ಲಂಡನ್: ಲಂಡನ್ನ ಪೂರ್ವದಲ್ಲಿರುವ ಕೈಗಾರಿಕಾ ವಲಯದಲ್ಲಿ ಬಲ್ಗೇರಿಯಾದಿಂದ ಬಂದ ಟ್ರಕ್ ಕಂಟೇನರ್ನೊಳಗೆ 39 ಮೃತದೇಹಗಳು ಮತ್ತೆಯಾಗಿರುವ ಘಟನೆ ಬುಧವಾರ ನಡೆದಿದೆ ಎಂದು ಬ್ರಿಟಿಷ್ ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಎಸ್ಸೆಕ್ಸ್ ಪೊಲೀಸರು, ಪೂರ್ವ ಲಂಡನ್ ನ ಇಂಡಸ್ಟ್ರೀಯಲ್ ಪಾರ್ಕ್ ನಲ್ಲಿ ನಿಂತಿದ್ದ ಟ್ರಕ್ ಕಂಟೈನರ್ ನಲ್ಲಿ 39 ಮೃತದೇಹಗಳು ಪತ್ತೆಯಾಗಿದ್ದು, ಇದರಲ್ಲಿ ಓರ್ವ ಅಪ್ತ್ರಾಪ್ತನ ಶವವೂ ಸೇರಿದೆ ಎನ್ನಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಐರ್ಲ್ಯಾಂಡ್ ನ 25 ವರ್ಷದ ಯುವಕನನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಈ ಘಟನೆಯಿಂದ ಇಡೀ ಲಂಡನ್ ನಗರವೇ ಬೆಚ್ಚಿ ಬಿದ್ದಿದೆ.
ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿರುವ ಪ್ರಧಾನಿ ಬೋರಿಸ್ ಜಾನ್ಸನ್ ಅವರು, ಎಸೆಕ್ಸ್ನಲ್ಲಿ ನಡೆದ ಈ ದುರಂತ ಘಟನೆಯಿಂದ ನಾನು ಕಳವಳಗೊಂಡಿದ್ದೇನೆ. ಘಟನೆ ಬಗ್ಗೆ ಅಪ್ಡೇಟ್ ಗಳನ್ನೂ ಸ್ವಿಕರಿಸುತ್ತಿದ್ದು, ಏನಾಯಿತು ಎಂಬುದರ ಬಗ್ಗೆ ಗೃಹ ಸಚಿವಾಲಯವು ಎಸೆಕ್ಸ್ ಪೊಲೀಸರೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ ಎಂದಿದ್ದು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
I’m appalled by this tragic incident in Essex. I am receiving regular updates and the Home Office will work closely with Essex Police as we establish exactly what has happened. My thoughts are with all those who lost their lives & their loved ones.
— Boris Johnson (@BorisJohnson) October 23, 2019