ಬೆಂಗಳೂರು: ಜನವರಿ 1ರಂದು ಬಿಬಿಎಂಪಿಯ ಆಸ್ಪತ್ರೆಯಲ್ಲಿ ಜನಿಸಿದ ಮೊದಲ ಹೆಣ್ಣು ಮಗುವಿನ ವಿದ್ಯಾಭ್ಯಾಸಕ್ಕೆ 5 ಲಕ್ಷ ರೂ. ಪ್ರೋತ್ಸಾಹ ಧನ ನೀಡಲಾಗುವುದು ಎಂದು ಮೇಯರ್ ಆರ್. ಸಂಪತ್ ರಾಜ್ ಬಂಪರ್ ಆಫರ್ ಅನ್ನು ಘೋಷಿಸಿದ್ದಾರೆ.
"ಹೊಸ ವರ್ಷದ ದಿನದಂದು ಸಹಜ ಹೆರಿಗೆಯಿಂದ ಜನಿಸುವ ಹೆಣ್ಣು ಮಗುವಿಗೆ ಪಾಲಿಕೆಯ ಆಯುಕ್ತರ ಹೆಸರಿನಲ್ಲಿ ಜಂಟಿ ಖಾತೆ ತೆರೆದು 5 ಲಕ್ಷ ರೂ. ಠೇವಣಿ ಇಡಲಾಗುವುದು. ಇದರಲ್ಲಿ ಬರುವ ಬಡ್ಡಿ ಹಣವನ್ನು ಮಗುವಿನ ವಿದ್ಯಾಭ್ಯಾಸಕ್ಕೆ ನೀಡಲಾಗುವುದು" ಎಂದು ಮೇಯರ್ ಇದೇ ಸಂದರ್ಭದಲ್ಲಿ ತಿಳಿಸಿದರು.