ನವದೆಹಲಿ: ಟಿ20 ಹಾಗೂ ಏಕದಿನ ಪಂದ್ಯಗಳಲ್ಲಿ ರೋಹಿತ್ ಶರ್ಮಾ ಪಾರಮ್ಯ ಮೆರೆಯುತ್ತಿರುವುದು ಎಲ್ಲರಿಗೂ ತಿಳಿದಿದೆ, ಆದರೆ ಅವರು ಟೆಸ್ಟ್ ಕ್ರಿಕೆಟ್ ನಲ್ಲಿ ಅಷ್ಟಾಗಿ ಯಶಸ್ಸು ಕಂಡಿರಲಿಲ್ಲ.
Rohit Sharma now has most sixes for India in a:
Test ➜ 10* v South Africa, Visakhapatnam 2019
ODI ➜ 16 v Australia, Bangalore 2013
T20I ➜ 10 v Sri Lanka, Indore 2017#INDvSA SCORECARD ▶️ https://t.co/dCGJ4Pcug5 pic.twitter.com/VWIVKD4ufd— ICC (@ICC) October 5, 2019
ಆದರೆ ಈಗ ವಿಶಾಖ್ ಪಟ್ಟಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರ ಫಾರ್ಮ್ ಎಲ್ಲರಿಗೂ ಅಚ್ಚರಿ ತರಿಸಿದೆ. ಟೆಸ್ಟ್ ನಲ್ಲಿ ಅಷ್ಟಾಗಿ ಯಶಸ್ಸು ಕಾಣದ ರೋಹಿತ್ ಶರ್ಮಾಗೆ ಈ ಬಾರಿ ಆರಂಭಿಕ ಆಟಗಾರನಾಗಿ ಕಳುಹಿಸಲಾಗಿತ್ತು. ಮೊದಲ ಇನಿಂಗ್ಸ್ ನಲ್ಲಿ ಅವರು ದಾಖಲೆಯ 176 ರನ್ ಗಳನ್ನು ಗಳಿಸಿದ್ದಲ್ಲದೆ ಮಾಯಾಂಕ್ ಅಗರವಾಲ್ ಅವರ ಜೊತೆ ದಾಖಲೆ ಜೊತೆಯಾಟವಾಡಿದ್ದರು.
This time it’s Rohit not Virat....if you know you know 😂
— Ben Stokes (@benstokes38) October 5, 2019
ಈಗ ಎರಡನೇ ಇನಿಂಗ್ಸ್ ನಲ್ಲಿಯೂ ಕೂಡ 10 ಬೌಂಡರಿ ಹಾಗೂ 7 ಸಿಕ್ಸರ್ ಗಳೊಂದಿಗೆ ಅವರು 127 ರನ್ ಗಳಿಸಿದ್ದಾರೆ. ಈಗ ರೋಹಿತ್ ಶರ್ಮಾ ಅವರ ಆಟಕ್ಕೆ ಬೆರಗಾಗಿರುವ ಇಂಗ್ಲೆಂಡಿನ ವಿಶ್ವಕಪ್ ಫೈನಲ್ ಹೀರೋ ಬೆನ್ ಸ್ಟೋಕ್ ಈ ಬಾರಿ ರೋಹಿತ್ ,ವಿರಾಟ್ ಅಲ್ಲ ಅದು ನಿಮಗೆ ತಿಳಿದಿದ್ದರೆ ಗೊತ್ತಿರುತ್ತದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.