Gallbladder Stone Remedies : ಕಿಡ್ನಿ ಸ್ಟೋನ್ ನಂತೆಯೇ ಪಿತ್ತಕೋಶದಲ್ಲಿನ ಕಲ್ಲುಗಳು ಕೂಡಾ ತಡೆಯಲು ಸಾಧ್ಯವಾಗದ ನೋವಿಗೆ ಕಾರಣವಾಗುತ್ತದೆ.ಈ ನೋವನ್ನು ಕೆಲವು ನೈಸರ್ಗಿಕ ಪದಾರ್ಥಗಳ ಮೂಲಕ ಪರಿಹರಿಸಿಕೊಳ್ಳಬಹುದು.
Gallbladder Stone Remedies : ಪಿತ್ತಕೋಶದ ಕಲ್ಲುಗಳು ಎಂದರೆ ಪಿತ್ತಕೋಶದಲ್ಲಿ ರೂಪುಗೊಳ್ಳುವ ಜೀರ್ಣಕಾರಿ ದ್ರವದ ಗಟ್ಟಿಯಾದ ರೂಪವಾಗಿದೆ. ಪಿತ್ತಕೋಶವು ನಮ್ಮ ಕಿಬ್ಬೊಟ್ಟೆಯ ಬಲಭಾಗದಲ್ಲಿ, ಕೃತ್ತಿನ ಕೆಳಗಿರುವ ಸಣ್ಣ ಅಂಗವಾಗಿದೆ. ಇದು ನೋಡಲು ಪೇರಳೆ ಆಕಾರದಲ್ಲಿದೆ ಎಂದು ಹೇಳಲಾಗುತ್ತದೆ. ಪಿತ್ತಕೋಶವು ಪಿತ್ತರಸ ಎಂಬ ಜೀರ್ಣಕಾರಿ ದ್ರವವನ್ನು ಹೊಂದಿರುತ್ತದೆ. ಅದು ಸಣ್ಣ ಕರುಳಿನಲ್ಲಿ ಬಿಡುಗಡೆಯಾಗುತ್ತದೆ.ಪಿತ್ತರಸದಲ್ಲಿ ಯಾವುದೇ ರೀತಿಯ ಸಮಸ್ಯೆ ಇದ್ದರೂ, ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಕಿಡ್ನಿ ಸ್ಟೋನ್ ನಂತೆಯೇ ಪಿತ್ತಕೋಶದಲ್ಲಿನ ಕಲ್ಲುಗಳು ಕೂಡಾ ತಡೆಯಲು ಸಾಧ್ಯವಾಗದ ನೋವಿಗೆ ಕಾರಣವಾಗುತ್ತದೆ. ಇದು ದೀರ್ಘಕಾಲದವರೆಗೆ ಕಾಡುವ ನೋವು. ಆದರೆ,ಈ ನೋವನ್ನು ಕೆಲವು ನೈಸರ್ಗಿಕ ಪದಾರ್ಥಗಳ ಮೂಲಕ ಪರಿಹರಿಸಿಕೊಳ್ಳಬಹುದು.
ಹೌದು, ಪಿತ್ತ ಕೋಶದ ಕಲ್ಲಿನ ಸಮಸ್ಯೆಗೆ ನೆಲ್ಲಿಕಾಯಿ ಬೀಜ ಪರಿಹಾರವಾಗಬಹುದು. ನೆಲ್ಲಿ ಕಾಯಿ ಬೀಜ ಪಿತ್ತಕೋಶದ ಕಲ್ಲುಗಳ ವಿರುದ್ದ ಪರಿಣಾಮಕಾರಿಯಾಗಿ ಹೋರಾಡುತ್ತದೆ. ಆದರೆ,ಅದನ್ನು ಹೇಗೆ ಸೇವಿಸಬೇಕು ನೋಡೋಣ.
ನೆಲ್ಲಿಕಾಯಿ ಬೀಜಗಳು ಉತ್ಕರ್ಷಣ ನಿರೋಧಕಗಳು ಮತ್ತು ಉರಿಯೂತದಂತಹ ಗುಣಲಕ್ಷಣಗಳ ಆಗರವಾಗಿದೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಇದು ಪಿತ್ತಕೋಶದಲ್ಲಿನ ಕಲ್ಲುಗಳಿಗೆ ಚಿಕಿತ್ಸೆಯಾಗಿ ಕೆಲಸ ಮಾಡುತ್ತದೆ.
ನೆಲ್ಲಿ ಕಾಯಿ ಬೀಜಗಳನ್ನು ನಿಯಮಿತವಾಗಿ ಸೇವಿಸುವುದರಿಂದ, ಗ್ಯಾಸ್ಟ್ರಿಕ್ ಸಮಸ್ಯೆಗಳು ಕೂಡಾ ಕಡಿಮೆಯಾಗುತ್ತದೆ. ಇದು ಉತ್ತಮ ಪ್ರಮಾಣದ ವಿಟಮಿನ್ ಸಿಯನ್ನು ಹೊಂದಿದೆ. ಹಾಗಾಗಿ ಕೊಲೆಸ್ಟ್ರಾಲ್ ಮಟ್ಟವನ್ನು ಕೂಡಾ ಕಡಿಮೆ ಮಾಡುತ್ತದೆ.
ಪಿತ್ತಕೋಶದ ಕಲ್ಲಿನ ಚಿಕಿತ್ಸೆಗಾಗಿ ನೆಲ್ಲಿಕಾಯಿ ಬೀಜವನ್ನು ಸೇವಿಸಬೇಕಾದರೆ ಮೊದಲು ಈ ಬೀಜಗಳನ್ನು ಚೆನ್ನಾಗಿ ಒಣಗಿಸಿ.ನಂತರ ಈ ಬೀಜಗಳನ್ನು ನುಣ್ಣಗೆ ಪುಡಿಮಾಡಿಕೊಳ್ಳಿ. ಈ ಪುಡಿಯನ್ನು ಪ್ರತಿದಿನ ಬೆಳಿಗ್ಗೆ ಉಗುರು ಬೆಚ್ಚಗಿನ ನೀರಿನೊಂದಿಗೆ ಬೆರೆಸಿ ಕುಡಿಯಬೇಕು. ಇದರಿಂದ ಜೀರ್ಣಕಾರಿ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ. ಪಿತ್ತಕೋಶದ ಕಲ್ಲುಗಳು ಕೂಡಾ ಕರಗುತ್ತದೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.