One Vehicle One FASTag: ಏಪ್ರಿಲ್ 1ರಿಂದ ಜಾರಿಯಾಗಿದೆ ಹೊಸ ನಿಯಮ, ಕಾರಿನಲ್ಲಿ ಹೊರ ಹೋಗುವ ಮುನ್ನ ತಪ್ಪದೇ ತಿಳಿಯಿರಿ

One Vehicle One FASTag:  ಸೋಮವಾರದಿಂದ (ಏಪ್ರಿಲ್ 01) ದೇಶಾದ್ಯಂತ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ)  ‘ಒಂದು ವಾಹನ, ಒಂದು ಫಾಸ್ಟ್‌ಟ್ಯಾಗ್’ ನಿಯಮ ಜಾರಿಯಾಗಿದೆ. ನೀವು ಕಾರಿನಲ್ಲಿ ಹೊರ ಹೋಗುವ ಮೊದಲು ಏನಿದು ನಿಯಮ? ಇದರ ಪ್ರಯೋಜನವೇನು ಎಂಬುದನ್ನು ತಪ್ಪದೇ ತಿಳಿಯಿರಿ. 

Written by - Yashaswini V | Last Updated : Apr 2, 2024, 08:38 AM IST
  • ಫಾಸ್ಟ್‌ಟ್ಯಾಗ್ ಟೋಲ್ ಪ್ಲಾಜಾಗಳಲ್ಲಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುತ್ತದೆ.
  • ದೇಶಾದ್ಯಂತ ಸುಮಾರು 98% ವಾಹನ ಚಾಲಕರು ಫಾಸ್ಟ್‌ಟ್ಯಾಗ್ ಬಳಸುತ್ತಿದ್ದಾರೆ.
  • NHAI 'ಒಂದು ವಾಹನ, ಒಂದು ಫಾಸ್ಟ್‌ಟ್ಯಾಗ್' ಉಪಕ್ರಮವನ್ನು ಪ್ರಾರಂಭಿಸಿದೆ.
One Vehicle One FASTag: ಏಪ್ರಿಲ್ 1ರಿಂದ ಜಾರಿಯಾಗಿದೆ ಹೊಸ ನಿಯಮ, ಕಾರಿನಲ್ಲಿ ಹೊರ ಹೋಗುವ ಮುನ್ನ ತಪ್ಪದೇ ತಿಳಿಯಿರಿ  title=

One Vehicle One FASTag: ಹೊಸ ಆರ್ಥಿಕ ವರ್ಷ ಎಂದರೆ ಏಪ್ರಿಲ್ 01ರಿಂದ ಹಲವು ನಿಯಮಗಳು ಬದಲಾಗಿವೆ. ಅದರಲ್ಲಿ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) 'ಒಂದು ವಾಹನ, ಒಂದು ಫಾಸ್ಟ್‌ಟ್ಯಾಗ್' (One Vehicle One FASTag) ನಿಯಮವೂ ಒಂದು. ಬಹು ವಾಹನಗಳಿಗೆ ಒಂದು ಫಾಸ್ಟ್‌ಟ್ಯಾಗ್ ಬಳಕೆಯನ್ನು ಅಥವಾ ಒಂದು ವಾಹನಕ್ಕೆ ಬಹು ಫಾಸ್ಟ್‌ಟ್ಯಾಗ್‌ಗಳ ಬಳಕೆಯನ್ನು ತಡೆಯುವುದು ಇದರ ಪ್ರಮುಖ ಉದ್ದೇಶವಾಗಿದೆ. 

ನಿಮಗೆಲ್ಲರಿಗೂ ತಿಳಿದಿರುವಂತೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹಾದುಹೋಗುವಾಗ ಎಲೆಕ್ಟ್ರಾನಿಕ್ ಟೋಲ್ ಸಂಗ್ರಹಣಾ ವ್ಯವಸ್ಥೆಯ ಮೂಲಕ ಟೋಲ್ ಪಾವತಿಗಾಗಿ ಫಾಸ್ಟ್‌ಟ್ಯಾಗ್ (Fastag) ಪ್ರಯೋಜನಕಾರಿ ಆಗಿದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಇದನ್ನು ನಿರ್ವಹಿಸುತ್ತದೆ. 

ಇದನ್ನೂ ಓದಿ- Bank Holidays In April: ಏಪ್ರಿಲ್‌ನಲ್ಲಿ 14ದಿನಗಳವರೆಗೆ ಬ್ಯಾಂಕ್‌ಗಳಿಗೆ ರಜೆ, ಇಲ್ಲಿದೆ ಲಿಸ್ಟ್

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ- ಎನ್‌ಎಚ್‌ಎಐ (National Highways Authority of India) ಪ್ರಕಾರ, ಈಗ ಒಂದು ವಾಹನದಲ್ಲಿ ಒಂದಕ್ಕಿಂತ ಹೆಚ್ಚು ಫಾಸ್ಟ್‌ಟ್ಯಾಗ್ ಅಳವಡಿಸುವಂತಿಲ್ಲ. ಒಂದೊಮ್ಮೆ ಯಾವುದೇ ವಾಹನ ಚಾಲಕರು ತಮ್ಮ ವಾಹನದಲ್ಲಿ ಒಂದಕ್ಕಿಂತ ಹೆಚ್ಚು ಫಾಸ್ಟ್‌ಟ್ಯಾಗ್ ಹೊಂದಿದ್ದರೆ ಅದನ್ನು ಬಳಸಲು ಸಾಧ್ಯವಾಗುವುದಿಲ್ಲ. ಅಷ್ಟೇ ಅಲ್ಲ, ಒಂದೇ ಫಾಸ್ಟ್‌ಟ್ಯಾಗ್ ಅನ್ನು ವಿವಿಧ ವಾಹನಗಳಿಗೆ ಬಳಸುವುದನ್ನು ಎನ್‌ಎಚ್‌ಎಐ ನಿಷೇಧಿಸಿದೆ. 

ಇದನ್ನೂ ಓದಿ-  ಹೊಸ ಆರ್ಥಿಕ ವರ್ಷ ಆರಂಭ: ಬದಲಾಗಲಿವೆ ಹಲವು ನಿಯಮ, ನಿಮ್ಮ ಜೇಬಿನ ಮೇಲೆ ನೇರ ಪರಿಣಾಮ

ಒಂದು ವಾಹನ ಒಂದು ಫಾಸ್ಟ್‌ಟ್ಯಾಗ್ ನಿಯಮ ಜಾರಿಗೆ ಪ್ರಮುಖ ಕಾರಣ: 
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ), ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ವ್ಯವಸ್ಥೆಯ ದಕ್ಷತೆಯನ್ನು ಹೆಚ್ಚಿಸಲು ಮತ್ತು ಟೋಲ್ ಪ್ಲಾಜಾಗಳಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ದೃಷ್ಟಿಯಿಂದ 'ಒಂದು ವಾಹನ, ಒಂದು ಫಾಸ್ಟ್‌ಟ್ಯಾಗ್' ನಿಯಮವನ್ನು ಜಾರಿಗೆ ತಂದಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News