Uric Acid : ದೇಹದಲ್ಲಿ ಯೂರಿಕ್ ಆಮ್ಲ ಹೆಚ್ಚಳವಾದರೆ ಅನೇಕ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇದು ಕೀಲು ನೋವಿನ ಜೊತೆಗೆ ಸಂಧಿವಾತ, ಊತ ಮತ್ತು ಮೂತ್ರಪಿಂಡದ ಕಲ್ಲುಗಳಿಗೆ ಕಾರಣವಾಗುತ್ತದೆ. ಯೂರಿಕ್ ಆಮ್ಲ ದೇಹದಿಂದ ಹೊರ ಹೋಗುವುದು ಸಾಧ್ಯವಾಗದೆ ಇದ್ದಾಗ ಕೀಲುಗಳಲ್ಲಿ ಸಂಗ್ರಹಗೊಳ್ಳಲು ಪ್ರಾರಂಭಿಸುತ್ತದೆ. ಇದು ವಿಪರೀತ ನೋವು ಕೂಡಾ ನೀಡುತ್ತದೆ.ಪ್ಯೂರಿನ್ ಭರಿತ ಆಹಾರಗಳನ್ನು ಸೇವಿಸುವುದರಿಂದ ಈ ಸಮಸ್ಯೆ ಮತ್ತಷ್ಟು ಹೆಚ್ಚುತ್ತದೆ. ಆದರೆ ಕೆಲವು ಆರೋಗ್ಯಕರ ಪಾನೀಯಗಳು ದೇಹದಿಂದ ಯೂರಿಕ್ ಆಮ್ಲವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.
1.ಆಪಲ್ ಸೈಡರ್ ವಿನೆಗರ್ :
ಆಪಲ್ ಸೈಡರ್ ವಿನೆಗರ್ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ.ಯೂರಿಕ್ ಆಮ್ಲವನ್ನು ದೇಹದಿಂದ ತೆಗೆದುಹಾಕುವ ಕೆಲಸ ಮಾಡುತ್ತದೆ.ಇದಕ್ಕಾಗಿ 2 ಚಮಚ ಆಪಲ್ ಸೈಡರ್ ವಿನೆಗರ್ ಅನ್ನು ಒಂದು ಲೋಟ ನೀರಿಗೆ ಬೆರೆಸಿ ಸೇವಿಸಬಹುದು. ದಿನಕ್ಕೆ ಎರಡು ಬಾರಿ ಇದನ್ನು ಸೇವಿಸುವ ಮೂಲಕ ಉತ್ತಮ ಫಲಿತಾಂಶಗಳನ್ನು ಪಡೆಯುವುದು ಸಾಧ್ಯವಾಗುತ್ತದೆ.
ಇದನ್ನೂ ಓದಿ : ಹೃದಯದ ಆರೋಗ್ಯಕ್ಕಾಗಿ ಈ 5 ಡೈರಿ ಉತ್ಪನ್ನಗಳಿಗೆ 'NO' ಹೇಳಿ..!
2.ನಿಂಬೆ ಪಾನಕ :
ನಿಂಬೆ ನೀರು ದೇಹದ ಪಿಹೆಚ್ ಮಟ್ಟವನ್ನು ಕಾಪಾಡುತ್ತದೆ.ಇದು ಹೆಚ್ಚಿನ ಸಿಟ್ರಿಕ್ ಆಮ್ಲವನ್ನು ಹೊಂದಿರುತ್ತದೆ. ಇದು ಯೂರಿಕ್ ಆಸಿಡ್ ಹರಳುಗಳನ್ನು ಒಡೆದು ದೇಹದಿಂದ ಹೊರ ಹಾಕಲು ಸಹಾಯ ಮಾಡುತ್ತದೆ.ಒಂದು ಲೋಟ ಉಗುರುಬೆಚ್ಚಗಿನ ನೀರಿಗೆ ಅರ್ಧ ನಿಂಬೆಹಣ್ಣಿನ ರಸವನ್ನು ಬೆರೆಸಿ ನಿತ್ಯ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು.
3.ಅರಿಶಿನ ಹಾಲು :
ಅರಿಶಿನದಲ್ಲಿ ಕರ್ಕ್ಯುಮಿನ್ ನಂತಹ ಶಕ್ತಿಯುತ ಅಂಶವನ್ನು ಹೊಂದಿರುತ್ತದೆ. ಅರಿಶಿನದ ಉರಿಯೂತ ನಿವಾರಕ ಗುಣದಿಂದಾಗಿ ಇದು ಊತವನ್ನು ಕಡಿಮೆ ಮಾಡುತ್ತದೆ.ಅರಿಶಿನ ಹಾಲನ್ನು ನಿಯಮಿತವಾಗಿ ಕುಡಿಯುವುದರಿಂದ ಯೂರಿಕ್ ಆಮ್ಲದ ಮಟ್ಟವನ್ನು ಕಡಿಮೆ ಮಾಡಬಹುದು. ಇದಕ್ಕಾಗಿ ಒಂದು ಲೋಟ ಬಿಸಿ ಹಾಲಿಗೆ ಅರ್ಧ ಚಮಚ ಅರಿಶಿನ ಪುಡಿಯನ್ನು ಬೆರೆಸಿ ಸೇವಿಸಬೇಕು.
4. ಕಲ್ಲಂಗಡಿ ಜ್ಯೂಸ್ :
ಕಲ್ಲಂಗಡಿ ದೇಹವನ್ನು ಹೈಡ್ರೇಟ್ ಆಗಿ ಇಡುವುದು ಮಾತ್ರವಲ್ಲದೆ ಅದರಲ್ಲಿರುವ ಸಿಟ್ರುಲಿನ್ ನಂತಹ ಅಂಶಗಳು ಯೂರಿಕ್ ಆಮ್ಲದ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮನೆಯಲ್ಲಿ ಕಲ್ಲಂಗಡಿ ರಸವನ್ನು ಸುಲಭವಾಗಿ ತಯಾರಿಸಬಹುದು.
ಇದನ್ನೂ ಓದಿ : Liver Damage Remedies: ಅಲ್ಕೋಹಾಲ್ ಸೇವನೆಯಿಂದ ಯಕೃತ್ತು ಹಾಳಾಗಿದೆಯೇ, ಈ ಸಂಗತಿಗಳು ನಿಮ್ಮ ಆಹಾರದಲ್ಲಿರಲಿ!
5. ಸೌತೆಕಾಯಿ ರಸ :
ಬೇಸಿಗೆಯಲ್ಲಿ ಸೌತೆಕಾಯಿ ರಸ ದೇಹವನ್ನು ಹೈಡ್ರೇಟ್ ಮಾಡುವುದರ ಜೊತೆಗೆ ದೇಹದಿಂದ ಯೂರಿಕ್ ಆಮ್ಲವನ್ನು ತೆಗೆದುಹಾಕುತ್ತದೆ. ಸೌತೆಕಾಯಿ ರಸಕ್ಕೆ ಸ್ವಲ್ಪ ಬ್ಲಾಕ್ ಸಾಲ್ಟ್ ಸೇರಿಸಬಹುದು. ಇದನ್ನು ನಿಯಮಿತವಾಗಿ ದಿನವಿಡೀ ಯಾವುದೇ ಸಮಯದಲ್ಲಿಯಾದರೂ ಕುಡಿಯಬಹುದು.
6. ಶುಂಠಿ ಚಹಾ :
ಆಯುರ್ವೇದದಲ್ಲಿ ಶುಂಠಿಗೆ ಔಷಧಿಯ ಸ್ಥಾನಮಾನ ನೀಡಲಾಗಿದೆ.ಅದರ ಉರಿಯೂತದ ಗುಣಲಕ್ಷಣಗಳಿಂದಾಗಿ,ಶುಂಠಿಯು ಯೂರಿಕ್ ಆಮ್ಲದ ಮಟ್ಟವನ್ನು ತ್ವರಿತವಾಗಿ ಕಡಿಮೆ ಮಾಡುತ್ತದೆ. ಇದು ಯೂರಿಕ್ ಆಮ್ಲದಿಂದ ಉಂಟಾಗುವ ನೋವಿನಿಂದ ಕೂಡ ಪರಿಹಾರವನ್ನು ನೀಡುತ್ತದೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ