ಮಧುಮೇಹ ಬರುವ ಮುನ್ನವೇ ದೇಹದಲ್ಲಿ ಕಾಣಿಸಿಕೊಳ್ಳುವ ಲಕ್ಷಣಗಳಿವು.. ಸ್ವಲ್ಪವೂ ನಿರ್ಲಕ್ಷಿಸಬೇಡಿ!

Prediabetes Symptoms: ಮಧುಮೇಹ ಬರುವ ಮುನ್ನ ದೇಹದಲ್ಲಿ ಹಲವು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಆದ್ದರಿಂದ ಹಲವಾರು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಅಲ್ಲದೆ ಕೆಲವು ಸಲಹೆಗಳನ್ನು ಪಾಲಿಸಬೇಕು.

Written by - Chetana Devarmani | Last Updated : Mar 17, 2024, 12:29 PM IST
  • ಮಧುಮೇಹ ಬರುವ ಮುನ್ನ ದೇಹದಲ್ಲಾಗುವ ಬದಲಾವಣೆ
  • ಮಧುಮೇಹ ಬರುವ ಮೊದಲು ಕಾಣಿಸಿಕೊಳ್ಳುವ ಲಕ್ಷಣಗಳು
  • ಡಯಾಬಿಟಿಸ್ ಕಾಯಿಲೆಗೆ ಹಲವು ಕಾರಣಗಳಿರಬಹುದು
ಮಧುಮೇಹ ಬರುವ ಮುನ್ನವೇ ದೇಹದಲ್ಲಿ ಕಾಣಿಸಿಕೊಳ್ಳುವ ಲಕ್ಷಣಗಳಿವು.. ಸ್ವಲ್ಪವೂ ನಿರ್ಲಕ್ಷಿಸಬೇಡಿ! title=

Pre diabetes symptoms and treatment: ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಚಿಕ್ಕ ವಯಸ್ಸಿನಲ್ಲೇ ಮಧುಮೇಹಕ್ಕೆ ತುತ್ತಾಗುತ್ತಿದ್ದಾರೆ. ದೇಹದ ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿನ ಏರಿಳಿತದಿಂದಾಗಿ ಮಧುಮೇಹ ಬರುತ್ತದೆ. ಕೆಲವರಲ್ಲಿ ಮಧುಮೇಹ ಬರುವ ಮುನ್ನ ದೇಹದಲ್ಲಿ ಕೆಲವು ಬದಲಾವಣೆಗಳು ಕಾಣುತ್ತವೆ. ದೇಹದಲ್ಲಿ ಆಗುವ ಈ ಬದಲಾವಣೆಗಳನ್ನು ಎಚ್ಚರಿಕೆಯಿಂದ ಗಮನಿಸಬೇಕು. ಈ ಪೂರ್ವ-ಮಧುಮೇಹ ಲಕ್ಷಣಗಳನ್ನು ಮೊದಲೇ ಪತ್ತೆಹಚ್ಚುವುದು ಮತ್ತು ವೈದ್ಯರೊಂದಿಗೆ ಸಮಾಲೋಚನೆ ಮಾಡುವುದರಿಂದ ಮಧುಮೇಹವನ್ನು ಶಾಶ್ವತವಾಗಿ ತಡೆಗಟ್ಟಬಹುದು. 

ಮಧುಮೇಹ ಬರುವ ಮೊದಲು ದೇಹದಲ್ಲಿ ಅನೇಕ ಲಕ್ಷಣಗಳು ಕಂಡುಬರುತ್ತವೆ. ವಿಶೇಷವಾಗಿ ಅನೇಕ ಜನರಲ್ಲಿ ಅಂಗೈ ಮತ್ತು ಪಾದಗಳಲ್ಲಿ ತೀವ್ರವಾದ ನೋವು ಕಾಣಿಸಿಕೊಳ್ಳುತ್ತದೆ. ಇದಲ್ಲದೆ ಆಗಾಗ ಮೈ ಕೈ ನೋವು ಕಾಣಿಸಿಕೊಳ್ಳುತ್ತದೆ. ಇದ್ದಕ್ಕಿದ್ದಂತೆ ಬೆವರು ಬರುವುದು ಸಹ ಮಧುಮೇಹದ ಲಕ್ಷಣವಾಗಿದೆ. ಬೆವರಿನ ಜೊತೆ ಕೆಟ್ಟ ವಾಸನೆ ಬರುತ್ತಿದ್ದರೆ ಕೂಡಲೇ ಮಧುಮೇಹ ಪರೀಕ್ಷಿಸಿ. 

ಇದನ್ನೂ ಓದಿ: ಸ್ಪೂನ್‌ ಅಲ್ಲ.. ಕೈಯಿಂದ ಊಟ ಮಾಡಿದ್ರೆ ದೇಹಕ್ಕಿದೆ ಇಷ್ಟೊಂದು ಆರೋಗ್ಯ ಪ್ರಯೋಜನ! 

ಉಗುರು ಮತ್ತು ಕೂದಲು ಕತ್ತರಿಸಿದಾಗ ಅದು ಕೂಡಲೇ ಬೆಳೆಯಲು ಆರಭಿಸುತ್ತವೆ. ಇದು ಕೆಲವೇ ದಿನಗಳಲ್ಲಿ ಬೇಲಯದೇ ಇದ್ದರೆ ಅದು ಮಧುಮೇಹದ ಲಕ್ಷಣವಾಗಿದೆ. ಆದರೆ ಈ ರೀತಿ ರೋಗಲಕ್ಷಣಗಳನ್ನು ಹೊಂದಿರುವವರು ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಇದರೊಂದಿಗೆ ಕೆಲವರಿಗೆ ಆಗಾಗ ಒಣ ಗಂಟಲು ಬಾಯಾರಿಕೆ ಇರುತ್ತದೆ. ಅಂಥವರೂ ಮುನ್ನೆಚ್ಚರಿಕೆ ವಹಿಸಬೇಕು ಎನ್ನುತ್ತಾರೆ ಆರೋಗ್ಯ ತಜ್ಞರು. ಅಲ್ಲದೆ ಕೆಲವರಲ್ಲಿ ಪದೇ ಪದೇ ಕಣ್ಣುಗಳಲ್ಲಿ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ಆದ್ದರಿಂದ ಇದೇ ರೋಗಲಕ್ಷಣಗಳನ್ನು ಹೊಂದಿರುವ ಜನರು ಸಹ ಕಾಳಜಿ ವಹಿಸಬೇಕು.

ಮಧುಮೇಹ ಇರುವವರು ತೆಗೆದುಕೊಳ್ಳಬೇಕಾದ ಪ್ರಮುಖ ಮುನ್ನೆಚ್ಚರಿಕೆಗಳು:

1. ಆಹಾರ ನಿಯಂತ್ರಣ:

ಪೌಷ್ಟಿಕತಜ್ಞರ ಸಲಹೆಯೊಂದಿಗೆ, ನಿಮಗೆ ಸೂಕ್ತವಾದ ಆಹಾರ ಸೇವಿಸುವುದು ಉತ್ತಮ. ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿರುವ ಆಹಾರವನ್ನು ಸೇವಿಸಿ. ಹಣ್ಣುಗಳು, ತರಕಾರಿಗಳು, ಧಾನ್ಯಗಳು, ಕಾಳುಗಳು ಮತ್ತು ನೇರ ಪ್ರೋಟೀನ್‌ಗಳಂತಹ ಹೆಚ್ಚು ಪೌಷ್ಟಿಕ ಆಹಾರಗಳನ್ನು ಸೇವಿಸಿ. ಸಕ್ಕರೆ, ಕಾರ್ಬೋಹೈಡ್ರೇಟ್‌ಗಳು ಮತ್ತು ಕೊಬ್ಬಿನಂಶವಿರುವ ಆಹಾರವನ್ನು ಕಡಿಮೆ ಮಾಡಿ.

2. ದೈಹಿಕ ಚಟುವಟಿಕೆ:

ದಿನಕ್ಕೆ ಕನಿಷ್ಠ 30 ನಿಮಿಷಗಳ ಕಾಲ ವ್ಯಾಯಾಮ ಮಾಡಿ. ವಾಕಿಂಗ್, ಈಜು, ಸೈಕ್ಲಿಂಗ್ ಮುಂತಾದ ಏರೋಬಿಕ್ ವ್ಯಾಯಾಮಗಳು ತುಂಬಾ ಒಳ್ಳೆಯದು. ದೈಹಿಕ ಚಟುವಟಿಕೆಯ ಮಟ್ಟವನ್ನು ಕ್ರಮೇಣ ಹೆಚ್ಚಿಸಿ.

3. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಮೇಲ್ವಿಚಾರಣೆ ಮಾಡಬೇಕು:

ದಿನಕ್ಕೆ ಒಂದು ಅಥವಾ ಎರಡು ಬಾರಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರೀಕ್ಷಿಸಿ. ವೈದ್ಯರ ಜೊತೆಗೆ ಅವರ ದಿನನಿತ್ಯದ ಆಹಾರವನ್ನೂ ತಿಳಿದುಕೊಳ್ಳಬೇಕು. ರಕ್ತದಲ್ಲಿನ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿಲ್ಲದಿದ್ದರೆ, ನಿಮ್ಮ ವೈದ್ಯರು ಚಿಕಿತ್ಸೆಯಲ್ಲಿ ಬದಲಾವಣೆಗಳನ್ನು ಮಾಡಬೇಕಾಗಬಹುದು.

ಇದನ್ನೂ ಓದಿ: High BP: ಬೆಳಗ್ಗೆ ಎದ್ದ ತಕ್ಷಣ ದೇಹದಲ್ಲಿ ಈ 5 ಲಕ್ಷಣಗಳು ಕಾಣಿಸಿಕೊಂಡರೆ ರಕ್ತದೊತ್ತಡ ಹೆಚ್ಚಿದೆ ಎಂದರ್ಥ! 

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News