ್ಡಿಗಳ ಬಡ್ಡಿ ದರಗಳನ್ನು ಹೆಚ್ಚಿಸಿದೆ.
ಕಂಪನಿಯು ಹಿರಿಯ ನಾಗರಿಕರಿಗೆ 42 ತಿಂಗಳ FD ಮೇಲೆ ಶೇ. 8.85 ರಷ್ಟು ಹೆಚ್ಚಿನ ಬಡ್ಡಿ ದರ ಸಿಗಲಿದೆ. ಬಜಾಜ್ ಹಿರಿಯ ನಾಗರಿಕರಲ್ಲದವರಿಗೆ FD ದರವನ್ನು ಶೇ. 8.60 ಹೆಚ್ಚಿಸಲು ಸಂಸ್ಥೆ ನಿರ್ಧರಿಸಿದೆ.
ಕಂಪನಿಯು 25 ರಿಂದ 35 ತಿಂಗಳ ಅವಧಿಯ ಎಫ್ಡಿಗಳಿಗೆ ಹಿರಿಯ ನಾಗರಿಕರಿಗೆ 60 ಬೇಸಿಸ್ ಪಾಯಿಂಟ್ಗಳ ಬಡ್ಡಿದರಗಳನ್ನು ಹೆಚ್ಚಿಸಿದೆ. 18 ರಿಂದ 24 ತಿಂಗಳ ಅವಧಿಯ ಎಫ್ಡಿಗಳಿಗೆ, ದರವನ್ನು 40 ಬೇಸಿಸ್ ಪಾಯಿಂಟ್ಗಳವರೆಗೆ ಹೆಚ್ಚಿಸಲಾಗಿದೆ. ಈ ಹೊಸ ದರಗಳು 3 ಏಪ್ರಿಲ್ 2024 ರಿಂದ ಜಾರಿಗೆ ಬರಲಿವೆ.
ಹಿರಿಯ ನಾಗರಿಕರಲ್ಲದವರಿಗೂ ಸಹ, ಕಂಪನಿಯು 25 ರಿಂದ 35 ತಿಂಗಳ ಅವಧಿಯೊಂದಿಗೆ ಎಫ್ಡಿಗಳಿಗೆ ಬಡ್ಡಿದರಗಳಲ್ಲಿ 45 ಬೇಸಿಸ್ ಪಾಯಿಂಟ್ಗಳ ಹೆಚ್ಚಳವನ್ನು ಘೋಷಿಸಿದೆ. 18 ರಿಂದ 22 ತಿಂಗಳ ಅವಧಿಯ ಎಫ್ಡಿಗಳಿಗೆ 40 ಬೇಸಿಸ್ ಪಾಯಿಂಟ್ಗಳ ಹೆಚ್ಚಳವನ್ನು ಘೋಷಿಸಲಾಗಿದೆ.
ಇದನ್ನೂ ಓದಿ-Pink Tax: ಏನಿದು ಪಿಂಕ್ ಟಾಕ್ಸ್? ಯುವತಿಯರಿಂದ ಗುಟ್ಟಾಗಿ ವಸೂಲಿ ಮಾಡಲಾಗುತ್ತಿದೆ ಈ ತೆರಿಗೆ!
30 ಮತ್ತು 33 ತಿಂಗಳ ಅವಧಿಯ ಎಫ್ಡಿಗಳಿಗೆ, ಬಜಾಜ್ ಫೈನಾನ್ಸ್ ದರವನ್ನು 35 ಬೇಸಿಸ್ ಪಾಯಿಂಟ್ಗಳಷ್ಟು ಹೆಚ್ಚಿಸಿದೆ.
ಇದನ್ನೂ ಓದಿ-New EV: ಮಾರುಕಟ್ಟೆಗೆ ಲಗ್ಗೆ ಇಟ್ಟ ಮತ್ತೊಂದು ಇಲೆಕ್ಟ್ರಿಕ್ ದ್ವಿಚಕ್ರ ವಾಹನ, ರೆಂಜ್-ಬೆಲೆ ಎಷ್ಟು ಗೊತ್ತಾ?
ಬಜಾಜ್ ಫೈನಾನ್ಸ್ ತನ್ನ ಅತಿ ಹೆಚ್ಚುವರಿ ಎಫ್ಡಿ ಬಡ್ಡಿದರಗಳಿಂದ ಸುರಕ್ಷಿತವಾದ ಹೆಚ್ಚಿನ ಆದಾಯ ಮತ್ತು ಸ್ಥಿರವಾದ ಆಯ್ಕೆಯನ್ನು ನೀಡುತ್ತದೆ ಎಂದು ಹೇಳಿಕೊಂಡಿದೆ.
ಇದನ್ನೂ ನೋಡಿ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ